ಫ್ರಾನ್ಸ್​, ಇಂಗ್ಲೆಂಡ್ ಹಿಂದಿಕ್ಕಿ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಿದ ಭಾರತ!

Indian Economy: 2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವನ್ನಾಗಿ ಮಾಡಬೇಕು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗುರಿಯಾಗಿದೆ. ಈ ನಿಟ್ಟಿನಲ್ಲಿ ಈ ಬೆಳವಣಿಗೆ ಪ್ರಮುಖ ಹೆಜ್ಜೆಯಾಗಿದೆ.

news18-kannada
Updated:February 18, 2020, 4:21 PM IST
ಫ್ರಾನ್ಸ್​, ಇಂಗ್ಲೆಂಡ್ ಹಿಂದಿಕ್ಕಿ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಿದ ಭಾರತ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಫೆ. 18): ಫ್ರಾನ್ಸ್ ಹಾಗೂ ಇಂಗ್ಲೆಂಡ್ ದೇಶಗಳನ್ನು ಹಿಂದಿಕ್ಕುವ ಮೂಲಕ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಿರುವ ಭಾರತ ಆರ್ಥಿಕ ಅಭಿವೃದ್ಧಿಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ.

ಈ ಬಗ್ಗೆ ಆರ್ಥಿಕ ಚಿಂತಕರು ‘ವರ್ಲ್ಡ್‌ ಪಾಪ್ಯುಲೇಷನ್‌ ರಿವ್ಯೂ’ನಲ್ಲಿ ವರದಿ ಮಾಡಿದ್ದಾರೆ. 2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವನ್ನಾಗಿ ಮಾಡಬೇಕು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗುರಿಯಾಗಿದೆ. ಈ ನಿಟ್ಟಿನಲ್ಲಿ ಈ ಬೆಳವಣಿಗೆ ಪ್ರಮುಖ ಹೆಜ್ಜೆಯಾಗಿದೆ.

208.74 ಲಕ್ಷ ಕೋಟಿ ರೂ. ಮೊತ್ತದ ಜಿಡಿಪಿ ಇರುವ ಭಾರತ 200 ಲಕ್ಷ ಕೋಟಿ ರೂ. ಜಿಡಿಪಿ ಹೊಂದಿರುವ ಇಂಗ್ಲೆಂಡ್‌ ಹಾಗೂ 192 ಲಕ್ಷ ಕೋಟಿ ರೂ. ಜಿಡಿಪಿ ಇರುವ ಫ್ರಾನ್ಸ್‌ ದೇಶವನ್ನು ಆರ್ಥಿಕವಾಗಿ ಹಿಂದಿಕ್ಕಿದೆ. ಭಾರತದ ನೈಜ ಜಿಡಿಪಿ ಬೆಳವಣಿಗೆ ಸತತ 3ನೇ ವರ್ಷವೂ ಶೇ 7.5ರಿಂದ ಶೇ 5ಕ್ಕೆ ಕುಸಿದಿದೆ. ಆದರೆ, ಕರೆನ್ಸಿಗಳ ಖರೀದಿ ಸಾಮರ್ಥ್ಯದ ಆಧಾರದಲ್ಲಿ ಜಿಡಿಪಿ 735.7 ಲಕ್ಷ ಕೋಟಿ ರೂ. ಇದ್ದು, ಜಪಾನ್‌ ಮತ್ತು ಜರ್ಮನಿಗಿಂತ ಹೆಚ್ಚಿದೆ.

ಇದನ್ನೂ ಓದಿ: 6 ತಿಂಗಳಲ್ಲಿ 50 ಸಾವು; ಈ ಊರಲ್ಲಿ ಹುಣ್ಣಿಮೆ- ಅಮಾವಾಸ್ಯೆಯಂದೇ ನಡೆಯುತ್ತೆ ಆ್ಯಕ್ಸಿಡೆಂಟ್!

ಇದು 2019ನೇ ಸಾಲಿನ ಆರ್ಥಿಕ ಬೆಳವಣಿಗೆಯ ವರದಿಯಾಗಿದ್ದು, ಇದನ್ನು ಪ್ರಕಟಿಸಿರುವ ವರ್ಲ್ಡ್​ ಪಾಪ್ಯುಲೇಷನ್ ರಿವ್ಯೂ ಸ್ವತಂತ್ರ ಸಂಸ್ಥೆಯಾಗಿದೆ. ಹೀಗಾಗಿ, ಇದು ಯಾವುದೇ ಪಕ್ಷದ ಪ್ರಭಾವದಿಂದ ಸಿದ್ಧವಾದ ವರದಿಯಲ್ಲ ಎನ್ನಲಾಗಿದೆ. ಭಾರತದ ಆರ್ಥಿಕತೆಯಲ್ಲಿ ಶೇ. 60ರಷ್ಟು ಸೇವಾ ವಲಯ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಉತ್ಪಾದನೆ ಮತ್ತು ಕೃಷಿ ವಲಯ ಕೂಡ ಆರ್ಥಿಕತೆಯ ಪ್ರಮುಖ ಭಾಗಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
First published: February 18, 2020, 12:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading