ತುಮಕೂರು (ಫೆ. 18): ತುಮಕೂರು ಜಿಲ್ಲೆಯ ಕೆರೆಗಳ ಪಾಳ್ಯ ಎಂಬ ಊರಿನಲ್ಲಿ ಅಪಘಾತದಿಂದಾಗಿ ಇದುವರೆಗೂ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಾಗಂತ ಇವರೆಲ್ಲ ಒಂದೇ ಬಾರಿ ಆ್ಯಕ್ಸಿಡೆಂಟ್ನಲ್ಲಿ ಸತ್ತವರಲ್ಲ. ಕಳೆದ 6 ತಿಂಗಳಿನಿಂದ ಒಂದರ ಹಿಂದೊಂದರಂತೆ ನಡೆಯುತ್ತಿರುವ ಅಪಘಾತದಲ್ಲಿ ಈ ಊರಿನ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ಕಂಗೆಟ್ಟಿರುವ ಗ್ರಾಮಸ್ಥರು ಇದು ಭೂತ-ಪ್ರೇತಾತ್ಮದ ಕಾಟ ಎಂದು ನಂಬಿದ್ದಾರೆ.
6 ತಿಂಗಳಿಂದೀಚೆಗೆ ಅಮಾವಾಸ್ಯೆ, ಪೌರ್ಣಮಿಯಂದೇ ಅಪಘಾತಗಳು ನಡೆಯುತ್ತಿವೆ. ಪ್ರತಿದಿನ ರಾತ್ರಿ ರಸ್ತೆಯ ಪಕ್ಕದಲ್ಲಿ ಯಾರೋ ಅಳುವ ಧ್ವನಿ ಕೇಳುತ್ತಿದೆ. ಅಪಘಾತದಲ್ಲಿ ರಸ್ತೆಯಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ ಎಂಬ ನಂಬಿಕೆ ಗ್ರಾಮಸ್ಥರದ್ದು. ಅಳುವ ಧ್ವನಿ ಕೇಳಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಮುಂದೆ ಯಾರ ಜೀವ ಹೋಗುವುದೋ ಎಂಬ ಭೀತಿಯಲ್ಲಿದ್ದಾರೆ. ಕೇಳಲು ವಿಚಿತ್ರ ಎನಿಸಿದರೂ ಇದು ಸತ್ಯ.
ಇದನ್ನೂ ಓದಿ: ಸಿಎಂ ಬಿಎಸ್ವೈಗೆ ಮತ್ತೊಂದು ತಲೆನೋವು; ಶೆಟ್ಟರ್ ಮನೆಯಲ್ಲಿ ರಾತ್ರೋರಾತ್ರಿ ಭಿನ್ನಮತೀಯರ ಸಭೆ
ಇದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳ ಪಾಳ್ಯದ ಸದ್ಯದ ಸ್ಥಿತಿ. ಈ ಊರಿನಲ್ಲಿ ಕಳೆದ 6 ತಿಂಗಳಲ್ಲಿ 30ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಈ ಅಪಘಾತಗಳಿಂದ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇದಕ್ಕೆಲ್ಲ ಭಾನಾಮತಿಯೇ ಕಾರಣ ಎಂದು ನಂಬಿರುವ ಗ್ರಾಮಸ್ಥರು ಸಾವಿನ ಭೀತಿಯಿಂದ ಕಂಗೆಟ್ಟಿದ್ದಾರೆ. ಮನೆಯಿಂದ ಹೊರಗೆ ಹೋದವರು ವಾಪಾಸ್ ಬರುತ್ತಾರೋ, ಇಲ್ಲವೋ ಎಂಬ ಆತಂಕದಲ್ಲೇ ಇಲ್ಲಿನ ಜನರು ದಿನ ಕಳೆಯುತ್ತಿದ್ದಾರೆ.
ಇದನ್ನೂ ಓದಿ: ಕ್ಯಾಬ್ ಹತ್ತಿದ ಯುವತಿಗೆ ಲೈಂಗಿಕ ಕಿರುಕುಳ; ಬೆಂಗಳೂರಲ್ಲಿ ಉಬರ್ ಚಾಲಕನ ಬಂಧನ
ಆ್ಯಕ್ಸಿಡೆಂಟ್ನಲ್ಲಿ 50ಕ್ಕೂ ಹೆಚ್ಚು ಜನರು ಸಾವನ್ನಪ್ಪುವ ಮೂಲಕ ಊರಿಗೆ ಊರೇ ಸ್ಮಶಾನವಾದಂತಾಗಿದೆ. ಈ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದವರ ಆತ್ಮಗಳಿಗೆ ಶಾಂತಿ ನೀಡಲು ಗ್ರಾಮಸ್ಥರು 48 ಗಂಟೆಗಳ ಕಾಲ ಪೂಜೆ, ಹೋಮ ನೆರವೇರಿಸಿದ್ದಾರೆ. ಭೂತ. ಭೈರವ ಹೋಮ ನಡೆಸಿ ಪ್ರೇತಾತ್ಮಗಳಿಗೆ ಶಾಂತಿ ಪೂಜೆ ಮಾಡಿದ್ದಾರೆ. ಪೂಜೆ ನಡೆಸಿ ಸತ್ತ ಆತ್ಮಗಳಿಗೆ ಗ್ರಾಮಸ್ಥರು ತರ್ಪಣ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ