ಎಚ್​.ಎಸ್. ದೊರೆಸ್ವಾಮಿ ಯಾವ ಪಕ್ಷದ ಪರ ಕೆಲಸ ಮಾಡುತ್ತಾರೆಂದು ಗೊತ್ತಿದೆ; ಫೇಸ್​ಬುಕ್​ನಲ್ಲಿ ಯತ್ನಾಳ್ ವಾಗ್ದಾಳಿ

ಫೇಸ್​ಬುಕ್​ನಲ್ಲಿ ಎಚ್​.ಎಸ್. ದೊರೆಸ್ವಾಮಿ ವಿರುದ್ಧ ಪೋಸ್ಟ್​ ಮಾಡಿರುವ ಶಾಸಕ ಯತ್ನಾಳ್, ದೊರೆಸ್ವಾಮಿಯವರು ಯಾವಾಗ ದೇಶದ ಪರ ದನಿ ಎತ್ತಿದ್ದಾರೆ? ದೊರೆಸ್ವಾಮಿ ಯಾವ ಪಕ್ಷದ ಪರ ಕೆಲಸ ಮಾಡುತ್ತಾರೆ ಎಂಬುದು ನನಗೆ ಗೊತ್ತಿದೆ ಎಂದಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್- ಎಚ್​.ಎಸ್. ದೊರೆಸ್ವಾಮಿ

ಬಸನಗೌಡ ಪಾಟೀಲ್ ಯತ್ನಾಳ್- ಎಚ್​.ಎಸ್. ದೊರೆಸ್ವಾಮಿ

  • Share this:
ವಿಜಯಪುರ (ಫೆ. 27): ಸ್ವಾತಂತ್ರ್ಯ ಹೋರಾಟಗಾರ ಎಚ್​.ಎಸ್. ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಏಜೆಂಟ್ ಎಂದು ಕರೆದು ವಿವಾದಕ್ಕೆ ಸಿಲುಕಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ದೊರೆಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಫೇಸ್​ಬುಕ್​ನಲ್ಲಿ ಎಚ್​.ಎಸ್. ದೊರೆಸ್ವಾಮಿ ವಿರುದ್ಧ ಪೋಸ್ಟ್​ ಮಾಡಿರುವ ಶಾಸಕ ಯತ್ನಾಳ್, ದೊರೆಸ್ವಾಮಿಯವರು ಯಾವಾಗ ದೇಶದ ಪರ ದನಿ ಎತ್ತಿದ್ದಾರೆ? ದೊರೆಸ್ವಾಮಿ ಯಾವ ಪಕ್ಷದ ಪರ ಕೆಲಸ ಮಾಡುತ್ತಾರೆ ಎಂಬುದು ನನಗೆ ಗೊತ್ತಿದೆ ಎಂದಿದ್ದಾರೆ.

ಎಚ್​.ಎಸ್. ದೊರೆಸ್ವಾಮಿ ಪರ ಪ್ರತಿಭಟನೆ ಮಾಡುತ್ತಿರುವವರ ಮೇಲೆ ಅಸಮಾಧಾನ ಹೊರಹಾಕಿರುವ ಶಾಸಕ ಯತ್ನಾಳ್, ಈಗ ಪ್ರತಿಭಟನೆ ಮಾಡುತ್ತಿರುವವರು ಭಯೋತ್ಪಾದಕ ಅಫ್ಜಲ್ ಗುರು ಪರವಾಗಿ ಜೆಎನ್​ಯುನಲ್ಲಿ ಘೋಷಣೆ ಕೂಗಿದಾಗ ಯಾಕೆ ಪ್ರತಿಭಟಿಸಿಲ್ಲ? ತುಕ್ಡೆ ಗ್ಯಾಂಗ್ ಪರ ಹಾಗೂ ವೀರ ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿ ಮಾತಾಡಿದ್ದರು. ಆಗ ಯಾಕೆ ನೀವೆಲ್ಲ ಪ್ರತಿಭಟನೆ ಮಾಡಲಿಲ್ಲ? ಕಾಂಗ್ರೆಸ್​ನ ಬುದ್ಧಿಜೀವಿಗಳೇ ಉತ್ತರಿಸಿ ಎಂದು ಫೇಸ್​ಬುಕ್​ನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಟೀಕಾಪ್ರಹಾರ ನಡೆಸಿದ್ದಾರೆ.ಇದನ್ನೂ ಓದಿ: ಎಸ್ಕೇಪ್ ಆಗಿದ್ದ ಸ್ಲಂ ಭರತ್​ ಮೇಲೆ ಬೆಂಗಳೂರು ಪೊಲೀಸರ ಫೈರಿಂಗ್; ಚಿಕಿತ್ಸೆ ಫಲಕಾರಿಯಾಗದೆ ರೌಡಿಶೀಟರ್ ಸಾವು

ಎಚ್​.ಎಸ್. ದೊರೆಸ್ವಾಮಿ ಅವರನ್ನು ಪಾಕ್ ಏಜೆಂಟ್ ಎಂದು ಕರೆಯುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್​ ಕಾಂಗ್ರೆಸ್ ನಾಯಕರ ಹಾಗೂ ಎಡಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಯಾವುದೇ ಕಾರಣಕ್ಕೂ ನನ್ನ ಹೇಳಿಕೆಯನ್ನು ಹಿಂಪಡೆಯುವುದಿಲ್ಲ. ದೇಶವಿರೋಧಿಗಳನ್ನು ಜೈಲಿಗೆ ಕರೆದುಕೊಂಡು ಹೋಗಿ ಬಿರಿಯಾನಿ ತಿನ್ನಿಸುವ ಕಾಲ ಮುಗಿದಿದೆ. ಇನ್ನೇನಿದ್ದರೂ ಅಂಥವರನ್ನು ಕಂಡಲ್ಲಿ ಗುಂಡಿಕ್ಕುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ದೊರೆಸ್ವಾಮಿ ವಿರುದ್ಧ ಶಾಸಕ ಯತ್ನಾಳ್ ಅವಹೇಳನಕಾರಿ ಹೇಳಿಕೆ ವಿಚಾರ; ಪ್ರತಿಭಟನೆಗೆ ಕರೆ ನೀಡಿದ ಸಿದ್ದರಾಮಯ್ಯ

ಇದೀಗ ತಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರಿಗೆ ಫೇಸ್ ಬುಕ್​ನಲ್ಲಿ ಪ್ರಶ್ನೆ ಕೇಳಿರುವ ಶಾಸಕ ಯತ್ನಾಳ್, ಮಾನ್ಯ ಸಿದ್ದರಾಮಯ್ಯನವರೇ ಹಾಗೂ ಕಾಂಗ್ರೆಸ್ ಪಕ್ಷದ ಬುದ್ದಿಜೀವಿಗಳೇ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದಿದ್ದಾರೆ. ಶಾಹೀನ್​ ಭಾಗ್​ನಲ್ಲಿ ಜಿನ್ನಾ ವಾಲಿ ಆಜಾದಿ ಎಂದು ಘೋಷಣೆ ಕೂಗಿದಾಗ ನೀವು ಯಾಕೆ ಮಾತನಾಡಲಿಲ್ಲ? ಕಾಂಗ್ರೆಸ್ ಪಕ್ಷದವರೇ ಪೋಷಿಸಿರುವ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದಾಗ ಯಾಕೆ ಬೀದಿಗಿಳಿದು ಹೋರಾಟ ಮಾಡಲಿಲ್ಲ? ಎಂದು ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ದೇಶದ ಸೈನಿಕರು ಮತ್ತು ಪೊಲೀಸರ ಬಗ್ಗೆ ಯಾರೇ ಅವಹೇಳನ ಮಾಡಿದರೂ ಅವರ ವಿರುದ್ಧ ನಾನು ಹೋರಾಟ ಮಾಡುತ್ತೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
First published: