ಮಗು ದತ್ತು ಪಡೆಯುವ ಮಹಿಳಾ ನೌಕರರಿಗೂ 6 ತಿಂಗಳು ರಜೆ; ಸರ್ಕಾರದ ಹೊಸ ಆದೇಶ

ಗರ್ಭ ಧರಿಸುವ ಮಹಿಳೆಯರಿಗೆ ಮಾತೃತ್ವ ರಜೆ ನೀಡುವಂತೆ ಇನ್ನುಮುಂದೆ ಮಗುವನ್ನು ದತ್ತು ತೆಗೆದುಕೊಳ್ಳುವ ಸರ್ಕಾರಿ ನೌಕರರಿಗೂ 6 ತಿಂಗಳು ಮಾತೃತ್ವ ರಜೆಯನ್ನು ನೀಡಲಾಗುತ್ತದೆ. ಮಗುವನ್ನು ದತ್ತು ತೆಗೆದುಕೊಳ್ಳುವ ಪುರುಷರಿಗೂ 15 ದಿನಗಳ ಪಿತೃತ್ವ ರಜೆ ಸಿಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಫೆ. 20): ದೇಶದಲ್ಲಿ ಮಕ್ಕಳನ್ನು ದತ್ತುಪಡೆಯುವ ಪೋಷಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕೆಲಸದ ಒತ್ತಡ, ಬದಲಾಗುತ್ತಿರುವ ಜೀವನಶೈಲಿಯಿಂದ ಅನೇಕರಲ್ಲಿ ಬಂಜೆತನ ಕಾಡುತ್ತಿದೆ. ಇಂಥವರು ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆಯಲು ಮುಂದಾಗುತ್ತಿದ್ದಾರೆ. ಇನ್ನು ಕೆಲವರು ಸ್ವಂತ ಮಗುವನ್ನು ಮಾಡಿಕೊಳ್ಳಲು ಇಷ್ಟವಿಲ್ಲದೆ ಚಿಕ್ಕ ಮಗುವನ್ನು ದತ್ತು ಪಡೆಯುತ್ತಿದ್ದಾರೆ. ಸ್ವಂತ ಮಗುವಾದರೆ ಮೆಟರ್ನಿಟಿ ರಜೆ (ಹೆರಿಗೆ ರಜೆ) ಸಿಗುತ್ತದೆ. ಆದರೆ, ದತ್ತು ಪಡೆದ ಮಗುವನ್ನು ನೋಡಿಕೊಳ್ಳಲು ರಜೆ ಸಿಗುವುದಿಲ್ಲವಲ್ಲ ಎಂದು ಕೊರಗುವವರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ.

  ಗರ್ಭ ಧರಿಸುವ ಮಹಿಳೆಯರಿಗೆ ಮಾತೃತ್ವ ರಜೆ ನೀಡುವಂತೆ ಇನ್ನುಮುಂದೆ ಮಗುವನ್ನು ದತ್ತು ತೆಗೆದುಕೊಳ್ಳುವ ಸರ್ಕಾರಿ ನೌಕರರಿಗೂ 6 ತಿಂಗಳು ಮಾತೃತ್ವ ರಜೆಯನ್ನು ನೀಡಲಾಗುತ್ತದೆ. ಜೊತೆಗೆ, ಮಗುವನ್ನು ದತ್ತು ತೆಗೆದುಕೊಳ್ಳುವ ಪುರುಷರಿಗೂ 15 ದಿನಗಳ ಪಿತೃತ್ವ ರಜೆ ಸಿಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಮಕ್ಕಳನ್ನು ದತ್ತು ಪಡೆಯುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

  ಇದನ್ನೂ ಓದಿ: ಜೈಲಿನಲ್ಲಿ ನಿರ್ಭಯಾ ಅತ್ಯಾಚಾರಿಯ ಹೈಡ್ರಾಮ; ಗೋಡೆಗೆ ತಲೆ ಚಚ್ಚಿಕೊಂಡ ಅಪರಾಧಿ

  ಮಹಿಳಾ ನೌಕರರಿಗೆ ಎರಡು ಮಗುವಿನವರೆಗೆ 6 ತಿಂಗಳ ಕಾಲ ಹೆರಿಗೆ ರಜೆ ಪಡೆಯುವ ಅವಕಾಶವಿದೆ. ಅದೇರೀತಿ ಪುರುಷ ಕೂಡ ತನ್ನ ಹೆಂಡತಿಯ ಹೆರಿಗೆಯ ಪ್ರಾರಂಭದಲ್ಲಿ 15 ದಿನಗಳ ಕಾಲ ಪಿತೃತ್ವ ರಜೆಯನ್ನು ಪಡೆಯಲು ಅವಕಾಶವಿದೆ. ಈ ಸೌಲಭ್ಯವನ್ನು ಮಗುವನ್ನು ದತ್ತು ತೆಗೆದುಕೊಂಡ ಸರ್ಕಾರಿ ನೌಕರರಿಗೂ ನೀಡುವಂತೆ ಹಲವು ದಿನಗಳಿಂದ ಒತ್ತಾಯ ಕೇಳಿಬಂದಿತ್ತು. ಕೇಂದ್ರ ಸರ್ಕಾರ ಈಗಾಗಲೇ ಈ ಆದೇಶವನ್ನು ಜಾರಿಗೆ ತಂದಿದೆ. ಇದೀಗ ರಾಜ್ಯ ಸರ್ಕಾರ ಕೂಡ ದತ್ತು ಮಕ್ಕಳ ಪೋಷಕರಿಗೂ ಮಾತೃತ್ವ ಮತ್ತು ಪಿತೃತ್ವ ರಜೆಯನ್ನು ನೀಡಲು ಆದೇಶಿಸಿದೆ.

  ಇದನ್ನೂ ಓದಿ: ನಡುರಾತ್ರಿ ಆಗುಂಬೆ ಘಾಟ್​ನಲ್ಲಿ ನಿಂತಿತ್ತು ಹೆಣ್ಣುಮಗು!; ಕೊನೆಗೂ ಬಯಲಾಯ್ತು ರಹಸ್ಯ

  ಈ ಆದೇಶದ ಅನ್ವಯ, ಮಕ್ಕಳನ್ನು ದತ್ತು ಪಡೆಯುವ ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳ ಮಾತೃತ್ವ ರಜೆ ಮತ್ತು ಪುರುಷ ನೌಕರರಿಗೆ 15 ದಿನಗಳ ಪಿತೃತ್ವ ರಜೆ ನೀಡಲಾಗುವುದು. ಇಬ್ಬರು ಮಕ್ಕಳನ್ನು ದತ್ತು ಪಡೆಯುವವರೆಗೆ ಮಾತ್ರ ಈ ಸೌಲಭ್ಯ ಅನ್ವಯವಾಗಲಿದೆ.

  ಮಗುವನ್ನು ಯಾವ ದಿನಾಂಕದಂದು ದತ್ತು ಪಡೆಯುತ್ತೀರೋ ಆ ದಿನದಿಂದ ರಜೆ ಅನ್ವಯವಾಗಲಿದೆ. ದತ್ತು ಪಡೆದಿರುವುದಕ್ಕೆ ಸೂಕ್ತ ದಾಖಲಾತಿಗಳನ್ನು ಸಲ್ಲಿಸಿದರೆ ಮಾತ್ರ ರಜೆ ಮಂಜೂರಾಗಲಿದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ದತ್ತು ಪಡೆದರೆ ಈ ಸೌಲಭ್ಯ ಅನ್ವಯವಾಗುವುದಿಲ್ಲ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
  First published: