news18-kannada Updated:February 19, 2020, 12:38 PM IST
ಪ್ರಾತಿನಿಧಿಕ ಚಿತ್ರ
ದಾವಣಗೆರೆ(ಫೆ. 19): ಅಕ್ರಮ ಮತದಾರರ ಪಟ್ಟಿ ಸೇರ್ಪಡೆ ವಿವಾದದ ಬೆನ್ನಲ್ಲೇ ಇಂದು ನಡೆದ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಪಾಲಿಕೆ ಬಿಜೆಪಿ ವಶವಾಗಿದೆ. ಮೇಯರ್ ಆಗಿ ಬಿಜೆಪಿಯ ಅಜಯ್ ಕುಮಾರ್ ಆಯ್ಕೆಯಾದರು. ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಸೌಮ್ಯಾ ನರೇಂದ್ರಕುಮಾರ್ ಅವರಿಗೆ ಉಪಮೇಯರ್ ಸ್ಥಾನ ಒಲಿದಿದೆ.
ಚುನಾವಣೆಯಲ್ಲಿ ವಾಮಮಾರ್ಗದಿಂದ ಪರಿಷತ್ ಸದಸ್ಯರನ್ನ ಮತದಾನಕ್ಕೆ ಪ್ರಕ್ರಿಯೆಗೆ ಸೇರಿಸಿಲ್ಲ. ಮೂರು ಜನ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಪೂರ್ವಕವಾಗಿ ಗೈರು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷ ಮತದಾನ ಪ್ರಕ್ರಿಯೆ ಬಹಿಷ್ಕಾರ ಮಾಡಿತ್ತು. ಇದರಿಂದಾಗಿ ಪಾಲಿಕೆ ಸುಲಭವಾಗಿ ಬಿಜೆಪಿ ವಶವಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಒಟ್ಟು 45 ಸದಸ್ಯರಿದ್ದು
ಬಿಜೆಪಿ 17, ಕಾಂಗ್ರೆಸ್ 22 , ಪಕ್ಷೇತರ 5 , ಜೆಡಿಎಸ್ನ ಓರ್ವ ಸದಸ್ಯರು ಇದ್ದಾರೆ. ಜೊತೆಗೆ, ಜಿಲ್ಲೆಯ ವಿಧಾನಪರಿಷತ್ ಸದಸ್ಯರು, ವಿಧಾನಸಭಾ ಸದಸ್ಯರು, ಸಂಸದರು ಸೇರಿ ಮತದಾನ ಹಕ್ಕು ಹೊಂದಿದ ಒಟ್ಟು ಸದಸ್ಯರ ಸಂಖ್ಯೆ 62 ಇದೆ. ಗೆಲ್ಲಲು ಬೇಕಾದ ಮ್ಯಾಜಿಕ್ ನಂಬರ್ 32 ಇತ್ತು.
ಚುನಾವಣೆಯ ದಿನವಾದ ಇಂದು ಕಾಂಗ್ರೆಸ್ ಸದಸ್ಯರಾದ ಯಶೋದಾ ಉಮೇಶ್, ಜೆ.ಎನ್. ಶ್ರೀನಿವಾಸ ಮತ್ತು ಶ್ವೇತಾ ಎಸ್ ಗೈರಾಗಿದ್ದರು. ಕಾಂಗ್ರೆಸ್ನ ಒಟ್ಟು 22 ಪಾಲಿಕೆ ಸದಸ್ಯರಲ್ಲಿ 18 ಸದಸ್ಯರು ಮಾತ್ರ ಹಾಜರಿದ್ದರು. ಕೈ ಎತ್ತುವ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಪಾಲಿಕೆ ಸದಸ್ಯರು, ಶಾಸಕರು, ಸಂಸದ, ಪರಿಷತ್ ಸದಸ್ಯರು ಭಾಗಿಯಾಗಿದ್ದರು. ಮೂವರು ಕಾಂಗ್ರೆಸ್ ಸದಸ್ಯರು ಗೈರಾದ ಹಿನ್ನೆಲೆ ಮತದಾನದ ಸಂಖ್ಯೆ 62 ರಿಂದ 59ಕ್ಕೆ ಇಳಿದಿತ್ತು. ಇದರಿಂದ ಮ್ಯಾಜಿಕ್ ನಂಬರ್ ಸಂಖ್ಯೆ ಕೂಡ 32 ರಿಂದ 31ಕ್ಕೆ ಇಳಿಕೆಯಾಗಿತ್ತು. ಬಿಜೆಪಿಯಲ್ಲಿ ಹಾಲಿ 31 ಸದಸ್ಯರು ಭಾಗಿಯಾದ ಹಿನ್ನೆಲೆ ಸುಲಭವಾಗಿ ಪಾಲಿಕೆ ಬಿಜೆಪಿ ವಶವಾಗಿದೆ.
ಫೆ.24ರವರೆಗೆ ಗದ್ದುಗೆ ಹಿಡಿಯಲು ಕಾಯಬೇಕು:
ಮತದಾರರ ಪಟ್ಟಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ 12 ಎಂಎಲ್ಸಿ ಗಳ ಹೆಸರನ್ನು ಸೇರ್ಪಡನೆ ಮಾಡಿಕೊಳ್ಳಲಾಗಿದ್ದು, ಪರಿಷತ್ ಸದಸ್ಯರಿಗೆ ಮತದಾನದ ಹಕ್ಕು ನೀಡದಂತೆ ಕಾಂಗ್ರೆಸ್ ಹೈ ಕೋರ್ಟ್ ಮೊರೆ ಹೋಗಿತ್ತು.
ಇದನ್ನು ಓದಿ: ಸಾರಿಗೆ ನೌಕರರ ಧರಣಿ; ನಾಳೆ ರಾಜ್ಯದಲ್ಲಿ ಬಸ್ ಸಂಚಾರ ಅನುಮಾನಈ ಅಕ್ರಮ ಮತದಾರ ಪಟ್ಟಿ ವಿಚಾರವಾಗಿ ಸಲ್ಲಿಕೆಯಾಗಿದ್ದ ದೂರನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಇಂದು ಚುನಾವಣೆ ಇರುವುದರಿಂದ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲವೆಂದು ಫೆ. 24 ಕ್ಕೆ ವಿಚಾರಣೆ ಮುಂದೂಡಿತು. ಹೈಕೋರ್ಟ್ನ ತೀರ್ಪು ಬರುವವರೆಗೂ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಕಾಯಬೇಕಾಗಬಹುದು.
First published:
February 19, 2020, 12:38 PM IST