HOME » NEWS » State » KANNADA NEWS NISHANTH SHETTY BROKEN THE RECORD OF SRINIVAS GOWDA BY COVERING 143 METERS IN 13 61 SECONDS IN KAMBALA RMD

Kambala Sports: ಶ್ರೀನಿವಾಸ ಗೌಡರ ದಾಖಲೆ ಮುರಿದ ಮತ್ತೋರ್ವ ಕಂಬಳ ವೀರ ನಿಶಾಂತ್​ ಶೆಟ್ಟಿ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಶ್ರೀನಿವಾಸ ಗೌಡ ಎಂಬುವವರು ಕಂಬಳ ಸ್ಪರ್ಧೆಯಲ್ಲಿ 100 ಮೀಟರ್​ಅನ್ನು ಕೇವಲ 9.55 ಸೆಕೆಂಡ್​ನಲ್ಲಿ ಕ್ರಮಿಸಿದ್ದರು. ಈ ದಾಖಲೆಯ ಓಟಕ್ಕೆ ದೇಶವೇ ನಿಬ್ಬೆರಗಾಗಿತ್ತು.

news18-kannada
Updated:February 18, 2020, 3:16 PM IST
Kambala Sports: ಶ್ರೀನಿವಾಸ ಗೌಡರ ದಾಖಲೆ ಮುರಿದ ಮತ್ತೋರ್ವ ಕಂಬಳ ವೀರ ನಿಶಾಂತ್​ ಶೆಟ್ಟಿ
ಕಂಬಳ ಪ್ರಾತಿನಿಧಿಕ ಚಿತ್ರ
  • Share this:
ಮಂಗಳೂರು (ಫೆ.18): ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆ ಹಿಂದಿಕ್ಕುವ ಮೂಲಕ ಜಾನಪದ ಕ್ರೀಡೆ ಕಂಬಳ ಪಟು ಶ್ರೀನಿವಾಸ ಗೌಡ ಹೊಸ ಸಾಧನೆ ಮಾಡಿದ್ದರು. ಅಚ್ಚರಿ ಎಂದರೆ, ಈಗ ಶ್ರೀನಿವಾಸ್​ ಗೌಡ ಅವರ ದಾಖಲೆಯನ್ನೇ ಮತ್ತೋರ್ವ ಕಂಬಳ ಸ್ಪರ್ಧಿ ಮುರಿಯುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ.

ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಸಾಧನೆ ಮಾಡಿದ ಯುವಕ. ವೇಣೂರಿನ ಪೆರ್ಮುಡ ಕಂಬಳದಲ್ಲಿ ನಿಶಾಂತ್​ ಈ ಸಾಧನೆ ಮಾಡಿದ್ದಾರೆ. 143 ಮೀಟರ್‌ ದೂರವನ್ನು ನಿಶಾಂತ್ ಕೇವಲ 13.61 ಸೆಕೆಂಡ್​​ನಲ್ಲಿ ಓಡಿ ಸಾಧನೆ ಮಾಡಿದ್ದಾರೆ. ಈ ಮೂಲಕ ಶ್ರೀನಿವಾಸ ಗೌಡ ಅವರ ದಾಖಲೆಯನ್ನು ಮುರಿದಿದ್ದಾರೆ.

ನಿಶಾಂತ್ ಶೆಟ್ಟಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬಜಗೋಳಿಯವರು. ಶ್ರೀನಿವಾಸ್ ಗೌಡ 13.62 ಸೆಕೆಂಡ್​ನಲ್ಲಿ 143 ಮೀಟರ್​ ಕ್ರಮಿಸಿದ್ದರು. ಆದರೆ, ನಿಶಾಂತ್ ಗೌಡ ಈ ದೂರವನ್ನು ಕೇವಲ 13.61 ಸೆಕೆಂಡ್​ಗಳಲ್ಲಿ ಓಡಿ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಇಡಿ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಕ್ರೀಡಾ ಸಚಿವರ ಆಹ್ವಾನ ನಿರಾಕರಿಸಿದ ಕಂಬಳ ವೀರ ಶ್ರೀನಿವಾಸ್​ ಗೌಡ; ಕಾರಣವೇನು ಗೊತ್ತಾ?

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಶ್ರೀನಿವಾಸ ಗೌಡ ಎಂಬುವವರು ಕಂಬಳ ಸ್ಪರ್ಧೆಯಲ್ಲಿ 143 ಮೀ. ಓಡುವಾಗ  100 ಮೀಟರ್​ಅನ್ನು ಕೇವಲ 9.55 ಸೆಕೆಂಡ್​ನಲ್ಲಿ ಕ್ರಮಿಸಿದ್ದರು. ಈ ದಾಖಲೆಯ ಓಟಕ್ಕೆ ದೇಶವೇ ನಿಬ್ಬೆರಗಾಗಿತ್ತು. ಅನೇಕರು ಟ್ವಿಟ್ಟರ್​ನಲ್ಲಿ ಶ್ರೀನಿವಾಸ ಗೌಡಗೆ ಹೆಚ್ಚಿನ ತರಬೇತಿ ಸಿಗಬೇಕು ಎಂದು ಬರೆದುಕೊಂಡಿದ್ದರು.

ಈ ಬೆಳವಣಿಗೆ ನಂತರ ಕ್ರೀಡಾ ಸಚಿವ ಕಿರಣ್​ ರಿಜಿಜು ಭಾರತೀಯ ಕ್ರೀಡಾ ಪ್ರಾಧಿಕಾರದ ಉನ್ನತ ತರಬೇತುದಾರರ ಬಳಿಗೆ ಟ್ರಯಲ್ಸ್‌ಗೆ ಬರುವಂತೆ ಶ್ರೀನಿವಾಸ ಗೌಡಗೆ ಆಹ್ವಾನ ನೀಡಿದ್ದರು. ಆದರೆ, ಈ ಆಹ್ವಾನವನ್ನು ಅವರು ವಿನಮ್ರವಾಗಿ ತಿರಸ್ಕರಿಸಿದ್ದರು.
First published: February 18, 2020, 9:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories