ದಸರೆ ಬಳಿಕ ಫುಟ್ಬಾಲ್​ ಆಟದಲ್ಲಿ ಗಜಪಡೆ; ದುಬಾರೆಯಲ್ಲಿ ಆನೆಗಳ ಮೋಜಿಗೆ ಪ್ರವಾಸಿಗರು ಫಿದಾ

ದಸರಾ ಬಳಿಕ ಶಿಬಿರಕ್ಕೆ ಮರಳಿದ ಆನೆಗಳು ಕೊಡಗಿನ ದುಬಾರೆ ಶಿಬಿರದಲ್ಲಿ ಬೀಡುಬಿಟ್ಟಿದ್ದು, ಪ್ರತಿನಿತ್ಯ ಪುಟ್ಬಾಲ್​ ಅಭ್ಯಾಸ ಮಾಡುತ್ತಾ ಕಾಲ ಕಳೆಯುತ್ತಿವೆ.

Seema.R | news18-kannada
Updated:October 24, 2019, 8:52 AM IST
ದಸರೆ ಬಳಿಕ ಫುಟ್ಬಾಲ್​ ಆಟದಲ್ಲಿ ಗಜಪಡೆ; ದುಬಾರೆಯಲ್ಲಿ ಆನೆಗಳ ಮೋಜಿಗೆ ಪ್ರವಾಸಿಗರು ಫಿದಾ
ದುಬಾರೆ ಶಿಬಿರದಲ್ಲಿ ಆನೆ
  • Share this:
ಕೊಡಗು (ಅ.23): ಒಂದು ತಿಂಗಳುಗಳ ಕಾಲ ಅರಮನೆಯಲ್ಲಿದ್ದು, ದಸರಾ ಮೆರವಣಿಗೆ ಬಳಿಕ ಶಿಬಿರ ಸೇರಿರುವ ಅರ್ಜುನನ ಗಜಪಡೆ ಈಗ ಫುಲ್​ ರಿಲಾಕ್ಸ್​ ಮೂಡ್​ನಲ್ಲಿದ್ದು, ಸ್ನಾನ, ಊಟ, ಆಟದಲ್ಲಿ ತಲ್ಲೀನವಾಗಿವೆ. 

ದಸರಾ ಬಳಿಕ ಶಿಬಿರಕ್ಕೆ ಮರಳಿದ ಈ ಆನೆಗಳು ಕೊಡಗಿನ ದುಬಾರೆ ಶಿಬಿರದಲ್ಲಿ ಬೀಡುಬಿಟ್ಟಿದ್ದು, ಪ್ರತಿನಿತ್ಯ ಪುಟ್ಬಾಲ್​ ಅಭ್ಯಾಸ ಮಾಡುತ್ತಾ ಕಾಲ ಕಳೆಯುತ್ತಿವೆ.

#WATCH Karnataka: Elephants who took part in the parade during #Dasara festival in Mysuru, were seen playing football yesterday, after they were shifted to Dubare Elephant Camp* in Kodagu district. pic.twitter.com/yHonc8q3Sz
ಇಲ್ಲಿನ ಪ್ರಸಿದ್ಧ ಆನೆ ಶಿಬಿರ ತಾಣವಾದ ದುಬಾರೆಯಲ್ಲಿ ಬೀಡು ಬಿಟ್ಟಿರುವ ಗಜಪಡೆಗಳು ಪ್ರತಿನಿತ್ಯ ನದಿಯಲ್ಲಿ ಸ್ನಾನದ ಜೊತೆ ನೀರಾಟ ವಾಡಿ ಬಳಿಕ ಪುಟ್ಬಾಲ್​ ಆಟದಲ್ಲಿ ತೊಡಗುತ್ತಿವೆ. ಈ ಮೂಲಕ ಆನೆಗಳ ನೋಡಲು ಬಂದ ಪ್ರವಾಸಿಗರಿಗೆ ಸಂಪೂರ್ಣ ಮನರಂಜನೆ ನೀಡುತ್ತೀವೆ. ಆನೆಗಳ ಈ ಆಟಕ್ಕೆ ಪ್ರವಾಸಿಗರು ಕೂಡ ಮನಸೋತು ಅವನ್ನು ಉತ್ತೇಜಿಸುತ್ತಿರುವುದು ಕಂಡು ಬಂದಿದೆ.

ಇದನ್ನು ಓದಿ: ಅಪರೂಪದ ಮಗ ಡಿಕೆ ಕುಮಾರ್; ಅಪ್ಪನ ಹಳೆ ಸ್ಕೂಟರ್​ನಲ್ಲಿ ಅಮ್ಮನ ಜೊತೆ 48 ಸಾವಿರ ಕಿಮೀ ದೇಶ ವಿದೇಶ ಸಂಚಾರಸದ್ಯ ಈ ಶಿಬಿರದಲ್ಲಿ 29 ಆನೆಗಳಿದ್ದು, ಇದರಲ್ಲಿ ಆರು ಆನೆಗಳು ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಇನ್ನು ಈ ಶಿಬಿರದಲ್ಲಿ ಪ್ರತಿ ವರ್ಷ ದಸರಾ ಆನೆ ಹೊರತು ಪಡಿಸಿ ಮತ್ತೊಂದು ಆನೆಗೆ ದಸರಾದಲ್ಲಿ ಭಾಗಿಯಾಗಲು ತರಬೇತಿಯನ್ನು ನೀಡಲಾಗುತ್ತದೆ.

First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ