Bangalore Crime: ಬೆಂಗಳೂರಿನಲ್ಲಿ ಮೊಳಗಿತು ಗುಂಡಿನ ಸದ್ದು; ಯುವತಿಗೆ ಶೂಟ್ ಮಾಡಿ ಆರೋಪಿ ಪರಾರಿ

Bengaluru Crime: ಒರಿಸ್ಸಾ ಮೂಲದ ಶುಭಶ್ರೀ ಪ್ರಿಯದರ್ಶಿನಿ 2 ವರ್ಷಗಳಿಂದ ಬೆಂಗಳೂರಿನ ನಿಮ್ಹಾನ್ಸ್​ನಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಹೊಟ್ಟೆಗೆ ಒಂದು ಸುತ್ತಿನ ಗುಂಡು ಹಾರಿಸಿ, ಆರೋಪಿ ಪರಾರಿಯಾಗಿದ್ದ.

news18-kannada
Updated:February 26, 2020, 12:57 PM IST
Bangalore Crime: ಬೆಂಗಳೂರಿನಲ್ಲಿ ಮೊಳಗಿತು ಗುಂಡಿನ ಸದ್ದು; ಯುವತಿಗೆ ಶೂಟ್ ಮಾಡಿ ಆರೋಪಿ ಪರಾರಿ
ಶುಭಶ್ರೀ
  • Share this:
ಬೆಂಗಳೂರು (ಫೆ. 26): ಸಿಲಿಕಾನ್​ ಸಿಟಿಯಲ್ಲಿ ಕೊಲೆ, ದರೋಡೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಆಗಾಗ ಗುಂಡಿನ ಸದ್ದೂ ಕೇಳುತ್ತಿರುತ್ತದೆ. ಮಂಗಳವಾರ ಸಂಜೆ ಕೂಡ ಬೆಂಗಳೂರಿನಲ್ಲಿ ಕೊಲೆ ಪ್ರಯತ್ನವೊಂದು ನಡೆದಿದ್ದು, ಯುವತಿಯ ಮೇಲೆ ಅಪರಿಚಿತನೊಬ್ಬ ಗುಂಡು ಹಾರಿಸಿದ್ದಾನೆ. ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ ಸಂಜೆ 6 ಗಂಟೆಗೆ ಮಾರತ್ತಹಳ್ಳಿಯ ಮುನೇಕೊಳಲು ಬಳಿ ಈ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ವಾಸವಾಗಿರುವ ಒರಿಸ್ಸಾ ಮೂಲದ ಶುಭಶ್ರೀ ಪ್ರಿಯದರ್ಶಿನಿ ತನ್ನ ಕಚೇರಿಯಿಂದ ವಾಪಾಸ್ ಬಂದಾಗ ಆಕೆಯ ಪಿಜಿ ಎದುರೇ ನಾಡ ಪಿಸ್ತೂಲ್​ನಲ್ಲಿ ಗುಂಡು ಹಾರಿಸಲಾಗಿದೆ. ಒಂದು ಬಾರಿ ಆಕೆಯ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಪಿಸ್ತೂಲ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಶುಭಶ್ರೀಗೆ ತೀವ್ರವಾಗಿ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಪಾಕ್​ ಪರ ಘೋಷಣೆ ವಿವಾದ; ಆರೋಪಿ ಅಮೂಲ್ಯಾಳನ್ನು 4 ದಿನ ಪೊಲೀಸ್ ವಶಕ್ಕೆ ನೀಡಿದ ಕೋರ್ಟ್​

ಗುಂಡು ಹಾರಿಸಿ, ಕೊಲೆಗೆ ಪ್ರಯತ್ನಿಸಿರುವ ವ್ಯಕ್ತಿಯನ್ನು ಅಮರೇಂದ್ರ ಎಂದು ಗುರುತಿಸಲಾಗಿದೆ. ಶುಭಶ್ರೀಗೆ ಈತ ಮೊದಲೇ ಪರಿಚಿತನಾಗಿದ್ದ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಆಕೆ ಯಾವ ಸಮಯಕ್ಕೆ ಕೆಲಸಕ್ಕೆ ಹೋಗುತ್ತಾಳೆ, ಯಾವಾಗ ವಾಪಾಸ್ ಬರುತ್ತಾಳೆ ಎಂಬ ಸಂಪೂರ್ಣ ಮಾಹಿತಿ ಆತನಿಗಿತ್ತು. ಇದೇ ಕಾರಣಕ್ಕೆ ಹೊಂಚುಹಾಕಿ, ಆಕೆಯ ಪಿಜಿ ಎದುರಲ್ಲೇ ಗುಂಡು ಹಾರಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: 4 ವರ್ಷದ ಮಗನಿಂದಲೇ ಬಯಲಾಯ್ತು ಅಮ್ಮನ ಅಕ್ರಮ ಸಂಬಂಧ; ಆಮೇಲೆ ನಡೆದಿದ್ದು ದೊಡ್ಡ ದುರಂತ!

ಒರಿಸ್ಸಾ ಮೂಲದ ಶುಭಶ್ರೀ ಪ್ರಿಯದರ್ಶಿನಿ 2 ವರ್ಷಗಳಿಂದ ನಿಮ್ಹಾನ್ಸ್​ನಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಹೊಟ್ಟೆಗೆ ಒಂದು ಸುತ್ತಿನ ಗುಂಡು ಹಾರಿಸಲಾಗಿದೆ. ಫೈರಿಂಗ್ ಸದ್ದು ಕೇಳಿದಾಗ ಆಕೆಯ ಪಿಜಿಯವರು ಹೊರಗೆ ಬಂದು ನೋಡಿದ್ದಾರೆ. ಆಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶುಭಶ್ರೀಯನ್ನು ನೋಡಿ ಆಸ್ಪತ್ರೆಗೆ ಸೇರಿಸಿದ್ದಾರೆ. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ವೈಟ್​ಫೀಲ್ಡ್​ ಡಿಸಿಪಿ ಅನುಚೇತ್ ಹೇಳಿಕೆ ನೀಡಿದ್ದಾರೆ.
First published:February 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading