HOME » NEWS » State » KANNADA NEWS MANDYA BASAVA MIRACLE LOCATED TEMPLE MONEY THIEF PRIEST SCT

ದೇವರ ಬಸಪ್ಪನಿಂದ ಮಂಡ್ಯದಲ್ಲಿ ಮತ್ತೊಂದು ಪವಾಡ; ದೇವಾಲಯದ ಹುಂಡಿ ಕದ್ದಿದ್ದ ಅರ್ಚಕನ ಪತ್ತೆಮಾಡಿದ ಬಸವ

ಮಂಡ್ಯದ ಜಯಪುರದ ಚಾಮುಂಡೇಶ್ವರಿ ದೇವಾಲಯದ ದೇವರ ಬಸಪ್ಪ ಮಾರಮ್ಮನ ದೇವಾಲಯದಲ್ಲಿ ದೇವರ ಹುಂಡಿ ಕದ್ದಿದ್ದ ದೇವಾಲಯದ ಅರ್ಚಕನನ್ನು ಪತ್ತೆ ಮಾಡಿದ್ದು, ಮನೆಯಲ್ಲಿದ್ದ ಅರ್ಚಕನನ್ನು ಮನೆಯಿಂದ ದೇವಾಲಯದವರೆಗೂ ರಸ್ತೆಯಲ್ಲಿ ತಿವಿಯುತ್ತಾ ಕರೆತಂದು ಜನರ ಮುಂದೆ ನಿಲ್ಲಿಸಿದೆ. 

news18-kannada
Updated:August 6, 2020, 11:21 AM IST
ದೇವರ ಬಸಪ್ಪನಿಂದ ಮಂಡ್ಯದಲ್ಲಿ ಮತ್ತೊಂದು ಪವಾಡ; ದೇವಾಲಯದ ಹುಂಡಿ ಕದ್ದಿದ್ದ ಅರ್ಚಕನ ಪತ್ತೆಮಾಡಿದ ಬಸವ
ದೇವರ ಬಸಪ್ಪನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಅರ್ಚಕ
  • Share this:
ಮಂಡ್ಯ (ಆ. 6): ಇದು  ಅಂತಿಂಥ ಬಸಪ್ಪ ಅಲ್ಲ;  ಸಾಕ್ಷಾತ್ ದೈವಿ ಸ್ಚರೂಪದ ಬಸಪ್ಪ. ಈ ಬಸಪ್ಪ ಯಾವುದೇ ಊರಿಗೆ ಪೂಜೆಗೆ ಹೋದರೂ ಸಮಸ್ಯೆ ಬಗೆಹರಿಸಿ ಅಲ್ಲಿ  ಒಂದಲ್ಲ ಒಂದು ಪವಾಡ ಮಾಡುತ್ತದೆ. ಅದರಂತೆ ಸಕ್ಕರೆನಾಡು ಮಂಡ್ಯದಲ್ಲಿ ಈ ಬಸಪ್ಪ ಮತ್ತೊಂದು ಪವಾಡ ಮಾಡಿದ್ದು, ದೇವರ ಹುಂಡಿ ಕದ್ದಿದ್ದ ಕಳ್ಳನನ್ನು ಪತ್ತೆಮಾಡಿ ಕೊಡುವ ಮೂಲಕ ಗ್ರಾಮಾಸ್ಥರ ಪ್ರೀತಿ  ಪಾತ್ರವಾಗಿದೆ.

ಹೌದು! ಜಯಪುರದ ಚಾಮುಂಡೇಶ್ವರಿ ದೇವಾಲಯದ ದೇವರ ಬಸಪ್ಪ ತನ್ನ ಪವಾಡಗಳ ಮೂಲಕ  ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಪವಾಡಗಳನ್ನು ಮಾಡಿದೆ. ‌ನಾಗಮಂಗಲದ ಜುಟ್ಟನಹಳ್ಳಿ ಗ್ರಾಮದಲ್ಲಿ ಪಾದಪೂಜೆಗೆಂದು‌ ಬಂದಿದ್ದ ಈ ಬಸಪ್ಪ ಗ್ರಾಮಸ್ಥರ ಕೋರಿಕೆ ಮೇರೆಗೆ ಕಳೆದ‌ 2 ತಿಂಗಳಿನಲ್ಲಿ ಊರಿನ ಮಧ್ಯದಲ್ಲಿದ್ದ ಮಾರಮ್ಮನ ದೇವಾಲಯದಲ್ಲಿ ದೇವರ ಹುಂಡಿ ಕದ್ದಿದ್ದ ದೇವಾಲಯದ ಅರ್ಚಕನನ್ನು ಪತ್ತೆ ಮಾಡಿದ್ದು, ಮನೆಯಲ್ಲಿದ್ದ ಅರ್ಚಕನನ್ನು ಮನೆಯಿಂದ ದೇವಾಲಯದವರೆಗೂ ರಸ್ತೆಯಲ್ಲಿ ತಿವಿಯುತ್ತಾ ಕರೆತಂದು  ಜನರ ಮುಂದೆ ನಿಲ್ಲಿಸಿದೆ. ಕದ್ದ ಅರ್ಚಕ ಕೊನೆಗೆ ಬಸಪ್ಪನ  ಕಾಲಿಗೆ ಬಿದ್ದು ತನ್ನ  ತಪ್ಪನ್ನು ಒಪ್ಪಿಕೊಂಡು ಕದ್ದ‌ ದೇವರ ಹುಂಡಿ ಹಣವನ್ನು ಕೊಡುವುದಾಗಿ ಹೇಳಿದ ಮೇಲೆ ಸುಮ್ಮನಾಗಿದೆ. ಬಸಪ್ಪ ಮಾಡಿದ ಈ ಪವಾಡಕ್ಕೆ ಊರಿನ ಜನರು ಮರುಳಾಗಿ ಬಸಪ್ಪನ ಪವಾಡವನ್ನು ಕೊಂಡಾಡಿದ್ದಾರೆ‌.



ಇದನ್ನೂ ಓದಿ: Chikmagalur Rain: ಚಿಕ್ಕಮಗಳೂರಿನಲ್ಲಿ ಮಳೆಯಿಂದ ಗುಡ್ಡ ಕುಸಿತ; ಉಕ್ಕಿ ಹರಿಯುತ್ತಿರುವ ನದಿಗಳು, ರಸ್ತೆಗೆ ಉರುಳಿದ ಮರಗಳು

ಇನ್ನು, ಇದರ ಪವಾಡ ಕಂಡು ಸಾಕಷ್ಟು  ಭಕ್ತರು ಈ ಬಸಪ್ಪನ ಬಳಿ ತಮ್ಮ ಸಮಸ್ಯೆಗಳನ್ನು‌ ಹೇಳಿಕೊಂಡು ಪರಿಹಾರ ಮಾಡಿಕೊಳ್ತಿದ್ದಾರೆ. ಮಾಟ, ಮಂತ್ರ , ಬೋರ್ವೆಲ್ ಪಾಯಿಂಟ್,‌ ಕೋರ್ಟ್ ವಾಜ್ಯ, ದೇವರ‌ಗುಡ್ಡಪ್ಪನ ನೇಮಕ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಈ ಪವಾಡದ ಮೂಲಕ ಈ ಬಸಪ್ಪ ಆಗದ ಕೆಲಸ ವನ್ನು‌ ಸಲೀಸಾಗಿ ಮಾಡಿಕೊಟ್ಟಿದೆ. ಈ ಕಾರಣಕ್ಕಾಗಿ ತಮ್ಮ ಕಷ್ಟ ಹೇಳಿಕೊಂಡು ಸಮಸ್ಯೆಯನ್ನು ಬಗೆಹರಿಸುವಂತೆ ಬಸಪ್ಪನನ್ನು ಊರಿಗೆ ಕರೆಸಿ ಪಾದಪೂಜೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದಾರೆ. ಜುಟ್ಟನಹಳ್ಳಿಯಲ್ಲಿ ದೇಗುಲದ ಕಳ್ಳ ಅರ್ಚಕನನ್ನು  ಪತ್ತೆ ಮಾಡಿಕೊಟ್ಟ ತಮ್ಮ ಈ ಬಸಪ್ಪನ ಪವಾಡದ ಬಗ್ಗೆ  ಇದನ್ನು ನೋಡಿಕೊಳ್ಳುತ್ತಿರುವ ದೇವರ ಗುಡ್ಡಪ್ಪ ಸುಖೇಶ್ ಹೆಮ್ಮೆಯಿಂದ ಈ ಬಸಪ್ಪ  ನಿಜಕ್ಕೂ ದೈವೀ ಸ್ವರೂಪವಿದೆ ಅಂತಾರೆ.

ಒಟ್ಟಾರೆ ಈ ಜಯಪುರದ ಬಸಪ್ಪ ತನ್ನ ಪವಾಡಗಳ ಮೂಲಕವೇ ಸಾಕಷ್ಟು ಪ್ರಸಿದ್ದಿ ಪಡೆದಿದೆ. ಹೋದ ಕಡೆ ಜನರ ಕಷ್ಟ ಬಗೆಹರಿಸಿ ದೈವೀ ಸ್ವರೂಪದ ಬಸಪ್ಪ ಎಂದೇ ಖ್ಯಾತಿ ಪಡೆದಿದ್ದು, ಜಿಲ್ಲೆಯ  ಭಕ್ತ ಜನರಲ್ಲಿ ದೇವರ ಬಸಪ್ಪನಾಗಿದ್ದು, ಒಂದಲ್ಲ ಒಂದು ಪವಾಡದ ಮೂಲಕ ಗಮನ ಸೆಳೆಯುತ್ತಿದೆ.
Published by: Sushma Chakre
First published: August 6, 2020, 11:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories