ಜನ ಸಿಡಿದೆದ್ದು, ರಾಜಕಾರಣಿಗಳನ್ನು ಬೀದಿಯಲ್ಲಿ ಹೊಡೆಯಬೇಕು; ಪ್ರಮೋದ್ ಮುತಾಲಿಕ್ ವಿವಾದ

ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ. ನಿಮಗೆ ತಾಕತ್ ಇದ್ದರೆ ಅರೆಸ್ಟ್ ಮಾಡಿ, ತಡೀರಿ ನೋಡೋಣ ಎಂದು ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • News18
  • Last Updated :
  • Share this:
ಬಾಗಲಕೋಟೆ (ಆ. 10): ಪ್ರವಾಹದ ಸಂದರ್ಭವನ್ನು ಸಮರ್ಪಕವಾಗಿ ನಿರ್ವಹಿಸದ ರಾಜಕಾರಣಿಗಳನ್ನು ಬೀದಿ ಬೀದಿಯಲ್ಲಿ ನಿಲ್ಲಿಸಿ, ಹೊಡೆಯಬೇಕು. ಜನರು ಸಿಡಿದೇಳುವವರೆಗೆ ಇವರು ಸುಧಾರಿಸುವುದಿಲ್ಲ. ರಾಜಕಾರಣಿಗಳು ಪಾಪಿಷ್ಠರು ಎಂದು ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರವಾಹ ನಿರ್ವಹಣೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಪ್ರಮೋದ್ ಮುತಾಲಿಕ್, ಜನರು ಸಿಡಿದೇಳುವ ಮಾನಸಿಕತೆ ನಿರ್ಮಾಣವಾಗಬೇಕು. ಅಂದಾಗ ಮಾತ್ರ ಇವರು ದಾರಿಗೆ ಬರುತ್ತಾರೆ. ಪ್ರವಾಹದಿಂದ ಪ್ರತಿ ವರ್ಷ ಒಂದಿಲ್ಲೊಂದು ಕಡೆ ಎಫೆಕ್ಟ್ ಆಗುತ್ತಿದೆ. ಪ್ರವಾಹದಿಂದ ಎಲ್ಲಿ ತೊಂದರೆ ಆಗುತ್ತದೆ ಎಂಬುದು ಸರ್ಕಾರಕ್ಕೆ ಗೊತ್ತಿರುವ ವಿಷಯ. ಆದರೂ ಯಾಕೆ ಪರ್ಮನೆಂಟ್ ವ್ಯವಸ್ಥೆ ಮಾಡುತ್ತಿಲ್ಲ? ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Mangalore Flood: ಬೆಳ್ತಂಗಡಿಯ ಮಹಾ ಪ್ರವಾಹಕ್ಕೆ ಒಂದು ವರ್ಷ; ಇನ್ನೂ ಹಸನಾಗಿಲ್ಲ ಸಂತ್ರಸ್ತರ ಬದುಕು

ಪ್ರತಿ ಬಾರಿ ರಾಜಕಾರಣಿಗಳು ನಾಟಕ ಮಾಡುತ್ತಾರೆ. ಹಳ್ಳಿ ಶಿಫ್ಟ್ ಮಾಡಬೇಕು, ಸೇತುವೆ ಕಟ್ಟಬೇಕು ಅನ್ನೋದು ನಿಮಗೆ ಗೊತ್ತಿಲ್ವ? ಕೊಯ್ನಾ ನೀರು ಎಲ್ಲಿ ಬರುತ್ತದೆ, ಪ್ರವಾಹ ಎಲ್ಲಿ ಆಗುತ್ತದೆ ಎಂದು ಗೊತ್ತಿಲ್ವ? ಪ್ರತಿ ಬಾರಿ ಸರ್ಕಾರ, ರಾಜಕಾರಣಿಗಳು ಸಗಣಿ ತಿನ್ನುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿಗಳು ಪಾಪಿಷ್ಟರು. ಪ್ರವಾಹ, ಕೊರೊನಾದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಮುತಾಲಿಕ್ ಆರೋಪ ಮಾಡಿದ್ದಾರೆ. ಜನ ಸೂರಿಲ್ಲದೆ, ಮಳೆ, ಚಳಿಯಲ್ಲಿ ಸಾಯುತ್ತಿರುವುದು ನಿಮಗೆ ಕಾಣಿಸುತ್ತಿಲ್ವ? ಲೂಟಿ ಮಾಡುವ ನಿರ್ಲಜ್ಜ ನೀಚರಿವರು ಎಂದು

ಪ್ರತಿ ಸಾರಿ ಸೇತುವೆ ಮುಳುಗುತ್ತದೆ ಎಂದು ಗೊತ್ತಿದ್ದರೂ ಶಾಶ್ವತ ಪರಿಹಾರ ನೀಡುವುದಿಲ್ಲ ಎಂದರೆ ಏನರ್ಥ? ಜನರು ಹೇಗಾದರೂ ಸಾಯಲಿ ಎಂಬುದೇ ಸರ್ಕಾರ, ರಾಜಕಾರಣಿಗಳ ಉದ್ದೇಶ ಎಂದು ರಾಜಕಾರಣಿ, ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

ತಾಕತ್ ಇದ್ರೆ ಅರೆಸ್ಟ್​ ಮಾಡಿ:
ರಾಜ್ಯ ಸರ್ಕಾರ ಮುಂಬರುವ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಬಗ್ಗೆ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಕೊರೊನಾ ನಿಯಮ ಪಾಲಿಸಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡ್ತೀವಿ. ನೀವು ಇನ್ನೂ ಯಾಕೆ ಅಧಿಸೂಚನೆ ಹೊರಡಿಸಿಲ್ಲ? ಸರ್ಕಾರದವರು ಅಧಿಸೂಚನೆ ಹೊರಡಿಸ್ತೀರೋ ಬಿಡ್ತೀರೋ ಗೊತ್ತಿಲ್ಲ. ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ. ನಿಮಗೆ ತಾಕತ್ ಇದ್ದರೆ ಅರೆಸ್ಟ್ ಮಾಡಿ, ತಡೀರಿ ನೋಡೋಣ ಎಂದು ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.

ಸಾರಾಯಿ ಕುಡಿಯೋಕೆ ಅನುಮತಿ ಕೊಡ್ತೀರಿ. ನಿಮಗೆ ದುಡ್ಡು ಬೇಕು, ಜನ ಬೇಕಾದರೆ ಸಾಯಲಿ ಎನ್ನುವುದು ನಿಮ್ಮ ಉದ್ದೇಶ. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸ್ ಅಳವಡಿಸಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡ್ತೀವಿ. ಕೂಡಲೇ ಗೃಹಮಂತ್ರಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಆದೇಶ ಹೊರಡಿಸಬೇಕೆಂದು ಮುತಾಲಿಕ್ ಆಗ್ರಹಿಸಿದರು.
Published by:Sushma Chakre
First published: