Kolar: 800 ವರ್ಷದ ಇತಿಹಾಸವುಳ್ಳ ಶ್ರೀನಿವಾಸಪುರದ ಕಲ್ಯಾಣಿಗೆ ಮರುಜನ್ಮ; ಸಂಸದರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ

800 ವರ್ಷ ಇತಿಹಾಸವಿರೊ  ಕೋದಂಡರಾಮಸ್ವಾಮಿ ಕಲ್ಯಾಣಿಯಲ್ಲಿ ಸ್ಥಳೀಯರು ಕಸದ ರಾಶಿಯನ್ನೆ ತುಂಬಿಸಿದ್ದು,  ಮನೆಗಳಲ್ಲಿನ ಚರಂಡಿಗಳ ನೀರನ್ನು ಕಲ್ಯಾಣಿಗೆ ಬಿಡಲಾಗುತ್ತಿತ್ತು.

ಕಲ್ಯಾಣಿ ಸ್ವಚ್ಛಗೊಳಿಸುತ್ತಿರುವುದು

ಕಲ್ಯಾಣಿ ಸ್ವಚ್ಛಗೊಳಿಸುತ್ತಿರುವುದು

  • Share this:
ಕೋಲಾರ (ಜು. 2): ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಯ್ದೂರು ಗ್ರಾಮದ ಐತಿಹಾಸಿಕ ಕೋದಂಡರಾಮಸ್ವಾಮಿ ಕಲ್ಯಾಣಿಯಲ್ಲಿ ಜೊಂಡು ಗಿಡಗಳು ತುಂಬಿ ಗಬ್ಬು ನಾರುತ್ತಿದ್ದು, ಅಲ್ಲದೆ ಸುತ್ತಲು ಗಿಡ ಗಂಟೆಗಳು ದಟ್ಟವಾಗಿ ಬೆಳೆದು,  ಕಲ್ಯಾಣಿಯು ಸ್ತಳೀಯರ ಕಸದ ಬುಟ್ಟಿಯಾಗಿ  ಮಾರ್ಪಾಡಾಗಿತ್ತು. ಇದನ್ನ ಗಮನಿಸಿದ ಸಂಸದ ಮುನಿಸ್ವಾಮಿ, ಸ್ವಯಂ ಪ್ರೇರಿತವಾಗಿ ಕಲ್ಯಾಣಿ ಸ್ವಚ್ಚ ಮಾಡುವ ಕಾರ್ಯಕ್ರಮಕ್ಕೆ ಕರೆ ನೀಡಿದ್ದರು. ಜೂನ್ 30ರಂದು ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದ್ದು,  ಜುಲೈ 1 ರಂದು ಸ್ವಚ್ಚತಾ ಕಾರ್ಯ ಮುಗಿದಿದೆ. ಎರಡೇ ದಿನಕ್ಕೆ ಕಲ್ಯಾಣಿಯಲ್ಲಿದ್ದ ಜೊಂಡು ಗಿಡಗಳು ತೆರವು ಮಾಡಲಾಗಿದ್ದು, ಸುತ್ತ ಮುತ್ತಲ ಪ್ರದೇಶವೂ ಅಚ್ಚುಕಟ್ಟಾಗಿ ಕಾಣುವಂತಾಗಿದೆ‌.

ಮೊದಲ ದಿನ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ಸ್ವಚ್ಚತಾ ಕಾರ್ಯಕ್ರಮದಲ್ಲಿ  ಬಿಜೆಪಿ ಮುಖಂಡರು, ಸ್ವಯಂ ಸೇವಕರು, ಗ್ರಾಮದ ಯುವಕರು  ಭಾಗಿಯಾದರು. ಸ್ವಚ್ಚತಾ ಕಾರ್ಯಕ್ಕಾಗಿ ಎರಡು ಬೋಟ್, ಎರಡು ಜೆಸಿಬಿ ಹಾಗು 10 ಕ್ಕು ಹೆಚ್ಚು ಟ್ಯಾಕ್ಟರ್ ಬಳಸಲಾಗಿದೆ. ಕಲ್ಯಾಣಿ ಶುಚಿತ್ವ ನಂತರ ಅಭಿವೃದ್ದಿ ಪಡಿಸಿ, ಗ್ರಾಮ ಪಂಚಾಯಿತಿ ಜೊತೆಗೆ ಚರ್ಚೆ ನಡೆಸಿ, ಮುಂದೆ  ಅಂತರ್ಜಲ ಮಟ್ಟ ವೃದ್ದಿಯಾಗಲು ಕಾರ್ಯಕ್ರಮ ಹಮ್ಮಿಕೊಂಡು ಕಲ್ಯಾಣಿಗೆ ಹೊಸರೂಪ ನೀಡುವುದಾಗಿ ಸಂಸದ ಮುನಿಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಟಾಯ್ಲೆಟ್​ನಲ್ಲೇ ಹೆರಿಗೆ; ಮಗು ಹುಟ್ಟಿದ ಕೂಡಲೇ ಹೊಡೆದು ಕೊಂದ ತಾಯಿ!

ಎರಡೇ ದಿನಕ್ಕೆ ಸ್ವಚ್ಚತಾ ಕಾರ್ಯ  ಮುಕ್ತಾಯ:

800 ವರ್ಷ ಇತಿಹಾಸವಿರೊ  ಕೋದಂಡರಾಮಸ್ವಾಮಿ ಕಲ್ಯಾಣಿಯಲ್ಲಿ ಸ್ಥಳೀಯರು ಕಸದ ರಾಶಿಯನ್ನೆ ತುಂಬಿಸಿದ್ದು,  ಮನೆಗಳಲ್ಲಿನ ಚರಂಡಿಗಳ ನೀರನ್ನು ಕಲ್ಯಾಣಿಗೆ ಬಿಡಲಾಗುತ್ತಿತ್ತು. ಜೋರು ಮಳೆ ಬಂದರೆ ಮಾತ್ರ ಕಲ್ಯಾಣಿಗೆ ನೀರು ಹರಿಯುತ್ತಿದ್ದು, ಜೊಂಡು ಗಿಡಗಳು ಸಂಪೂರ್ಣವಾಗಿ  ಆವರಿಸಿದ್ದರಿಂದ ಕಲ್ಯಾಣಿಯಲ್ಲಿ ನೀರು ವೇಗವಾಗಿ ಖಾಲಿಯಾಗುತ್ತಿತ್ತು. ಇನ್ನು   ಜೊಂಡು ಗಿಡಗಳನ್ನ ತೆರವು ಮಾಡಲು ಸ್ವಚ್ಚತಾ ಕಾರ್ಯದಲ್ಲಿದ್ದವರು ಹರಸಾಹಸ ಪಡಬೇಕಾಯಿತು. ನಾಲ್ಕು ತಂಡಗಳಾಗಿ ಕೆಲಸ ಮಾಡಿದ ಸ್ವಯಂ ಸೇವಕರು ಎರಡೇ ದಿನಕ್ಕೆ ಸ್ಚಚ್ಚತೆಯನ್ನ ಮುಗಿಸಿದ್ದಾರೆ.

Kolar District Srinivasapur People Cleaned 800 years old Kalyani with BJP MP Muniswamy Initiative.
ಕಲ್ಯಾಣಿ ಅಂದು- ಇಂದು


ಸಂಸದ ಮುನಿಸ್ವಾಮಿ ಬೋಟ್ ಏರಿ ಜೊಂಡು ಗಿಡಗಳನ್ನ ತೆರವು ಮಾಡುತ್ತಿದ್ದರೆ, ಅತ್ತ ಯುವಕರ ತಂಡ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಚತೆ ಮಾಡುತ್ತಿದ್ದರು. ಜೊತೆಗೆ ಕಲ್ಯಾಣಿಯಲ್ಲಿ ಶೇಖರಣೆಯಾದ ತ್ಯಾಜ್ಯವನ್ನ ಸಾಗಿಸಲು ಜೆಸಿಬಿ, ಹಾಗೂ ಟ್ರಾಕ್ಟರ್ ಗಳನ್ನ ಬಳಸಲಾಗಿದ್ದು, ಇದರ ವೆಚ್ಚವನ್ನು ಸಂಸದ ಮುನಿಸ್ವಾಮಿ ಅವರು ಭರಿಸಿದ್ದಾರೆ. ಇದೀಗ ಕಲ್ಯಾಣಿಯು ಸ್ವಚ್ಚವಾಗಿದ್ದು,  ಹಲವು ವರ್ಷಗಳಿಂದ ಕಣ್ಮರೆಯಾಗಿದ್ದ ಕಲ್ಯಾಣಿಯ ಬಾಹ್ಯ  ಸೌಂದರ್ಯ ಮತ್ತೆ ಕಾಣುತ್ತಿದೆ.  ಸ್ವಚ್ಚತಾ ಕಾರ್ಯ ಹಮ್ಮಿಕೊಂಡಿದ್ದ ಸಂಸದರ ಕಾರ್ಯವನ್ನ ಶ್ರೀನಿವಾಸಪುರದ ಯಲ್ದೂರು ಗ್ರಾಮಸ್ತರು ಕೊಂಡಾಡಿದ್ದು, ಸಾಮಾಜಿಕ ಜಾಲತಾಣದಲ್ಲು ಮೆಚ್ಚುಗೆ ವ್ಯಕ್ತವಾಗಿದೆ.

ಒಟ್ಟಿನಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಸಂಸದ ಮುನಿಸ್ವಾಮಿ ಹೆಚ್ಚು ಮಹತ್ವ ನೀಡುತ್ತಿದ್ದು, ಈ ಹಿಂದೆ ಆರಂಭಿಸಿರುವ ಕೆರೆಗಳನ್ನ ಅಭಿವೃದ್ಧಿ ಕಾರ್ಯ ಮುಂದುವರೆಸಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಅಂತರ್ಜಲದ ಮೂಲವಾಗಿರುವ ಕೆರೆ, ಕುಂಟೆ, ಕಲ್ಯಾಣಿಗಳನ್ನ ಅಭಿವೃದ್ಧಿ ಮಾಡಿ ಮುಂದಿನ ಪೀಳಿಗೆಗಾಗಿ ಅಂತರ್ಜಲ ಮಟ್ಟವನ್ನ ಉಳಿಸೋಣ ಎಂಬ ಸಂದೇಶವನ್ನ ಸಂಸದರು ನೀಡಿದ್ದಾರೆ.
Published by:Sushma Chakre
First published: