ಅನ್ನ ಹಾಕಿದ ಮನೆಗೆ ಕನ್ನ..! ಕದ್ದ ಚಿನ್ನವನ್ನು ಹೂತಿಟ್ಟಿದ್ದು ಎಲ್ಲಿ ಗೊತ್ತಾ?

ಬಂಧಿತರಿಂದ 3 ಲಕ್ಷ ಮೌಲ್ಯದ 87 ಗ್ರಾಂ ಚಿನ್ನ ಹಾಗೂ 650 ಗ್ರಾಂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ.ಪೊಲೀಸರು ಕಳ್ಳರಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

news18-kannada
Updated:February 18, 2020, 3:13 PM IST
ಅನ್ನ ಹಾಕಿದ ಮನೆಗೆ ಕನ್ನ..! ಕದ್ದ ಚಿನ್ನವನ್ನು ಹೂತಿಟ್ಟಿದ್ದು ಎಲ್ಲಿ ಗೊತ್ತಾ?
ಆರೋಪಿಗಳು
  • Share this:
ಬೆಂಗಳೂರು(ಫೆ.18): ಅನ್ನ ಹಾಕಿದ ಮನೆಗೆ ಕನ್ನ ಹಾಕ ಬಾರದು ಎನ್ನುವ ನಾಣ್ಣುಡಿ ಚಾಲ್ತಿಯಲ್ಲಿದೆ. ಆದರೆ, ಬೆಂಗಳೂರಿನಲ್ಲಿ ಅನ್ನ ಹಾಕಿದ ಮನೆಗೆ ಕನ್ನ ಹಾಕಿದ್ದಾರೆ. ಆದರೆ ಕದ್ದವರು ಸಿಕ್ಕಿಹಾಕಿಕೊಂಡಿದ್ದು ಮಾತ್ರ ವಿಚಿತ್ರ ರೀತಿಯಲ್ಲಿ. 

ಹೌದು,ತಮ್ಮ ಮಾಲೀಕ ಮನೆಯಲ್ಲಿ ಇಲ್ಲದ ವೇಳೆ ಸಮಯ ನೋಡಿಕೊಂಡು ಮನೆಗೆ ನುಗ್ಗಿದ್ದಾರೆ. ಶಕ್ತಿವೇಲು ಹಾಗೂ ರಾಕು-ಈ ಇಬ್ಬರು ಕಳ್ಳರು ಸದ್ಯ ಪೊಲೀಸರ ವಶದಲ್ಲಿದ್ದಾರೆ. ಈ ಆರೋಪಿಗಳು ಆಯುಧ್​ ಎಂಬುವವರ ಮನೆಯಲ್ಲಿ ಸೆಂಟ್ರಿಂಗ್​ ಕೆಲಸ ಮಾಡಿಕೊಂಡು ಇದ್ದರು. ಮಾಲೀಕರ ಕುಟುಂಬ ತಮಿಳುನಾಡಿಗೆ ಹೋದಾಗ ಇಬ್ಬರು ಕಳ್ಳರು ಮನೆಗೆ ನುಗ್ಗಿದ್ದಾರೆ.

ಅಮೆರಿಕ ಅಧ್ಯಕ್ಷರು ಬರುವ ಮುನ್ನ ಅಹಮದಾಬಾದ್​ಗೆ ಬರಲಿದೆ ದಿ ಬೀಸ್ಟ್ ಕಾರು; ಇದರ ವಿಶೇಷತೆಗಳೇನು ಗೊತ್ತಾ?

ಮನೆಯಲ್ಲಿ ಅಪಾರ ಮೌಲ್ಯದ ಚಿನ್ನಾಭರಣಗಳನ್ನು ಕದ್ದ ಕಳ್ಳರು, ಬಳಿಕ ಅವುಗಳನ್ನು ತಮ್ಮ ಜೊತೆ ಕೊಂಡೊಯ್ದಿಲ್ಲ. ಬದಲಾಗಿ ಕದ್ದ ಚಿನ್ನವನ್ನು ಮಾಲೀಕನ ಮನೆ ಮುಂದೆಯೇ ಹೂತಿಟ್ಟಿದ್ದಾರೆ. ಮನೆಗೆ ಬಂದ ಮಾಲೀಕನಿಗೆ ಕಳ್ಳತನವಾಗಿರುವ ವಿಷಯ ತಿಳಿದಿದೆ.

ಬಳಿಕ ಮಾಲೀಕ ಶ್ರೀರಾಂಪುರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಕೊನೆಗೂ ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 3 ಲಕ್ಷ ಮೌಲ್ಯದ 87 ಗ್ರಾಂ ಚಿನ್ನ ಹಾಗೂ 650 ಗ್ರಾಂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ.ಪೊಲೀಸರು ಕಳ್ಳರಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ 50 ವರ್ಷಗಳಿಂದ ಸೂರಿಗಾಗಿ ನಿಲ್ಲದ ವಸತಿ ರಹಿತರ ಹೋರಾಟ; ಜನಪ್ರತಿನಿಧಿಗಳಿಗೆ ಧ್ವನಿ ಕೇಳುವುದೆಂದೋ?
First published: February 18, 2020, 8:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading