ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿದರೆ ರಾಜಕೀಯ ನಿವೃತ್ತಿ; ಈಶ್ವರಪ್ಪಗೆ ಹೆಚ್​.ಡಿ. ರೇವಣ್ಣ ಸವಾಲ್

ಈಶ್ವರಪ್ಪನವರಿಗೆ ಗೌರವ ಇದ್ದರೆ ದಾಖಲೆ ಸಮೇತ ಹೇಳಿಕೆ ನೀಡಲಿ. ಅಂದು ಗಾಂಧೀಜಿಯವರು ಹೋರಾಡಿ ದೇಶದಿಂದ ಬ್ರಿಟೀಷರನ್ನು ಓಡಿಸಿದಂತೆ ನಾವು ಬಿಜೆಪಿ ಸರ್ಕಾರವನ್ನು ತೆಗೆಯಲೇಬೇಕು ಎಂದು ಹೆಚ್​.ಡಿ. ರೇವಣ್ಣ ಕಿಡಿಕಾರಿದರು.

news18-kannada
Updated:July 29, 2020, 8:39 PM IST
ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿದರೆ ರಾಜಕೀಯ ನಿವೃತ್ತಿ; ಈಶ್ವರಪ್ಪಗೆ ಹೆಚ್​.ಡಿ. ರೇವಣ್ಣ ಸವಾಲ್
ಎಚ್​.ಡಿ. ರೇವಣ್ಣ
  • Share this:
ಹಾಸನ (ಜು. 29): ನಾನು ಭ್ರಷ್ಟಾಚಾರ ಮಾಡಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಚಿವ ಕೆ.ಎಸ್​. ಈಶ್ವರಪ್ಪನವರಿಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಬಹಿರಂಗ ಸವಾಲ್ ಹಾಕಿದ್ದಾರೆ.

​ ​ನಾನು ಭ್ರಷ್ಟಾಚಾರ ಮಾಡಿರುವುದಾಗಿ ಈಶ್ವರಪ್ಪ ಮಾತನಾಡಿದ್ದಾರೆ. ಸಿಎಂ ಯಡಿಯೂರಪ್ಪನವರ ಸರಕಾರದಲ್ಲಿ ನಡೆದಿರುವ ಭ್ರಷ್ಟಚಾರದ ಬಗ್ಗೆ ಒಂದೊಂದಾಗಿ ದಾಖಲೆ ಬಿಚ್ಚಿಡುತ್ತೇನೆ. ಸಮಯ ಬಂದಾಗ ಹೇಳುತ್ತೇನೆ. 12 ತಿಂಗಳಲ್ಲಿ ಏನೇನು ಕೆಲಸ ಮಾಡಿದ್ದಾರೆ ನಾಚಿಕೆಯಾಗಬೇಕು. ಒಂದೊಂದು ಅಧಿಕಾರಿಗಳ ವರ್ಗಾವಣೆಗೆ ಎಷ್ಟೆಷ್ಟು ಹಣ ಪಡೆದಿದ್ದಾರೆ ಎಂಬುದು ನನಗೆ ಗೊತ್ತು. ವಿಧಾನಸಭೆ ಅಧಿವೇಶನ ಕರೆಯಲಿ, ದಾಖಲೆ ಸಮೇತ ಭ್ರಷ್ಟಾಚಾರದ ಬಗ್ಗೆ ಎಳೆ ಎಳೆಯಾಗಿ ಇಡುತ್ತೇನೆ ಎಂದು ಎಚ್​.ಡಿ. ರೇವಣ್ಣ ಗುಡುಗಿದ್ದಾರೆ.

ಇಂತಹ ಹೇಳಿಕೆ ಕೊಡುವ ಮೊದಲು ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಈಶ್ವರಪ್ಪನವರಿಗೆ ಗೌರವ ಇದ್ದರೆ ದಾಖಲೆ ಸಮೇತ ಹೇಳಿಕೆ ಕೊಡಲು ಸಲಹೆ ನೀಡಿದರು. ಜೀವನದಲ್ಲಿ ವರ್ಗಾವಣೆಗೆ ನಾನು ಹಣ ಪಡೆದಿರುವುದಾಗಿ ಹೇಳಿದರೆ ಇವತ್ತೇ ರಾಜಕೀಯಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಖಾರವಾಗಿ ನುಡಿದ ಅವರು ನನ್ನ ಸವಾಲಿಗೆ ಈಶ್ವರಪ್ಪನವರು ಸಿದ್ದರಿದ್ದಾರಾ? ಎಂದು ಮರುಪ್ರಶ್ನೆ ಹಾಕಿದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಯುವಕರ ಕಲಹ ಕೊಲೆಯಲ್ಲಿ ಅಂತ್ಯ; ಪ್ರೀತಿಗಾಗಿ ಸ್ನೇಹಿತನನ್ನೇ ಕೊಂದ ಕಿರಾತಕರು

​ ಇಡೀ ದೇಶದಲ್ಲಿ ಬ್ರಿಟಿಷ್ ಸರ್ಕಾರ ಆಡಳಿತದಲ್ಲಿದ್ದು, ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಂದು ಗಾಂಧೀಜಿಯವರು ಹೋರಾಡಿ ದೇಶದಿಂದ ಬ್ರಿಟೀಷರನ್ನು ಓಡಿಸಿದಂತೆ ನಾವು ಬಿಜೆಪಿ ಸರ್ಕಾರವನ್ನು ತೆಗೆಯಲೇಬೇಕು ಎಂದು ಖಾರವಾಗಿ ನುಡಿದರು. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ನನ್ನ ಬಗ್ಗೆ ಮಾತನಾಡಿದರೆ ನಾನು ಸುಮ್ಮನೆ ಕೂರುವವನಲ್ಲ. ಎಲ್ಲವನ್ನೂ ಎಳೆ ಎಳೆಯಾಗಿ ಸಂದರ್ಭ ಬಂದಾಗ ಬಿಚ್ಚಿಡಬೇಕಾಗುತ್ತದೆ ಎಂದು ಕಿಡಿಕಾರಿದರು.

ಇಡೀ ರಾಜ್ಯದಲ್ಲಿ ನಗರಸಭೆ, ಪುರಸಭೆ ಚುನಾವಣೆ ನಡೆದು ಎರಡು ವರ್ಷಗಳಾದರೂ ಇನ್ನೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿಲ್ಲ ಎಂದರೆ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಇತಿಹಾಸದಲ್ಲಿ ಇದೇ ಮೊದಲು ಚುನಾವಣೆ ನಡೆದು 2 ವರ್ಷವಾದರೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿಲ್ಲ, ಈ ರೀತಿ ಕೆಲಸ ಮಾಡೋದಕ್ಕೆ ಚುನಾವಣಾ ಆಯೋಗ ಏಕೆ ಬೇಕು? ಅವರಿಗೊಂದು ಗೂಟದ ಕಾರು ಬೇರೆ! ಕಳೆದ 12 ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಬಿಜೆಪಿಯವರು ಯಾವ ನೈತಿಕತೆ ಇಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಜನರ ಬಳಿ ಬಂದು ಮತ ಕೇಳುತ್ತಾರೆ ಎಂದು ರೇವಣ್ಣ ಕಿಡಿಕಾರಿದರು.

ಇದನ್ನೂ ಓದಿ: ಗೌರವಧನ ಹೆಚ್ಚಳಕ್ಕಾಗಿ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಬೀದಿಗಿಳಿದ ಆಶಾ ಕಾರ್ಯಕರ್ತೆಯರುರಾಜ್ಯದ ಜನತೆ ಈ ಸರ್ಕಾರಕ್ಕೆ ಬುದ್ದಿ ಕಲಿಸಬೇಕೆಂದರೆ ಈ ಸರ್ಕಾರವನ್ನು ಉರುಳಿಸಬೇಕು.  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಒಂದು ವರ್ಷ ಕಳೆದಿದೆ. ವಿಧಾನಸಭೆಯಲ್ಲಿ ಸಿಎಂ ಕುಳಿತು ನಾನು ಯಾವ ಧ್ವೇಷದ ರಾಜಕಾರಣ ಮಾಡುವುದಿಲ್ಲ, ಎಲ್ಲಾರನ್ನು ಸಮನಾಗಿ ಕಂಡು ಎಲ್ಲಾ ಅಭಿವೃದ್ಧಿ ಕೆಲಸ ಮಾಡುವುದಾಗಿ ಹೇಳಿದ್ದರು. ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿ ನೋಡಿದರೇ ಇನ್ನು ಧ್ವೇಷದ ರಾಜಕಾರಣ ಬಿಟ್ಟಿಲ್ಲದಂತೆ ಕಾಣುತ್ತಿದೆ ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದರು.

ಹಾಸನ-ಬೇಲೂರು-ಚಿಕ್ಕಮಗಳೂರು ರೈಲ್ವೆ ಕಾಮಗಾರಿಗೆ 462 ಕೋಟಿಗೆ ಅಪ್ರೂವಲ್ ಆಗಿದೆ. ಅನುದಾನ ಬಿಡುಗಡೆ ಕೇಂದ್ರ ಮತ್ತು ರಾಜ್ಯ ಸರಕಾರ ಅರ್ಧ ಭಾಗ ಹಣ ಹಾಕಲು ಸಚಿವ ಸಂಪುಟದಲ್ಲಿ ನಿರ್ಧಾರವಾಗಿತ್ತು ಎಂದರು. ಕೊರೋನಾ ವೇಲೆ ತಮ್ಮ ಪ್ರಾಣವನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸಿರುವ ಆಶಾ ಕಾರ್ಯಕರ್ತೆಯರಿಗೆ ಸರಕಾರದಿಂದ ಹಣ ನೀಡಿರುವುದಿಲ್ಲ. ಕ್ಷೌರಿಕರಿಗೆ ಯಾರಿಗು ಸರಿಯಾಗಿ ಹಣ ನೀಡಿರುವುದಿಲ್ಲ. ಇಂತಹ ಭ್ರಷ್ಟ ಸರಕಾರವನ್ನು ಎಂದು ನೋಡಿಲ್ಲ ಎಂದು ಹೆಚ್​.ಡಿ. ರೇವಣ್ಣ ಕಿಡಿಕಾರಿದರು.
Published by: Sushma Chakre
First published: July 29, 2020, 8:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading