ನಾಳೆ ಸಾರಿಗೆ ಮುಷ್ಕರ: 10 ಸಾವಿರ ನೌಕರರಿಂದ ಈಗಾಗಲೇ ರಜೆ ಅರ್ಜಿ

KSRTC And BMTC Employees Strike: ಧರಣಿ ಹಿನ್ನೆಲೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಕೆಲವರ ರಜೆ ರದ್ದು ಮಾಡಲಾಗಿದೆ. ರಜೆ ಪಡೆಯದೆ ಧರಣಿಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

news18-kannada
Updated:February 19, 2020, 4:46 PM IST
ನಾಳೆ ಸಾರಿಗೆ ಮುಷ್ಕರ: 10 ಸಾವಿರ ನೌಕರರಿಂದ ಈಗಾಗಲೇ ರಜೆ ಅರ್ಜಿ
ಕೆಎಸ್​ಆರ್​ಟಿಸಿ
  • Share this:
ಬೆಂಗಳೂರು(ಫೆ. 19): ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ನಾಳೆ ನಡೆಯಲಿರುವ ಧರಣಿಯಲ್ಲಿ ಭಾಗಿಯಾಗಲು ಈಗಾಗಲೇ 10 ಸಾವಿರ ನೌಕರರು ರಜೆ ಅರ್ಜಿ ಸಲ್ಲಿಸಿದ್ದಾರೆ. 

ಸಾರಿಗೆ ಇಲಾಖೆಯ ನಾಲ್ಕು ನಿಗಮ ಮಂಡಳಿಗಳ ನೌಕರರು ಮತ್ತವರ ಕುಟುಂಬವರ್ಗದವರು ನಾಳೆ ನಡೆಯಲಿರುವ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆ. ನಾಲ್ಕು ನಿಗಮ ಮಂಡಳಿಗಳ ಸುಮಾರು 20 ಸಾವಿರಕ್ಕೂ ಹೆಚ್ಚು ನೌಕರರು ಕುಟುಂಬ ಈ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.

ಇನ್ನು ಪ್ರತಿಭಟನೆಯಲ್ಲಿ ಭಾಗಿಯಾಗಲು  ಬಿಎಂಟಿಸಿ ನೌಕರರು ನಿರ್ಧರಿಸಿದ್ದು, ಇದಕ್ಕಾಗಿ ರಜೆ ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ 1.36 ಲಕ್ಷ ನೌಕರರು ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಾಳಿನ ಬಸ್​ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಕೆಎಸ್​ಆರ್​ಟಿಸಿ ಸಿಬ್ಬಂದಿಯವರೂ ಕೂಡ ರಜೆಗೆ ಅರ್ಜಿ ದಾಖಲಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ. ನಾಳೆ ದಿನ ರಜೆ ಹೊಂದಿರುವವರನ್ನು ಹೊರತುಪಡಿಸಿ ಅಗತ್ಯವಿರುವವರಿಗೆ ಮಾತ್ರ ರಜೆ ನೀಡಲಾಗಿದೆ. ನಾಳೆ ಬಹಳಷ್ಟು ಸಿಬ್ಬಂದಿ ರಜೆ ಕೇಳಿದ್ದಾರೆ. ವೈಯಕ್ತಿಕ ಕಾರಣಕ್ಕೆ ಕೆಲವರಿಗೆ ರಜೆ ಕೊಟ್ಟಿದ್ದೇವೆ. ಎಲ್ಲರೂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ ಎಂದು ಕೆಎಸ್​ಆರ್​ಟಿಸಿ  ಎಂಡಿ ಶಿವಯೋಗಿ ಕಳಸದ್ ತಿಳಿಸಿದ್ದಾರೆ.

ಇದನ್ನು ಓದಿ: ಸಾರಿಗೆ ನೌಕರರ ಧರಣಿ; ನಾಳೆ ರಾಜ್ಯದಲ್ಲಿ ಬಸ್ ಸಂಚಾರ ಅನುಮಾನ

ಧರಣಿ ಹಿನ್ನೆಲೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಕೆಲವರ ರಜೆ ರದ್ದು ಮಾಡಲಾಗಿದೆ. ಇನ್ನು, ರಜೆ ಪಡೆಯದೆ ಧರಣಿಯಲ್ಲಿ ಭಾಗಿಯಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
 
First published: February 19, 2020, 4:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading