ಮಡಿವಂತರಂತೆ ಮಾತನಾಡುವವರು ವಿದೇಶಕ್ಕೆ ಹೋಗಿ ಕ್ಯಾಸಿನೊದಲ್ಲಿ ದುಡ್ಡು ಸುರಿಯುತ್ತಾರೆ: ಸಿಟಿ ರವಿ

ರಾಜ್ಯದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಕುರಿತು ಹಲವಾರು ಚರ್ಚೆಯಾಗಿದೆ. ಕ್ಯಾಸಿನೊ ಹೊರತಾಗಿ  ಕೃಷಿ ಟೂರಿಸಂ, ವಿಲೇಜ್‌ ಟೂರಿಸಂ, ರೈನ್ ಟೂರಿಸಂ, ಫುಡ್ ಟೂರಿಸಂ ಬಗ್ಗೆ ಕೂಡ ಮಾತನಾಡಲಾಗಿದೆ

ಸಿ.ಟಿ. ರವಿ

ಸಿ.ಟಿ. ರವಿ

  • Share this:
ಉಡುಪಿ (ಫೆ.22): ರಾಜ್ಯಕ್ಕೆ ಬರುವ ಪ್ರವಾಸಿಗರು ಗೋವಾ ಮತ್ತು ಶ್ರೀಲಂಕಾದ ಕ್ಯಾಸಿನೊಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಅವರನ್ನು ಸೆಳೆಯುವ ಉದ್ದೇಶದಿಂದ ರಾಜ್ಯದಲ್ಲಿ ಈ ರೀತಿಯ ಕೆಲವು ನಿರ್ದಿಷ್ಟ ಕೇಂದ್ರ ತೆಗೆಯಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಇನ್ನು ಈ ಯೋಜನೆ ಪ್ರಸ್ತಾಪಿಸಿದ ಸಚಿವ ಸಿಟಿ ರವಿ ವಿರುದ್ಧ ಆಕ್ರೋಶಗಳು ಕೇಳಿ ಬರುತ್ತಿದೆ. ಈ ಕುರಿತು ಮೌನ ಮುರಿದಿರುವ ಪ್ರವಾಸೋದ್ಯಮ ಸಚಿವರು, ಇಲ್ಲಿ ಮಡಿವಂತರೆಂದು ಪ್ರದರ್ಶಿಸುವವರು ಅಲ್ಲಿ‌ ದುಡ್ಡು ಸುರಿಯುತ್ತಿದ್ದಾರೆ. ಇದು ಕೇವಲ ಪ್ರವಾಸೋದ್ಯಮ ಇಲಾಖೆ ಯೋಜನೆಯಲ್ಲ. ಇದಕ್ಕೆ ಗೃಹ ಇಲಾಖೆಯಿಂದಲೂ ಅಭಿಪ್ರಾಯ ಪಡೆಯಬೇಕಾಗುತ್ತದೆ ಎಂದರು. 

ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಕುರಿತು ಹಲವಾರು ಚರ್ಚೆಯಾಗಿದೆ. ಈ ವೇಳೆ  ಕೃಷಿ ಟೂರಿಸಂ, ವಿಲೇಜ್‌ ಟೂರಿಸಂ, ರೈನ್ ಟೂರಿಸಂ, ಫುಡ್ ಟೂರಿಸಂ ಬಗ್ಗೆ ಕೂಡ ಮಾತನಾಡಲಾಗಿದೆ ಎಂದರು.

ಕ್ಯಾಸಿನೊ ನಮ್ಮ ಸಂಸ್ಕೃತಿಗೆ ವಿರೋಧವಾಗುತ್ತೆ ನಿಜ. ಹಾಗಂತ, ನಮ್ಮ ದುಡ್ಡು ವಿದೇಶಕ್ಕೆ ಹರಿಯುತ್ತಿರುವುದೂ ಸತ್ಯ. ವಿದೇಶಕ್ಕೆ ಹೋಗುವವರನ್ನು ತಡೆಯಲು‌ ಸಾಧ್ಯವಿಲ್ಲ. ನಮ್ಮಲ್ಲಿ ಪ್ರವಾಸಿತಾಣ ನಿರ್ಮಿಸುವ ಅಗತ್ಯವಿದ್ದು, ಇದರ ಜೊತೆ ಉದ್ಯೋಗ ಸೃಷ್ಟಿಸುವ ಉದ್ದೇಶವೂ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಜನೆ ಸಿದ್ದಪಡಿಸಲು ಮುಂದಾಗಿದೆ ಎಂದು ತಿಳಿಸಿದರು.

ಇದನ್ನು ಓದಿ: ಬಿಎಸ್​ವೈಗೆ ಬಂಡಾಯ ಭೀತಿ; ಅತೃಪ್ತರ ಸಭೆಗಳ ಮೇಲೆ ಕಣ್ಣಿಡುವಂತೆ ಗುಪ್ತಚರ ಇಲಾಖೆಗೆ ಸಿಎಂ ಸೂಚನೆ

ನಮ್ಮಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಆದರೂ ಕೂಡ ಕ್ಯಾಸಿನೊಗಳ ಮೇಲೆ ಜನರು ಆಕರ್ಷಿತರಾಗುತ್ತಿದ್ದಾರೆ. ಕರ್ನಾಟಕದಿಂದಲೂ ಈ ತಾಣಗಳಿಗೆ ಹೋಗುವವರ ಸಂಖ್ಯೆ ಕಡಿಮೆ ಇಲ್ಲ. ಶ್ರೀಲಂಕಾ, ಲಾಸ್​ವೇಗಾಸ್​​ನಲ್ಲಿ ಭಾರತೀಯರು ಕ್ಯಾಸಿನೊಗಳಿಗೆ ಮಾರು ಹೋಗಿದ್ದಾರೆ. ಈ ರೀತಿ ವಿದೇಶಕ್ಕೆ ‌ದುಡ್ಡು ಹರಿಸಿದರೆ ನಮ್ಮ ದೇಶಕ್ಕೆ ನಷ್ಟ. ಈ ಹಿನ್ನೆಲೆ ವಾಸ್ತವಾಂಶವನ್ನಷ್ಟೇ ನಾನು ಹೇಳಿದ್ದೇನೆ ಎಂದೂ ಪ್ರವಾಸೋದ್ಯಮ ಸಚಿವರು ಸ್ಪಷ್ಟಪಡಿಸಿದರು.

(ವರದಿ: ಪರೀಕ್ಷಿತ್​ ಶೆಟ್​)
First published: