HOME » NEWS » State » KANNADA NEWS BJP MP PRATAP SIMHA PRAISED FORMER CM SIDDARAMAIAH FOR HIS GOOD WORKS LG

ಹುಲಿಯಾಗೆ ಜೈ ಎಂದ ಸಿಂಹ; ಸಿದ್ದರಾಮಯ್ಯ ಕೆಲಸಕ್ಕೆ ಸಾಹೇಬ್ರು ಎಂದು ಹೇಳಿ ಪ್ರತಾಪ್‌ಸಿಂಹ ಮೆಚ್ಚುಗೆ

ಈ ಹಿಂದೆ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರತಾಪ್‌ ಸಿಂಹ‌ ಅವರಿಗೆ ಬುದ್ದಿವಾದ ಹೇಳಿದ್ದ ಸಿದ್ದರಾಮಯ್ಯ, ನೀನು‌ ಇನ್ನು ಚಿಕ್ಕವನು ರಾಜಕೀಯದಲ್ಲಿ ಇನ್ನು ಬೆಳೆಯಬೇಕಾಗಿದೆ. ಆಕ್ರೋಶಭರಿತನಾಗಿ ಭಾಷಣ ಮಾಡುವುದನ್ನ ಕಡಿಮೆ ಮಾಡು, ಎಂದಿದ್ದರು.  ಆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ ಪ್ರತಾಪ್‌ ಸಿಂಹ ಸಿದ್ದರಾಮಯ್ಯನವರ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು.

news18-kannada
Updated:February 18, 2020, 3:15 PM IST
ಹುಲಿಯಾಗೆ ಜೈ ಎಂದ ಸಿಂಹ; ಸಿದ್ದರಾಮಯ್ಯ ಕೆಲಸಕ್ಕೆ ಸಾಹೇಬ್ರು ಎಂದು ಹೇಳಿ ಪ್ರತಾಪ್‌ಸಿಂಹ ಮೆಚ್ಚುಗೆ
ಸಿದ್ದರಾಮಯ್ಯ-ಪ್ರತಾಪ್​ ಸಿಂಹ
  • Share this:
ಮೈಸೂರು(ಫೆ.18): ಕೊಡಗು-ಮೈಸೂರು ಸಂಸದ ಪ್ರತಾಪ್​ ಸಿಂಹ ಮತ್ತು ಮೈಸೂರಿನವರೇ ಆದ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಆಗಾಗ ರಾಜಕೀಯವಾಗಿ ವಾಗ್ದಾಳಿಗಳು ನಡೆಯುತ್ತಲೇ ಇರುತ್ತವೆ. ಇಬ್ಬರನ್ನೂ ಬದ್ಧ ರಾಜಕೀಯ ವೈರಿಗಳು ಎಂದರೂ ತಪ್ಪಾಗಲಾರದು. ಇತ್ತೀಚೆಗೆ ಮಂಗಳೂರು ಗಲಭೆ ವಿಚಾರವಾಗಿ ತೀವ್ರ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ, ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ದ ಪ್ರತಾಪ್‌ಸಿಂಹ, ಸಿದ್ದರಾಮಯ್ಯ ಸೃಷ್ಟಿಸಿದ ಮರಿಟಿಪ್ಪುಗಳೇ  ಮಂಗಳೂರು ಗಲಭೆಗೆ ಕಾರಣ ಎಂದು ಗುಡುಗಿದ್ದರು.  ಮೈಸೂರಿನ ಹಲವು ವೇದಿಕೆಗಳಲ್ಲಿ ಇವರಿಬ್ಬರ ವಾಕ್ಸಮರ ಯಾವಾಗಲೂ ಇದ್ದೇ ಇರುತ್ತದೆ. ಆದರೆ ನಿನ್ನೆ ಸಂಸದ ಪ್ರತಾಪ್‌ ಸಿಂಹ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲದೇ ಅವರ ಸರ್ಕಾರದ ಸಾಧನೆಗಳನ್ನು ಕೊಂಡಾಡಿ ಸಿದ್ದರಾಮಯ್ಯನವರಿಗೆ 'ಸಾಹೇಬರು' ಅಂತ ಉಲ್ಲೇಖಿಸಿದ್ದಾರೆ. ತನ್ನ ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ಸಿದ್ದು ಹೊಗಳಿಕೆಯ ಪೋಸ್ಟ್ ಮಾಡಿರುವ ಪ್ರತಾಪ್‌ಸಿಂಹರ ಉದ್ದೇಶವಾದರೂ ಏನು ಅಂತೀರಾ? ಈ ವರದಿ ಓದಿ.

ಹೌದು, ಕೊಡಗು-ಮೈಸೂರು ಬಿಜೆಪಿ ಸಂಸದ ಪ್ರತಾಪ್‌‌ಸಿಂಹ ಫೇಸ್‌ಬುಕ್  ಹಾಗೂ ಟ್ವಿಟರ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹೊಗಳಿದ್ದಾರೆ. ಮೈಸೂರಿನ ಜಯದೇವ ಆಸ್ಪತ್ರೆ ನಿರ್ಮಾಣ ಮಾಡಿರುವ ಸಿದ್ದರಾಮಯ್ಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.  ಅಷ್ಟೇ ಅಲ್ಲದೇ, ಪ್ರತಾಪ್‌ಸಿಂಹ ಸಿದ್ದರಾಮಯ್ಯರನ್ನು ಸಾಹೇಬ್ರು ಎಂದು ಉಲ್ಲೇಖಿಸಿ ಪೋಸ್ಟ್ ಹಾಕಿದ್ದಾರೆ.

 

ಬಿಜೆಪಿ ಮುಖಂಡ‌ ಅಣ್ಣಯ್ಯ ನಾಯಕರಿಗೆ ಲಘು ಹೃದಯಾಘಾತವಾಗಿತ್ತು. ತಕ್ಷಣ ಅವರನ್ನ ಮೈಸೂರಿನ ಕೆ.ಆರ್.ಎಸ್.ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.‌ ಅಣ್ಣಯ್ಯರನ್ನ  ನೋಡಲು ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದ ಪ್ರತಾಪ್‌ಸಿಂಹ, ಜಯದೇವ ಆಸ್ಪತ್ರೆಯ ಅತ್ಯಾಧುನಿಕ ವ್ಯವಸ್ಥೆ ನೋಡಿ ಅಚ್ಚರಿಯಾಗಿದ್ದಾರೆ. ಇಡೀ ಆಸ್ಪತ್ರೆ ‌ಸುತ್ತಾಡಿ ಮಾಹಿತಿ ಪಡೆದುಕೊಂಡು ಆಸ್ಪತ್ರೆ ನಿರ್ಮಾಣ ಕಾರ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಜಯದೇವ ಆಸ್ಪತ್ರೆಯಲ್ಲಿ ಸಂಸದ ಪ್ರತಾಪ್ ಸಿಂಹ


ಆಸ್ಪತ್ರೆಯಿಂದ ಹೊರಬಂದ ನಂತರ ತನ್ನ ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಇಂತಹ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕಾರಣರಾದ ಸಿದ್ದರಾಮಯ್ಯರಿಗೆ ಧನ್ಯವಾದ ಎಂದ ಪೋಸ್ಟ್ ಹಾಕಿದ್ದಾರೆ. ಆಸ್ಪತ್ರೆ ನಿರ್ಮಾಣಕ್ಕೆ 168 ಕೋಟಿ ರೂ. ಅನುದಾನ ನೀಡಿದ ಸಿದ್ದರಾಮಯ್ಯನವರಿಗೆ ಧನ್ಯವಾದ ಹೇಳಿದ್ದಾರೆ.‌ ಜೊತೆಗೆ ಅಂದಿನ‌ ಚಾಮರಾಜ ಕ್ಷೇತ್ರದ ಶಾಸಕರಾಗಿದ್ದ ವಾಸು, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್, ಮೈಸೂರು ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಸದಾನಂದ‌ಗೌಡರಿಗೂ ಧನ್ಯವಾದ ಎಂದು ಪ್ರತಾಪ್​ ಸಿಂಹ ಪೋಸ್ಟ್ ಹಾಕಿದ್ದಾರೆ.

ಜಯದೇವ ಆಸ್ಪತ್ರೆಯಲ್ಲಿ ಸಂಸದ ಪ್ರತಾಪ್ ಸಿಂಹ


ಬಿಜೆಪಿಯಲ್ಲಿದ್ದರೂ ಸಿದ್ದರಾಮಯ್ಯ ಸರ್ಕಾರದ ಯೋಜನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಪ್ರತಾಪ್‌ ಸಿಂಹ ಬಗ್ಗೆ ನೆಟ್ಟಿಗರು ಸಹ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.‌ ಇತ್ತೀಚಿನ ದಿನಗಳಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿ, ರಾಜಕಾರಣಿಗಳು ಪರಸ್ಪರ ಕಿತ್ತಾಡುವುದು, ವೈಯುಕ್ತಿಕ ವಿಚಾರಗಳನ್ನು, ಸಾರ್ವಜನಿಕವಾಗಿ ಚರ್ಚಿಸಿ ತೇಜೋವಧೆ ಮಾಡುತ್ತಿದ್ಧಾರೆ. ಆದರೆ ಸಂಸದ ಪ್ರತಾಪ್‌ಸಿಂಹ ಮಾತ್ರ ತನ್ನ ರಾಜಕೀಯ ಸಿದ್ಧಾಂತಗಳನ್ನು ಬದಿಗೊತ್ತಿ ಹಿಂದಿನ ಸರ್ಕಾರವೊಂದರ ಉತ್ತಮ ಯೋಜನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವುದು ನಿಜಕ್ಕೂ ಶ್ಲಾಘನೀಯ. ‌ಅಷ್ಟಕ್ಕೂ ಈ ಯೋಜನೆ ಜಾರಿಯಾಗಿ ಜನರಿಗೆ ಉಪಯೋಗ ಆಗುತ್ತಿದ್ದರೆ, ಯಾರು ತಾನೆ ನಿಮ್ಮ‌ ಯೋಜನೆ ಚೆನ್ನಾಗಿಲ್ಲ ಅಂತಾರೆ. ಪ್ರತಾಪ್‌ಸಿಂಹ ಈ ಬಗ್ಗೆ ಮಾಡಿರುವ ಟ್ವೀಟ್ ಹಾಗೂ ಫೇಸ್‌ಬುಕ್ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಯಾಕೆಂದರೆ ಬಿಜೆಪಿಯವರು ಏನು ಮಾಡಿದರೂ ಸರಿ, ಕಾಂಗ್ರೆಸ್‌ನವರು ಮಾಡಿರುವುದೆಲ್ಲಾ ತಪ್ಪು ಎಂಬ ಪರಸ್ಪರ ಚರ್ಚೆ  ನಡೆಯುತ್ತಿರುವಾಗಲೇ, ಬದ್ದ ವೈರಿಗಳಂತಿದ್ದ ಸಿದ್ದರಾಮಯ್ಯ-ಪ್ರತಾಪ್​ ಸಿಂಹ ಎಲ್ಲಿ ದೋಸ್ತಿಗಳಾಗುತ್ತಾರೋ ಎನ್ನುವ ಕುತೂಹಲ ಮೂಡಿದೆ.

ಜಯದೇವ ಆಸ್ಪತ್ರೆ


ಈ ಹಿಂದೆ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರತಾಪ್‌ ಸಿಂಹ‌ ಅವರಿಗೆ ಬುದ್ಧಿವಾದ ಹೇಳಿದ್ದ ಸಿದ್ದರಾಮಯ್ಯ, "ನೀನು‌ ಇನ್ನು ಚಿಕ್ಕವನು ರಾಜಕೀಯದಲ್ಲಿ ಇನ್ನು ಬೆಳೆಯಬೇಕಾಗಿದೆ. ಆಕ್ರೋಶಭರಿತನಾಗಿ ಭಾಷಣ ಮಾಡುವುದನ್ನ ಕಡಿಮೆ ಮಾಡು," ಕಿವಿಮಾತು ಹೇಳಿದ್ದರು.  ಆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ ಪ್ರತಾಪ್‌ ಸಿಂಹ, ಸಿದ್ದರಾಮಯ್ಯನವರ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು.
First published: February 18, 2020, 9:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories