ನಾನು ಪಕ್ಷ ಬಿಡಲಿ ಅಂತ ಕಾಯುತ್ತಿದ್ದಾರೆ; ದೇವೇಗೌಡ, ಎಚ್​ಡಿಕೆ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಜಿಟಿಡಿ

ಇಂದಿನ ಸಭೆಗೆ ಆಹ್ವಾನ‌ ನೀಡಿರಲಿಲ್ಲ. ನನ್ನನ್ನು ಕ್ಯಾರೆ ಅನ್ನಬೇಡಿ ಅಂತ ವರಿಷ್ಠರು ಹೇಳಿರಬಹುದು. ನಾನು ಹೋಗುತ್ತೇನಾ ಅಂತ ಚೆಕ್ ಮಾಡೋಕಾದ್ರು ನನ್ನ ಕರೆದಿಲ್ಲ. ಹಾಗಂತ ನಾನು ಪಕ್ಷ ಬಿಡ್ತಿನಿ ಅಂತ ಎಲ್ಲಿಯೂ ಹೇಳಿಲ್ಲ. ಉಳಿದ ಅವಧಿಯಲ್ಲಿ ನಾನು ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

HR Ramesh | news18-kannada
Updated:September 13, 2019, 9:49 AM IST
ನಾನು ಪಕ್ಷ ಬಿಡಲಿ ಅಂತ ಕಾಯುತ್ತಿದ್ದಾರೆ; ದೇವೇಗೌಡ, ಎಚ್​ಡಿಕೆ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಜಿಟಿಡಿ
ಜಿ.ಟಿ. ದೇವೇಗೌಡ
HR Ramesh | news18-kannada
Updated: September 13, 2019, 9:49 AM IST
ಮೈಸೂರು: ಮೈಸೂರಿನಲ್ಲಿ ಸಾ.ರಾ.ಸಾಮ್ರಾಜ್ಯ ಕಟ್ಟಲು ನನ್ನನ್ನು ದೂರ ಇಟ್ಟಿದ್ದಾರೆ. ನಾನಿದ್ದರೆ ಅವರಿಗೆ ಸಾ.ರಾ.ಮಹೇಶ್ ಬೆಳೆಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ನಾನು ಪಕ್ಷ ಬಿಡಲಿ ಅಂತ ಕಾಯುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್​ ಹಿರಿಯ ಮುಖಂಡ ಜಿ.ಟಿ.ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ.

ಮೈಸೂರಿನಲ್ಲಿ ನ್ಯೂಸ್‌18 ಕನ್ನಡದೊಂದಿಗೆ ಮಾತಾನಡಿದ ಜಿ.ಟಿ.ದೇವೇಗೌಡ ಅವರು,  ದೇವೇಗೌಡರು ನನ್ನ ರಾಜಕೀಯ ಗುರು ಅಂತ ನಾನು ಎಲ್ಲಿಯೂ ಹೇಳಿಲ್ಲ. ಆ ಮಾತು ನನ್ನ ಬಾಯಿಂದ ಬಂದಿದ್ದರೆ ನಾನು ಮಾತ್ರ ಅಲ್ಲ, ನನ್ನ ಇಡೀ ಕುಟುಂಬ ರಾಜಕೀಯದಿಂದ ದೂರ ಇರುತ್ತೇವೆ. ದೇವೇಗೌಡರೇ ನಿಮ್ಮ‌ ಮಾತನ್ನು ಜನ ನಂಬುತ್ತಾರೆ. ದಯಮಾಡಿ ಸತ್ಯ ಹೇಳಿ ಎಂದು ದೇವೇಗೌಡರಿಗೆ ಜಿಟಿಡಿ ಮನವಿ‌ ಮಾಡಿದರು.

ಸಮ್ಮಿಶ್ರ ಸರ್ಕಾರದ ವೇಳೆ ನಾನು ಒಂದು ತಿಂಗಳು ಖಾತೆ ತೆಗೆದುಕೊಳ್ಳದೆ ಸುಮ್ಮನಿದ್ದೆ.  ಇನ್ನು ಸುಮ್ಮನಿದ್ದಿದ್ದರೆ ಸಾ.ರಾ.ಮಹೇಶ್‌ನನ್ನು ಉಸ್ತುವಾರಿ ಮಾಡುತ್ತಿದ್ದರು. ಅದಕ್ಕಾಗಿ ಖಾತೆ ತೆಗೆದುಕೊಂಡೆ. ಸಹಕಾರಿ ರುಚಿ ತೋರಿಸಿದೆ ಅಂತ ಕುಮಾರ‌ಸ್ವಾಮಿ ಹೇಳಿದ್ದಾರೆ.  ಅವರು ರುಚಿ ತೋರಿಸುವ ಮುನ್ನವೇ ನಾನು ಸಹಕಾರಿ ಕ್ಷೇತ್ರದಲ್ಲಿ ಇದ್ದೆ. ದಸರಾವನ್ನು 1995ರಲ್ಲೇ ನೋಡಿದ್ದೇನೆ. ಆಗಲೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿ ಕುದುರೆ ಮೇಲೆ‌ ಕುಳಿತಿದ್ದೆ. ದಸರಾ ಅನುಭವ ಇರೋದಕ್ಕೆ ನನ್ನ ಬಳಿ ಸಲಹೆ ಕೇಳ್ತಾರೆ ಎಂದು ಎಚ್​.ಡಿ.ಕುಮಾರಸ್ವಾಮಿಗೆ ಟಾಂಗ್​ ನೀಡಿದರು.

ಇದನ್ನು ಓದಿ: ಜೆಡಿಎಸ್ ಚಿಂತನ ಸಭೆಗೆ ಜಿಟಿಡಿ ಗೈರು; ನಿಮ್ಮ ಕಣ್ಮುಂದೆಯೇ ಪಕ್ಷ ಕಟ್ಟಿ ಔತಣ ಕೊಡಿಸ್ತೀವಿ ಎಂದು ಹೆಚ್​ಡಿಡಿ ಸವಾಲು

ನಾನು ಪಕ್ಷ ಬಿಡಲ್ಲ, ಚಾಮುಂಡೇಶ್ವರಿ ಕ್ಷೇತ್ರದ ಜನರಿಗಾಗಿ ಯಾರ ಬಳಿ ಬೇಕಾದ್ರು ಹೋಗ್ತಿನಿ. ಇಂದಿನ ಸಭೆಗೆ ಆಹ್ವಾನ‌ ನೀಡಿರಲಿಲ್ಲ. ನನ್ನನ್ನು ಕ್ಯಾರೆ ಅನ್ನಬೇಡಿ ಅಂತ ವರಿಷ್ಠರು ಹೇಳಿರಬಹುದು. ನಾನು ಹೋಗುತ್ತೇನಾ ಅಂತ ಚೆಕ್ ಮಾಡೋಕಾದ್ರು ನನ್ನ ಕರೆದಿಲ್ಲ. ಹಾಗಂತ ನಾನು ಪಕ್ಷ ಬಿಡ್ತಿನಿ ಅಂತ ಎಲ್ಲಿಯೂ ಹೇಳಿಲ್ಲ. ಉಳಿದ ಅವಧಿಯಲ್ಲಿ ನಾನು ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ವಿಶೇಷ ವರದಿ: ಪುಟ್ಟಪ್ಪ

First published:September 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...