ವೈದ್ಯಕೀಯ ತ್ಯಾಜ್ಯಗಳನ್ನು ಸುರಕ್ಷಿತವಾಗಿ ಸುಡಲು ದೇಸಿ ಯಂತ್ರ; ದಾವಣಗೆರೆಯಲ್ಲೊಂದು ಆವಿಷ್ಕಾರ

ಈ ಯಂತ್ರದಲ್ಲಿ 500ರಿಂದ 600 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಬಿಸಿಗಾಳಿಯಿಂದ ಪಿಪಿಇ ಡ್ರೆಸ್​ ಅನ್ನು ಸುರಕ್ಷಿತವಾಗಿ ಸುಡಬಹುದಾಗಿದೆ. ದಿವಾಕರ್ 4 ವರ್ಷದ ಹಿಂದೆ ವೈದ್ಯಕೀಯ ತ್ಯಾಜ್ಯ ಸುಡುವಂತಹ ಯಂತ್ರಗಳನ್ನು ತಯಾರಿಕೆ ಮಾಡಿದ್ದರು.

news18-kannada
Updated:August 2, 2020, 7:37 PM IST
ವೈದ್ಯಕೀಯ ತ್ಯಾಜ್ಯಗಳನ್ನು ಸುರಕ್ಷಿತವಾಗಿ ಸುಡಲು ದೇಸಿ ಯಂತ್ರ; ದಾವಣಗೆರೆಯಲ್ಲೊಂದು ಆವಿಷ್ಕಾರ
ವೈದ್ಯಕೀಯ ಉಪಕರಣಗಳನ್ನು ಸುಡುವ ಯಂತ್ರದ ಜೊತೆಗೆ ದಿವಾಕರ್
  • Share this:
ದಾವಣಗೆರೆ (ಆ. 2): ದೇಶದ ಪ್ರಧಾನಿ ನರೇಂದ್ರ ಮೋದಿ ದೇಶಿಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚು ಮಾಡಲು ತಂದಿರುವ ಆತ್ಮನಿರ್ಭರ್ ಯೋಜನೆಗೆ ಇಲ್ಲೊಬ್ಬರು ಅದಕ್ಕೆ ಸಾಕ್ಷಿ ಎಂಬಂತೆ ಒಂದು ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ. ಅದೂ ಕೂಡ ಕೊರೊನಾ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಬಳಸುವ ಪಿಪಿಇ ಕಿಟ್ ಯಾರಿಗೂ ತೊಂದರೆಯಾಗದಂತೆ ಕಡಿಮೆ ಅವಧಿಯಲ್ಲಿ ಅವುಗಳನ್ನು  ಪರಿಸರಸ್ನೇಹಿಯಾಗುವ ರೀತಿಯಲ್ಲಿ ತಯಾರಿಸಿದ್ದಾರೆ.

ಹೀಗೆ ಯಂತ್ರವನ್ನು ತೋರಿಸಿ ಇದರ ಬಗ್ಗೆ ಹೇಳುತ್ತಿರುವವರು ದಿವಾಕರ್ ಅಂತ ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಇರುವ ಈಶ್ವರ್ ಎಂಟರ್​ಪ್ರೈಸೆಸ್ ಎಂಬ ಕಾರ್ಖಾನೆ ಹೊಂದಿದ್ದಾರೆ. ವೈದ್ಯಕೀಯ ತ್ಯಾಜ್ಯಗಳನ್ನ ಸುರಕ್ಷಿತವಾಗಿ ಸುಡಲು ದೇಸಿ ಯಂತ್ರವನ್ನು ಅಭಿವೃದ್ದಿಪಡಿಸಿದ್ದಾರೆ. 2016ರಲ್ಲಿ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ಆವಿಷ್ಕಾರ ಮಾಡಿದ್ದ ಯಂತ್ರವನ್ನು ಇದೀಗ ಕೋವಿಡ್ - 19 ಸೋಂಕಿನಿಂದ ಕಾಪಾಡಲು ಬಳಸುವ ಪಿಪಿಇ ಕಿಟ್​ಗಳನ್ನು ಪರಿಸರಸ್ನೇಹಿಯಾಗಿ ಸುಡುವ ಯಂತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ದಿವಾಕರ್.

ಇದನ್ನೂ ಓದಿ: Amit Shah: ಕೇಂದ್ರ ಗೃಹ ಸಚಿವ ಅಮಿತ್​ ಶಾಗೂ ಕೊರೋನಾ ಪಾಸಿಟಿವ್, ಆಸ್ಪತ್ರೆಗೆ ದಾಖಲು

ಈ ಯಂತ್ರದಲ್ಲಿ 500ರಿಂದ 600 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಬಿಸಿಗಾಳಿಯಿಂದ ಪಿಪಿಇ ಡ್ರೆಸ್​ ಅನ್ನು ಸುರಕ್ಷಿತವಾಗಿ ಸುಡಬಹುದಾಗಿದೆ. ದಿವಾಕರ್ 4 ವರ್ಷದ ಹಿಂದೆ ವೈದ್ಯಕೀಯ ತ್ಯಾಜ್ಯ ಸುಡುವಂತಹ ಯಂತ್ರಗಳನ್ನು ತಯಾರಿಕೆ ಮಾಡಿದ್ದರು. ಇದರ ಬಗ್ಗೆ ದಾವಣಗೆರೆಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಮಿಷನ್ ಟೆಸ್ಟ್ ನಡೆಸಿರುವ ಬಗ್ಗೆ ಪ್ರಮಾಣಪತ್ರ ಪಡೆದು, 2019ರಲ್ಲಿ ಪೇಟೆಂಟ್ ಪಡೆದಿದ್ದಾರೆ. ಈಗಾಗಲೇ ದಾವಣಗೆರೆಯ ಎರಡು ತಾಲ್ಲೂಕಿನ ಆರೋಗ್ಯ ಕೇಂದ್ರದಲ್ಲಿ ಈ ಹಿಂದೆ ತಯಾರು ಮಾಡಿದ್ದ ಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದೀಗ ಪಿಪಿಇ ಕಿಟ್ ಸುಡಲು ಉನ್ನತ ತಂತ್ರಜ್ಞಾನದ ಯಂತ್ರವನ್ನು ಡೇಮೋಗಾಗಿ ತಯಾರಿಸಿದ್ದಾರೆ.

ಇದನ್ನೂ ಓದಿ: ಕೊಡಗಿನಲ್ಲಿ ತೀವ್ರಗೊಂಡ ಮಳೆ; ನಾಳೆ ಯೆಲ್ಲೋ ಅಲರ್ಟ್ ಘೋಷಣೆ

ದಿವಾಕರ್ ಇಂಜಿನಿಯರಿಂಗ್ ಮೊದಲ ವರ್ಷ ಮುಗಿದ ನಂತರ ತಂದೆ ಅಸುನೀಗಿದ ಹಿನ್ನೆಲೆ ವಿದ್ಯಾಭ್ಯಾಸ ಮೊಟಕುಗೊಳಿಸಿ ತಮ್ಮ ತಂದೆಯ ರೇಡಿಯೋ ಅಂಗಡಿಯನ್ನು ನೋಡಿಕೊಳ್ಳಲು ಪ್ರಾರಂಭಿಸಿದರು. ನಂತರ ಏನಾದರೂ ಹೊಸ ಆವಿಷ್ಕಾರ ಮಾಡಲು ಮುಂದಾಗಿ ವೈದ್ಯಕೀಯ ತ್ಯಾಜ್ಯ ಸುಡುವ ಉಪಕರಣ ತಯಾರು ಮಾಡಲು ಮುಂದಾಗಿದ್ದಾರೆ. ಈ ಹೊಸ ಯಂತ್ರ ವಿದ್ಯುತ್ ಮಿತವ್ಯಯವಾಗಿದ್ದು ಸಿಂಗಲ್ ಫೇಸ್ ವೋಲ್ಟೇಜಿನಲ್ಲಿ ಕಾರ್ಯ ನಿರ್ವಹಿಸಲಿದೆಯಂತೆ. ಗಾಳಿಯಲ್ಲಿರುವ ಆಮ್ಲಜನಕವನ್ನು ಸುಡಲು ಬೇಕಾಗುವ ಆವಿಯಿಂದ ತ್ಯಾಜ್ಯ ಸುಡುವಾಗ ಕಡಿಮೆ ಕಾರ್ಬನ್ ಡೈ ಆಕ್ಸೈಡ್ ಹೊರಹೊಮ್ಮುತ್ತದೆ.
ನಂತರ ಆ ವಸ್ತು ನೀರಿನಲ್ಲಿ ಡ್ರೈ ಆಗಿ ರೀ ಯ್ಯೂಸ್ ಮಾಡಬಹುದಾಗಿದೆಯಂತೆ. ಅಲ್ಲದೆ, ಇದರಿಂದ ಅತ್ಯಂತ ಅಪಾಯಕಾರಿಯಾದ ಕಾರ್ಬನ್ ಮೊನಾಕ್ಸೈಡ್ ಕಡಿಮೆ ಇರುತ್ತದೆ, ಹಾಗಾಗಿ ಇಂದು ಉಳಿದ ಯಂತ್ರಗಳಿಗೆ ಹೋಲಿಕೆ ಮಾಡಿದರೆ ತುಂಬ ಉತ್ತಮವಾಗಿದೆ ಎನ್ನುತ್ತಾರೆ ದಿವಾಕರ್. ಈ ಉಪಕರಣ ಸದ್ಯ ಮಾರುಕಟ್ಟೆಗೆ ಇನ್ನೂ ಬಂದಿಲ್ಲ. ಅಲ್ಲದೆ ಪ್ರಚಾರವನ್ನು ನೀಡಿಲ್ಲ. ಆಸ್ಪತ್ರೆಗಳನ್ನು ಬಸ್ ನಿಲ್ದಾಣದಲ್ಲಿ, ಹಾಸ್ಟೆಲ್ ಗಳಲ್ಲಿ, ಸಿನಿಮಾ, ಇನ್ನಿತರೆ ಜನವಸತಿ ಪ್ರದೇಶದಲ್ಲಿ ಈ ಯಂತ್ರವನ್ನು ಬಳಸಬಹುದಾಗಿದೆ. ಒಟ್ಟಾರೆ ದಿವಾಕರ್ ಮಾಡಿರುವ ಈ ಯಂತ್ರ ಪರಿಸರಸ್ನೇಹಿಯಾಗಿ ವೈದ್ಯಕೀಯ ಕೇಂದ್ರಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಬೇಗನೆ ಸುಡುವ ರೀತಿಯಲ್ಲಿ ಉಪಯೋಗಿಸಲು ಯಾರೆಲ್ಲ ಬಳಕೆ ಮಾಡುತ್ತಾರೆ ಎಂದು ಕಾದು ನೋಡಬೇಕಾಗಿದೆ.
Published by: Sushma Chakre
First published: August 2, 2020, 7:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading