ಮಧ್ಯಪ್ರದೇಶದ ಕೈ ಶಾಸಕರು ಕರ್ನಾಟಕದ ರೆಸಾರ್ಟ್​ಗೆ ಶಿಫ್ಟ್​; ಪರಿಸ್ಥಿತಿ ಇನ್ನೂ ಕೈಮೀರಿಲ್ಲ ಎಂದ ಸಿಎಂ

ಬಿಜೆಪಿ ನಾಯಕರಾದ ಶಿವರಾಜ್ ಸಿಂಗ್ ಚೌಹಾಣ್, ರಾಮ್​ಪಾಲ್ ಸಿಂಗ್, ನರೋತ್ತಮ್ ಮಿಶ್ರಾ, ಅರವಿಂದ್ ಭದೌರಿಯಾ, ಸಂಜಯ್ ಪಾಠಕ್ ಒತ್ತಾಯಪೂರ್ವಕವಾಗಿ ನಮ್ಮ ಸರ್ಕಾರದ ಶಾಸಕರನ್ನು ರೆಸಾರ್ಟ್​ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಬಿಜೆಪಿಯ ಆಮಿಷಕ್ಕೆ ಬಲಿಯಾಗದೆ ನಮ್ಮ ಪಕ್ಷದ ಶಾಸಕರು ವಾಪಾಸಾಗುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶ ಸಿಎಂ ಕಮಲ​ನಾಥ್​

ಮಧ್ಯಪ್ರದೇಶ ಸಿಎಂ ಕಮಲ​ನಾಥ್​

  • Share this:
ಬೆಂಗಳೂರು (ಮಾ. 4): ಮಂಗಳವಾರ ರಾತ್ರೋರಾತ್ರಿ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಆಪರೇಷನ್ ಕಮಲದ ಶಾಕ್ ನೀಡಿತ್ತು. ಸ್ಟಾರ್​ ಹೋಟೆಲ್ ಸೇರಿದ್ದ ಕಾಂಗ್ರೆಸ್​ನ 8 ಶಾಸಕರಲ್ಲಿ ನಾಲ್ವರು ವಾಪಾಸ್ ಬಂದಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಹೊಸ ಮಾಹಿತಿ ಹೊರಬಿದ್ದಿದ್ದು, ಕಮಲನಾಥ್ ಸರ್ಕಾರದ ಮೂವರು ಶಾಸಕರನ್ನು ಕರ್ನಾಟಕದ ರೆಸಾರ್ಟ್​ನಲ್ಲಿ ಇರಿಸಲಾಗಿದೆ. ಉಳಿದ ನಾಲ್ವರು ಶಾಸಕರು ಹರಿಯಾಣದ ಬಳಿ ಇರುವ ರೆಸಾರ್ಟ್​ನಲ್ಲಿದ್ದಾರೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ, ಕಾಂಗ್ರೆಸ್​ನ ನಾಲ್ವರು ಶಾಸಕರು ಹರಿಯಾಣದ ಬಳಿ ಇರುವ ಐಟಿಸಿ ಮೌರ್ಯ ಹೋಟೆಲ್​ನಲ್ಲಿದ್ದಾರೆ. ಒಬ್ಬ ಕಾಂಗ್ರೆಸ್ ಮತ್ತು ಇಬ್ಬರು ಪಕ್ಷೇತರ ಶಾಸಕರನ್ನು ಕರ್ನಾಟಕದ ರೆಸಾರ್ಟ್​ನಲ್ಲಿ ಇರಿಸಲಾಗಿದೆ. ಕರ್ನಾಟಕಕ್ಕೆ ಕರೆತಂದಿರುವ ಮೂವರು ಶಾಸಕರನ್ನು ಚಿಕ್ಕಮಗಳೂರಿನ ಬಳಿ ಇರುವ ರೆಸಾರ್ಟ್​ನಲ್ಲಿ ಇರಿಸಲಾಗಿದೆ ಎಂಬ ಮಾಹಿತಿಗಳು ಇದೀಗ ಲಭ್ಯವಾಗುತ್ತಿವೆ. ಆದರೆ, ಈ ಕುರಿತು ಇನ್ನೂ ಖಚಿತತೆ ಇಲ್ಲ.

ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಆರೋಪ ಮಾಡಿದ್ದರು. ಆದರೆ, ಈ ಆರೋಪವನ್ನು ಬಿಜೆಪಿ ನಾಯಕರು ತಳ್ಳಿ ಹಾಕಿದ್ದಾರೆ. ಬಿಜೆಪಿ ನಾಯಕರಾದ ಶಿವರಾಜ್ ಸಿಂಗ್ ಚೌಹಾಣ್, ರಾಮ್​ಪಾಲ್ ಸಿಂಗ್, ನರೋತ್ತಮ್ ಮಿಶ್ರಾ, ಅರವಿಂದ್ ಭದೌರಿಯಾ, ಸಂಜಯ್ ಪಾಠಕ್ ಒತ್ತಾಯಪೂರ್ವಕವಾಗಿ ನಮ್ಮ ಸರ್ಕಾರದ ಶಾಸಕರನ್ನು ರೆಸಾರ್ಟ್​ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಬಿಜೆಪಿಯ ಆಮಿಷಕ್ಕೆ ಬಲಿಯಾಗದೆ ನಮ್ಮ ಪಕ್ಷದ ಶಾಸಕರು ವಾಪಾಸಾಗುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ; ರಾತ್ರೋರಾತ್ರಿ ರೆಸಾರ್ಟ್​ ಸೇರಿದ ಕೈ ಶಾಸಕರು; ಆತಂಕದಲ್ಲಿ ಕಮಲನಾಥ್​

ಇನ್ನು, ಈ ಬಗ್ಗೆ ಹೇಳಿಕೆ ನೀಡಿರುವ ಮಧ್ಯಪ್ರದೇಶ ಸಿಎಂ ಕಮಲನಾಥ್, "ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ. ನಮ್ಮ ಪಕ್ಷದ ಶಾಸಕರು ಎಂದಿಗೂ ನಮಗೆ ನಂಬಿಕೆದ್ರೋಹ ಮಾಡುವುದಿಲ್ಲ. ಅವರು ಕಾಂಗ್ರೆಸ್​ಗೆ ಮರಳುತ್ತಾರೆಂಬ ನಂಬಿಕೆಯಿದೆ" ಎಂದಿದ್ದಾರೆ.

ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 15 ತಿಂಗಳು ಕಳೆದಿವೆ. ಈ ಸರ್ಕಾರ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲೂ ರೆಸಾರ್ಟ್​ ರಾಜಕಾರಣ ನಡೆದಿತ್ತು. ಆದರೆ, ಇತರೆ ಪಕ್ಷಗಳ ಅಭ್ಯರ್ಥಿಗಳ ಸಹಕಾರದಿಂದ ಬಹುಮತ ಪಡೆದು ಕಮಲನಾಥ್​ ಸಿಎಂ ಗದ್ದುಗೆಗೆ ಏರಿದ್ದರು. ಈಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾತ್ರೋರಾತ್ರಿ ನಡೆದ ಈ ಬೆಳವಣಿಗೆಯಿಂದ ಕಮಲನಾಥ್​ ಸರ್ಕಾರಕ್ಕೆ ಆತಂಕ ಎದುರಾಗಿದೆ.

ಇದನ್ನೂ ಓದಿ: Corona Virus: ಕೊರೋನಾ ಮಹಾಮಾರಿ ಭೀತಿ; ಆಂಧ್ರಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿರುವ ಜಗನ್ ಸರ್ಕಾರ

ಮಧ್ಯಪ್ರದೇಶ ವಿಧಾನಸಭೆ 228 ಶಾಸಕರನ್ನು ಒಳಗೊಂಡಿದೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ 114 ಸ್ಥಾನಗಳನ್ನು ಮತ್ತು ಬಿಜೆಪಿ 107 ಸ್ಥಾನಗಳನ್ನು ಪಡೆದಿತ್ತು. ಬಿಎಸ್​ಪಿಯಿಂದ ಇಬ್ಬರು, ಸಮಾಜವಾದಿ ಪಕ್ಷದಿಂದ ಒಬ್ಬರು ಮತ್ತು ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದರು. ಅತ್ಯಂತ ಕಡಿಮೆ ಅಂತರದಿಂದ ಸೋಲು ಕಂಡಿದ್ದ ಬಿಜೆಪಿ ಕಾಂಗ್ರೆಸ್​ ಮತ್ತು ಇತರೆ ಪಕ್ಷದ ಶಾಸಕರನ್ನು ರೆಸಾರ್ಟ್​ ರಾಜಕಾರಣದ ಮೂಲಕ ತನ್ನತ್ತ ಸೆಳೆದು, ಸರ್ಕಾರ ರಚಿಸಲು ತಂತ್ರ ರೂಪಿಸಿತ್ತು. ಆದರೆ, ರೆಸಾರ್ಟ್​ ರಾಜಕೀಯದ ಪ್ಲಾನ್ ಯಶಸ್ಸು ಕಂಡಿರಲಿಲ್ಲ. ಪರಿಣಾಮವಾಗಿ ಕಮಲನಾಥ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು.
First published: