• Home
  • »
  • News
  • »
  • state
  • »
  • ಸೂಪರ್ ಸಿಎಂ ಯಾರೂ ಇಲ್ಲ; ಯಡಿಯೂರಪ್ಪ ಪ್ರಶ್ನಾತೀತ ನಾಯಕ: ಸಚಿವ ವಿ ಸೋಮಣ್ಣ

ಸೂಪರ್ ಸಿಎಂ ಯಾರೂ ಇಲ್ಲ; ಯಡಿಯೂರಪ್ಪ ಪ್ರಶ್ನಾತೀತ ನಾಯಕ: ಸಚಿವ ವಿ ಸೋಮಣ್ಣ

ವಿ. ಸೋಮಣ್ಣ

ವಿ. ಸೋಮಣ್ಣ

ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಮುಖ್ಯಮಂತ್ರಿಗಳನ್ನು ಬದಲಾವುದನ್ನು ನೋಡಿದ್ದೇನೆ. ಯಡಿಯೂರಪ್ಪ ಜನಪ್ರಿಯ ನಾಯಕ. ಅವರು ಗುಡುಗಿದರೆ ವಿಧಾನಸಭೆ ನಡುಗುತ್ತದೆ

  • Share this:

ಬಳ್ಳಾರಿ(ಫೆ. 25): 42 ವರ್ಷದ  ನನ್ನ ರಾಜಕೀಯ ಜೀವನದಲ್ಲಿ ಏಳು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಆದರೆ ಯಡಿಯೂರಪ್ಪ ಪ್ರಶ್ನಾತೀತ ನಾಯಕರು. ಅವರಿರುವಾಗ ಯಾರೂ ಸೂಪರ್​ ಸಿಎಂ ಇಲ್ಲ ಎಂದು ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. 


ಸರ್ಕಾರದಲ್ಲಿ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರ ಹಸ್ತಕ್ಷೇಪ ಹೆಚ್ಚಾಗಿರುವ ಕುರಿತ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. ಉತ್ತರಾಧಿಕಾರಿಯೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.


ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಮುಖ್ಯಮಂತ್ರಿಗಳನ್ನು ಬದಲಾವುದನ್ನು ನೋಡಿದ್ದೇನೆ. ಯಡಿಯೂರಪ್ಪ ಜನಪ್ರಿಯ ನಾಯಕ. ಅವರು ಗುಡುಗಿದರೆ ವಿಧಾನಸಭೆ ನಡುಗುತ್ತದೆ ಎಂದರು.


ನನ್ನ ರಾಜಕೀಯ ಅನುಭವಕ್ಕೆ ಸಣ್ಣ ವಸತಿ ಇಲಾಖೆ ನೀಡಿದ್ದು ಬೇಸರವಿತ್ತು. ಆದರೆ ಜನರ ಕೆಲಸ‌ ಮಾಡುವ ಇಲಾಖೆ ಸಾಕು ಎಂಬುದು ನನ್ನ ಇಚ್ಛೆ. ನನಗೆ ಸಿಎಂ ಆಗುವ ಯಾವುದೇ ಉದ್ದೇಶವಿಲ್ಲ. ಯಡಿಯೂರಪ್ಪ ಅವರೇ ಮೂರುವರೆ ವರ್ಷ ಸಿಎಂ ಆಗಿರಲಿದ್ದು, ಸರ್ಕಾರ ಸ್ಥಿರವಾಗಿರಲಿದೆ ಎಂದರು.


ಇದನ್ನು ಓದಿ: ಸಾಗರ ಮಾರಿಕಾಂಬೆಗೆ ಬಾಗಿನ ಅರ್ಪಿಸಿದ ರಾಜಮಾತೆ ಪ್ರಮೋದಾ ದೇವಿ ಒಡೆಯರ್​​


ಬಿಜೆಪಿ ಶಾಸಕ ರಾಜೀನಾಮೆ ವಿಚಾರ ಕುರಿತು ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಣ್ಣ, ಅವರನ್ನು 45 ವರ್ಷಗಳಿಂದ ನೋಡಿದ್ದೇನೆ. ಇಬ್ರಾಹಿಂ ಯಾವಾತ್ತಾದ್ರೂ ಒಳ್ಳೆಯದು ಹೇಳಿದ್ದಾರಾ? ಸ್ವಲ್ಪ ನೆಶೆ ಪುಡಿ ಜಾಸ್ತಿ ಹಾಕಿ ಹೇಳಿಕೆ ನೀಡಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

Published by:Seema R
First published: