ಚಿಕ್ಕಮಗಳೂರಿನ ಹಿರೇಬೈಲ್​​​​​​​​​ನಲ್ಲಿ ಪ್ರೇಯಸಿ ಕೈಕೊಟ್ಟಿದ್ದಕ್ಕೆ ಮನನೊಂದು ಪ್ರೇಮಿ ಆತ್ಮಹತ್ಯೆ

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸತೀಶ್ (29) ಎಂದು ಗುರುತಿಸಲಾಗಿದೆ.ಕೊಪ್ಪ ತಾಲೂಕಿನ ಬಸರಿಕಟ್ಟೆ ಮೂಲದವ. ಈತ ಯುವತಿಯೊಬ್ಬಳನನ್ನು ಪ್ರೀತಿಸುತ್ತಿದ್ದ. ಮದುವೆ ಆಗುತ್ತೇನೆಂದು ಯುವತಿ ಮೃತ ಸತೀಶ್​​ನಿಗೆ ಮಾತು ಕೊಟ್ಟಿದ್ದಳು

news18-kannada
Updated:November 22, 2019, 12:07 PM IST
ಚಿಕ್ಕಮಗಳೂರಿನ ಹಿರೇಬೈಲ್​​​​​​​​​ನಲ್ಲಿ ಪ್ರೇಯಸಿ ಕೈಕೊಟ್ಟಿದ್ದಕ್ಕೆ ಮನನೊಂದು ಪ್ರೇಮಿ ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡ ಯುವಕ ಸತೀಶ್
  • Share this:
ಚಿಕ್ಕಮಗಳೂರು (ನ.22) : ಪ್ರೇಯಸಿ ಕೈಕೊಟ್ಟಳೆಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹಿರೇಬೈಲ್ ನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸತೀಶ್ (29) ಎಂದು ಗುರುತಿಸಲಾಗಿದೆ.ಕೊಪ್ಪ ತಾಲೂಕಿನ ಬಸರಿಕಟ್ಟೆ ಮೂಲದವ. ಈತ ಯುವತಿಯೊಬ್ಬಳನನ್ನು ಪ್ರೀತಿಸುತ್ತಿದ್ದ. ಮದುವೆ ಆಗುತ್ತೇನೆಂದು ಯುವತಿ ಮೃತ ಸತೀಶ್​​ನಿಗೆ ಮಾತು ಕೊಟ್ಟಿದ್ದಳು.  ನಂತರ ಆಕೆ ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದು ಸತೀಶ್ ಮೊಬೈಲ್​​​ನಲ್ಲಿ ಸ್ನೇಹಿತರಿಗೆ ಡೆತ್ ನೋಟ್ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡೆತ್ ನೋಟ್


ನಾನು ಅವಳಿಗೆ ಬಿಎಸ್ಸಿ ನರ್ಸಿಂಗ್​ ಮಾಡಿಸಿದೆ. ನನ್ನ ಸಾವಿಗೆ ಪವಿತ್ರಳೇ ಕಾರಣ ದಯವಿಟ್ಟು ಅವಳಿಗೆ ತಕ್ಕ ಶಿಕ್ಷೆಆಗಬೇಕು. ನಮ್ಮ ಮನೆಯವರಿಗೆ  ಏನು ಹೇಳಿಲ್ಲ ದಯವಿಟ್ಟು ಹೇಳಿ ಎಂದು ಹಿರೇಬೈಲ್​​​​ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಾಟ್ಸಪ್​​​​ನಲ್ಲಿ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ : ಟಾಟಾ ಸುಮೋ ಮತ್ತು‌ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ : 8 ಜನರ ಸಾವು

ಇನ್ನೂ ಈ ಘಟನೆ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಕೊಂಡಿದ್ದಾರೆ.
 
First published: November 22, 2019, 11:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading