ಚಿಕ್ಕಬಳ್ಳಾಪುರ ನ್ಯಾಯಾಲಯದ ಕಟ್ಟಡ ಉದ್ಘಾಟಿಸಿದ ಅಟೆಂಡರ್; ಹೈಕೋರ್ಟ್​ ನ್ಯಾಯಮೂರ್ತಿಗಳ ನಡೆಗೆ ಶ್ಲಾಘನೆ

ಮೂಲತಃ ಕೋಲಾರ ತಾಲೂಕಿನ ಈಲಂನವರಾಗಿರುವ ಅಟೆಂಟರ್ ಜಯರಾಜ ತ್ರಿಮೋತಿ ಕಳೆದ 31 ವರ್ಷಗಳಿಂದ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು 1 ವರ್ಷದಲ್ಲಿ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.

ಚಿಕ್ಕಬಳ್ಳಾಪುರ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿದ ಹಿರಿಯ ಅಟೆಂಡರ್

ಚಿಕ್ಕಬಳ್ಳಾಪುರ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿದ ಹಿರಿಯ ಅಟೆಂಡರ್

 • Share this:
  ಚಿಕ್ಕಬಳ್ಳಾಪುರ (ಮಾ. 3): ಚಿಕ್ಕಬಳ್ಳಾಪುರದಲ್ಲಿ 11.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣವನ್ನು ಹಿರಿಯ ಅಟೆಂಡರ್ ಉದ್ಘಾಟನೆ ಮಾಡಿದ್ದಾರೆ. ಅಟೆಂಡರ್ ಕೈಯಲ್ಲಿ ನ್ಯಾಯಾಲಯದ ಕಟ್ಟಡ ಉದ್ಘಾಟನೆ ಮಾಡಿಸಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

  ಈ ನ್ಯಾಯಾಲಯಗಳ ಸಂಕೀರ್ಣವನ್ನು ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳು ಟೇಪ್ ಕಟ್ ಮಾಡುವ ಮೂಲಕ ಉದ್ಘಾಟನೆ ಮಾಡಬೇಕಾಗಿತ್ತು. ಈ ಸಮಾರಂಭಕ್ಕೆ ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ಕೂಡ ಆಗಮಿಸಿದ್ದರು. ಆದರೆ, ನ್ಯಾಯಾಲಯದ ಹಿರಿಯ ಅಟೆಂಡರ್ ಜಯರಾಜ ತ್ರಿಮೋತಿಯವರ ಕೈಯಲ್ಲಿ ಟೇಪ್ ಕಟ್ ಮಾಡಿಸಿ ಲೋಕಾರ್ಪಣೆ ಮಾಡಿಸಲಾಯಿತು.

  ಇದನ್ನೂ ಓದಿ: ಅಮೆರಿಕದಲ್ಲಿ ಕೊರೊನಾ ಸಾವಿನ ಸಂಖ್ಯೆ 6ಕ್ಕೆ ಏರಿಕೆ; ವಿಶ್ವಾದ್ಯಂತ 3,000 ಬಲಿ

  ಸರಳವಾಗಿ ಸಮಾರಂಭ ನಡೆಯಬೇಕೆಂದು ತಾಕೀತು ಮಾಡಿದ್ದ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ, ಪೊಲೀಸರ ಗೌರವ ವಂದನೆಯನ್ನು ಸಹ ಬೇಡವೆಂದು ಮೊದಲೇ ತಿಳಿಸಿದ್ದರು. ನ್ಯಾಯಾಲಯಗಳ ಸಂಕೀರ್ಣದ ಕಟ್ಟಡ ಉದ್ಘಾಟನೆ ವೇಳೆ ಆಡಂಬರ ಪ್ರದರ್ಶನ ಮಾಡಿ ದುಂದುವೆಚ್ಚ ಮಾಡಬೇಡಿ. ವಿನಾಕಾರಣ ಸರ್ಕಾರದ ಹಣ ವ್ಯಯ ಮಾಡಬೇಡಿ ಎಂದು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಹಿರಿಯ ಅಟೆಂಡರ್​ ಕೈಯಲ್ಲಿ ಟೇಪ್ ಕಟ್ ಮಾಡಿಸಿ, ಕಟ್ಟಡ ಉದ್ಘಾಟಿಸಿದರು.

  Senior Attender Inaugurated Chikballapur District Court Complex in front of High court Justice and Minister K sudhakar
  ಚಿಕ್ಕಬಳ್ಳಾಪುರ ನ್ಯಾಯಾಲಯ ಸಂಕೀರ್ಣ


  ಇದನ್ನೂ ಓದಿ: ಹೈದರಾಬಾದ್ ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ಪ್ರಕರಣ; ಹೈದರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ

  ಮೂಲತಃ ಕೋಲಾರ ತಾಲೂಕಿನ ಈಲಂನವರಾಗಿರುವ ಅಟೆಂಟರ್ ಜಯರಾಜ ತ್ರಿಮೋತಿ ಕಳೆದ 31 ವರ್ಷಗಳಿಂದ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು 1 ವರ್ಷದಲ್ಲಿ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಡಿ ದರ್ಜೆ ನೌಕರನಿಂದ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸುವ ಮೂಲಕ ಸರಳತೆ ಮೆರೆದ ಜಿಲ್ಲಾ ಮತ್ತು ಹೈಕೋರ್ಟ್​ ನ್ಯಾಯಮೂರ್ತಿಗಳ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  First published: