HOME » NEWS » State » KANNADA NEWS BHEEMA RIVER SHORE ASSASSIN CASE REGISTERED AGAINST BHAGAPPA HARIJANA AND 3 OTHERS SCT

ಭೀಮಾ ತೀರದಲ್ಲಿ ಮತ್ತೆ ಶುರುವಾಯ್ತಾ ಬೆದರಿಕೆ ತಂತ್ರ?; ಭಾಗಪ್ಪ ಹರಿಜನ ಸೇರಿ ಮೂವರ ವಿರುದ್ಧ ದೂರು ದಾಖಲು

ಭೀಮಾ ತೀರದ ಹಂತಕ ಭಾಗಪ್ಪ ಹರಿಜನ ವಿರುದ್ಧ ನಾನಾ ಪೊಲೀಸ್ ಠಾಣೆಗಳಲ್ಲಿ ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಲಕ್ಷ್ಮಿಕಾಂತ ಪಾಟೀಲ ವಿರುದ್ಧ ನಾಲ್ಕೈದು ಪ್ರಕರಣಗಳು ದಾಖಲಾಗಿವೆ.

news18-kannada
Updated:July 23, 2020, 9:08 PM IST
ಭೀಮಾ ತೀರದಲ್ಲಿ ಮತ್ತೆ ಶುರುವಾಯ್ತಾ ಬೆದರಿಕೆ ತಂತ್ರ?; ಭಾಗಪ್ಪ ಹರಿಜನ ಸೇರಿ ಮೂವರ ವಿರುದ್ಧ ದೂರು ದಾಖಲು
ಭೀಮಾ ತೀರದ ಆರೋಪಿ
  • Share this:
ವಿಜಯಪುರ, (ಜು. 23): ಚಿನ್ನದ ವ್ಯಾಪಾರಿಗೆ 5 ಕೋಟಿ ರೂ.. ಹಣಕ್ಕಾಗಿ ಜೀವ ಬೆದರಿಕೆ ಹಾಕಿದ ಪ್ರಕರಣದ ಮತ್ತಷ್ಟು ಮಾಹಿತಿ ಬಹಿರಂಗವಾಗಿದೆ.  ಈಗಾಗಲೇ ವಿಜಯಪುರ ಜಿಲ್ಲೆಯ ಚಡಚಣ ಪೊಲೀಸರು ಭೀಮಾ ತೀರದ ಮುಖಂಡ ಮಹಾದೇವ ಸಾಹುಕಾರ ಭೈರಗೊಂಡನನ್ನು ಬಂಧಿಸಿದ್ದಾರೆ. ಈ ಮಧ್ಯೆ, ಈ ಪ್ರಕರಣದಲ್ಲಿ ಭೀಮಾ ತೀರದ ಹಂತಕ ಭಾಗಪ್ಪ ಹರಿಜನ ಮತ್ತು ಇಂಡಿಯ ಉದ್ಯಮಿ ಲಕ್ಷ್ಮಿಕಾಂತ ಪಾಟೀಲ ವಿರುದ್ಧವೂ ದೂರು ದಾಖಲಾಗಿದ್ದು, ಇವರಿಬ್ಬರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. 

ಇಂಡಿಯ ಖ್ಯಾತ ಚಿನ್ನದ ವ್ಯಾಪಾರಿ ನಾಮದೇವ ಶಿ. ಡಾಂಗೆ ನೀಡಿದ ದೂರಿನಲ್ಲಿ, ಜು. 19 ರಂದು ಮಹಾದೇವ ಸಾಹುಕಾರ ಭೈರಗೊಂಡ ತೋಟದ ಮನೆಗೆ ತೆರಳಿದ್ದಾಗಿ ತಿಳಿಸಿದ್ದಾನೆ.   ಮಹಾದೇವ ಸಾಹುಕಾರ ಭೈರಗೊಂಡ ವಾಸಿಸುವ ಕೆರೂರಿನ ತೋಟದ ಮನೆಯಲ್ಲಿ ಭಾಗಪ್ಪ ಹರಿಜನ ಮತ್ತು ಲಕ್ಷ್ಮಿಕಾಂತ ಪಾಟೀಲ ಸೇರಿ ಡಾಂಗೆಗೆ 5 ಕೋಟಿ ರೂ. ಹಣ ಮತ್ತು 3 ಕೆಜಿ ಬಂಗಾರ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇಲ್ಲದಿದ್ದರೆ ನಿನ್ನನ್ನು ಮುಗಿಸುತ್ತೇವೆ.  ನಿನ್ನ ಅಂಗಡಿ ಮತ್ತು ಮನೆಯನ್ನು ಬಿಡುವುದಿಲ್ಲ. ನಿನ್ನ ಮನೆತನವನ್ನು ಇಲ್ಲದಂತೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಕೊರೋನಾ ಕಾವು: ಇಂದು 5030 ಕೇಸ್​​ ಪತ್ತೆ, 80 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಭಾಗಪ್ಪ ಹರಿಜನ ಮತ್ತು ಲಕ್ಷ್ಮಿಕಾಂತ ಪಾಟೀಲ ಬೆದರಿಕೆ ಹಾಕುವಾಗ ಮಹಾದೇವ ಸಾಹುಕಾರ ಭೈರಗೊಂಡ ಬೇರೆ ಕೋಣೆಯಲ್ಲಿದ್ದರು. ಇವರಿಬ್ಬರ ಚಲನವಲನ ನೋಡಿ ಅಲ್ಲಿಗೆ ಬಂದು ಇದು ನನ್ನ ಜಾಗ. ಇಲ್ಲಿ ಜಗಳವಾಡಬೇಡಿ. ಇಲ್ಲಿಂದ ಹೋಗಿ ಎಂದು ಹೇಳಿ ತನ್ನನ್ನು ತಮ್ಮ ಸಂಬಂಧಿಕರ ಜೊತೆ ಇಂಡಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಡಾಂಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.  ಈತ ನೀಡಿದ ದೂರಿನಲ್ಲಿ ಲಕ್ಷ್ಮಿಕಾಂತ ಪಾಟೀಲ ಮೊದಲ ಆರೋಪಿಯಾಗಿದ್ದರೆ, ಭಾಗಪ್ಪ ಹರಿಜನ ಎರಡನೇ ಮತ್ತು ಮಹಾದೇವ ಸಾಹುಕಾರ ಭೈರಗೊಂಡ 3ನೇ ಆರೋಪಿಯಾಗಿದ್ದಾನೆ ಎಂದು ವಿಜಯಪುರ ಎಸ್ಪಿ ಅನುಪಮ ಅಗರ್​ವಾಲ ತಿಳಿಸಿದ್ದಾರೆ.

ಈ ಘಟನೆಯ ಕುರಿತು ಡಾಂಗೆ ಜು. 21ರಂದು ದೂರು ನೀಡಿದ್ದು, ಆರೋಪಿಗಳ ವಿರುದ್ಧ IPC ಸೆಕ್ಷನ್ 506, 511, 384,504, 34 ಅಡಿಯಲ್ಲಿ ಕೇಸ್ ದಾಖಲಾಗಿದೆ    ಈ ಹಿನ್ನೆೆಲಯಲ್ಲಿ ನಿನ್ನೆ ಮಹಾದೇವ ಸಾಹುಕಾರ ಭೈರಗೊಂಡ ಜನ್ಮದಿನದಂದೇ ಆತನನ್ನು ಚಡಚಣ ಪೊಲೀಸರು ಬಂಧಿಸಿದ್ದಾರೆ.  ಅಲ್ಲದೇ, ಆತನನ್ನು ಕೊರೊನಾ ಟೆಸ್ಟಿಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ತಿಳಿಸಿದ್ದಾರೆ.
ಹಣ ಬೇಡಿಕೆ ಪ್ರಕರಣದ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡಗೆ ಈಗ ವಿಜಯಪುರ ಕೇಂದ್ರ ಕಾರಾಗೃಹದಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸಿರುವುದಾಗಿ ವಿಜಯಪುರ ಎಸ್ಪಿ ಅನುಪಮ ಅಗರ್​ವಾಲ್​ ತಿಳಿಸಿದ್ದಾರೆ.

ಇದನ್ನೂ ಓದಿ: ಮಲೆನಾಡಿನಲ್ಲಿ ಅಕೇಶಿಯಾ ನೆಡದಿರಲು ಶಿವಮೊಗ್ಗ ಜನರ ಒತ್ತಾಯಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಭೀಮಾ ತೀರದ ಹಂತಕ ಭಾಗಪ್ಪ ಹರಿಜನ ವಿರುದ್ಧ ನಾನಾ ಪೊಲೀಸ್ ಠಾಣೆಗಳಲ್ಲಿ ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಲಕ್ಷ್ಮಿಕಾಂತ ಪಾಟೀಲ ವಿರುದ್ಧ ನಾಲ್ಕೈದು ಪ್ರಕರಣಗಳು ದಾಖಲಾಗಿವೆ. ಅಲ್ಲದೇ, ಮಹಾದೇವ ಸಾಹುಕಾರ ಭೈರಗೊಂಡ ವಿರುದ್ಧವೂ ಆರು ಪ್ರಕರಣಗಳು ದಾಖಲಾಗಿವೆ.  ಈ ಹಿನ್ನೆಲೆಯಲ್ಲಿ ಇವರಿಗೆ ಈಗ ನಾನಾ ಪ್ರಕರಣಗಳಲ್ಲಿ ನೀಡಲಾಗಿರುವ ಜಾಮೀನು ರದ್ದತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಂದು ಎಸ್ಪಿ ಅನುಪಮ ಅಗರ್​ವಾಲ್ ತಿಳಿಸಿದ್ದಾರೆ.
Youtube Video

ಇಲ್ಲಿ ದೂರು ನೀಡಿದ ವ್ಯಕ್ತಿ ಒಂದು ಕಾಲದಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಆಪ್ತ ಮಿತ್ರ.  ಸಾಹುಕಾರನ ಪ್ರತಿಯೊಂದು ಕಾರ್ಯಕ್ರಮಕ್ಕೆ ತಪ್ಪದೆ ಹಾಜರಾಗಿದ್ದ ವ್ಯಕ್ತಿ.  ಆದರೆ, ಈ ವ್ಯಕ್ತಿಯೇ ಈಗ ಸಾಹುಕಾರ ಅಂದರ್ ಆಗಲು ಕಾರಣನಾಗಿದ್ದು ಮಾತ್ರ ಈಗ ಚರ್ಚೆಗೆ ಕಾರಣವಾಗಿದೆ.
Published by: Sushma Chakre
First published: July 23, 2020, 9:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories