ಬಡತನ, ನಿರುದ್ಯೋಗ ಮರೆಮಾಚಲು ಯಾವ ತಡೆಗೋಡೆ ಕಟ್ಟಿಸುತ್ತೀರಿ?; ಮೋದಿಗೆ ಕುಮಾರಸ್ವಾಮಿ ಪ್ರಶ್ನೆ

ಫೆ.24ಕ್ಕೆ ಗುಜರಾತ್​​ನ ಅಹಮದಾಬಾದ್​ಗೆ ಬಂದಿಳಿಯುವ ಟ್ರಂಪ್​, ಅಲ್ಲಿಂದ ಸಬರಮತಿ ಆಶ್ರಮಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಮಾರ್ಗಮಧ್ಯೆ ಸಾಕಷ್ಟು ಸ್ಲಂ ಪ್ರದೇಶಗಳಿವೆ. ಟ್ರಂಪ್​ ಕಣ್ಣಿಗೆ ಈ ಸ್ಲಂ ಏರಿಯಾಗಳು ಕಾಣದಂತೆ ಭಾರೀ ಎತ್ತರದ ಗೋಡೆಗಳನ್ನು ಕಟ್ಟಲಾಗುತ್ತಿದೆ. ಸುಮಾರು 500 ಮೀಟರ್​ ಉದ್ದದ ಗೋಡೆ ಕಾಮಗಾರಿ ಈಗಾಗಲೇ ನಡೆಯುತ್ತಿದೆ.

news18-kannada
Updated:February 18, 2020, 3:35 PM IST
ಬಡತನ, ನಿರುದ್ಯೋಗ ಮರೆಮಾಚಲು ಯಾವ ತಡೆಗೋಡೆ ಕಟ್ಟಿಸುತ್ತೀರಿ?; ಮೋದಿಗೆ ಕುಮಾರಸ್ವಾಮಿ ಪ್ರಶ್ನೆ
ಮೋದಿ-ಎಚ್​ಡಿಕೆ
  • Share this:
ಬೆಂಗಳೂರು(ಫೆ.18): ಇದೇ ತಿಂಗಳಾಂತ್ಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾರತಕ್ಕೆ ಆಗಮಿಸುತ್ತಿದ್ಧಾರೆ. ಫೆಬ್ರವರಿ 24ಕ್ಕೆ ಅಹಮದಾಬಾದ್​ಗೆ ಬಂದಿಳಿಯುವ ಟ್ರಂಪ್​ ಅವರಿಗೆ ಭವ್ಯ ಸ್ವಾಗತ ಕೋರಲು ಪ್ರಧಾನಿ ಮೋದಿ ಸಜ್ಜಾಗಿದ್ದಾರೆ. ಇದರ ಜೊತೆಗೆ ಗುಜರಾತ್​ನ ಅಹಮದಾಬಾದ್​ನಲ್ಲಿ ಸ್ಲಂಗಳು ಕಾಣದ ಹಾಗೆ ಬೃಹತ್ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ.  ಈ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಧಾನಿ ಮೋದಿ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. 

ಸರಣಿ ಟ್ವೀಟ್​ ಮಾಡಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಎಚ್​ಡಿಕೆ, ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. "ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಭಾರತಕ್ಕೆ ಭೇಟಿ ನೀಡುವ ವೇಳೆ ಅಹಮದಾಬಾದ್​​​ನ ಸ್ಲಂಗಳು ಕಾಣದಂತೆ ಪ್ರಧಾನಿ ಮೋದಿಯವರು ಎತ್ತರದ ಗೋಡೆಗಳನ್ನು ಕಟ್ಟಿಸುತ್ತಿದ್ದಾರಂತೆ! ಆದರೆ ಅಧಃಪತನಕ್ಕೆ ಕುಸಿದಿರುವ ದೇಶದ ಆರ್ಥಿಕತೆ ಕಾಣಿಸದಂತೆ ಮೋದಿ ಅವರು ಯಾವ ಗೋಡೆ ಕಟ್ಟುತ್ತಾರೆ?," ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

 
ಮತ್ತೊಂದು ಟ್ವೀಟ್​ ಮಾಡಿರುವ ಎಚ್​ಡಿಕೆ, "ದೇಶವ್ಯಾಪಿ ಭುಗಿಲೆದ್ದಿರುವ ಸಿಎಎ ವಿರೋಧಿ ಹೋರಾಟ ಕಾಣಿಸದಂತೆ ಯಾವ ಭದ್ರಕೋಟೆ ನಿರ್ಮಿಸುತ್ತಾರೆ? ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ನಿರುದ್ಯೋಗ ಸಮಸ್ಯೆ ಮರೆಮಾಚಲು ಯಾವ ತಡೆಗೋಡೆ ನಿರ್ಮಿಸುತ್ತಾರೆ? ಮೋದಿ ಅವರೇ ಉತ್ತರಿಸುವಿರಾ?," ಎಂದು ಕೇಳಿದ್ದಾರೆ.

ಹುಲಿಯಾಗೆ ಜೈ ಎಂದ ಸಿಂಹ; ಸಿದ್ದರಾಮಯ್ಯ ಕೆಲಸಕ್ಕೆ ಸಾಹೇಬ್ರು ಎಂದು ಹೇಳಿ ಪ್ರತಾಪ್‌ಸಿಂಹ ಮೆಚ್ಚುಗೆ

 ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಮಾಡಲಿದ್ದಾರೆ. ಫೆ.24ಕ್ಕೆ ಗುಜರಾತ್​​ನ ಅಹಮದಾಬಾದ್​ಗೆ ಬಂದಿಳಿಯುವ ಟ್ರಂಪ್​, ಅಲ್ಲಿಂದ ಸಬರಮತಿ ಆಶ್ರಮಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಮಾರ್ಗಮಧ್ಯೆ ಸಾಕಷ್ಟು ಸ್ಲಂ ಪ್ರದೇಶಗಳಿವೆ. ಟ್ರಂಪ್​ ಕಣ್ಣಿಗೆ ಈ ಸ್ಲಂ ಏರಿಯಾಗಳು ಕಾಣದಂತೆ ಭಾರೀ ಎತ್ತರದ ಗೋಡೆಗಳನ್ನು ಕಟ್ಟಲಾಗುತ್ತಿದೆ. ಸುಮಾರು 500 ಮೀಟರ್​ ಉದ್ದದ ಗೋಡೆ ಕಾಮಗಾರಿ ಈಗಾಗಲೇ ನಡೆಯುತ್ತಿದೆ.

ಚೀನಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ; ಭಾರತದಲ್ಲಿ ಔಷಧಗಳ ಬೆಲೆಯಲ್ಲಿ ಭಾರೀ ಏರಿಕೆ

ಬಿಜೆಪಿ ಸರ್ಕಾರದ ಈ ಕಾರ್ಯ ವೈಖರಿಯನ್ನು ವಿಪಕ್ಷ ನಾಯಕರು ಟೀಕಿಸಿದ್ದಾರೆ. ದೇಶದ ಜ್ವಲಂತ ಸಮಸ್ಯಗಳಾದ ಬಡತನ, ನಿರುದ್ಯೋಗ ಸಮಸ್ಯೆಗಳನ್ನು ನಿರ್ಮೂಲನೆ ಮಾಡುವ ಬದಲು, ರಾಷ್ಟ್ರದ ವಾಸ್ತವಾಂಶವನ್ನು ಮರೆಮಾಚುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.  ಕೊಳಗೇರಿಗಳು ಕಾಣದಂತೆ ಪ್ರಧಾನಿ ಮೋದಿ ಈ ಗೋಡೆ ಕಟ್ಟಿಸುತ್ತಿದ್ದಾರೆ. ಆದರೆ ಕುಸಿದಿರುವ ಭಾರತದ ಆರ್ಥಿಕತೆ ಮುಚ್ಚಲು ಯಾವ ಗೋಡೆ ಕಟ್ಟಿಸುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
First published:February 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ