ಆನೇಕಲ್​ನಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲೈನ್​ಮ್ಯಾನ್ ದಾರುಣ ಸಾವು

ಮಂಗಳವಾರ ಸಂಜೆ ತಮಿಳುನಾಡು ಗಡಿಯ ಸಬ್ ಮಂಗಲ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ ಎಂಬ ದೂರು ಸ್ಥಳೀಯರಿಂದ ಆನೇಕಲ್ ಉಪ ವಿಭಾಗಕ್ಕೆ ಮಾಹಿತಿ ರವಾನೆಯಾಗುತ್ತದೆ. ಕೂಡಲೇ ಕರ್ತವ್ಯದಲ್ಲಿ ಷಪತ್ ಅಲಿ ಮತ್ತೊಬ್ಬ ಸೀನಿಯರ್ ಲೈನ್ ಮ್ಯಾನ್ ಟ್ರಾನ್ಸ್ ಪಾರ್ಮರ್ಗಳ ಪರಿಶೀಲನೆ ನಡೆಸುತ್ತಾರೆ.

news18-kannada
Updated:July 8, 2020, 7:42 AM IST
ಆನೇಕಲ್​ನಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲೈನ್​ಮ್ಯಾನ್ ದಾರುಣ ಸಾವು
ಸಾಂದರ್ಭಿಕ ಚಿತ್ರ
  • Share this:
ಆನೇಕಲ್ (ಜು. 8): ಕೊರೋನಾ ರಣಕೇಕೆ ನಡುವೆಯೂ ಆತನಿಗಿತ್ತು ಕರ್ತವ್ಯ ನಿಷ್ಠೆ. ಎಲ್ಲಿ ನೋಡಿದರೂ ಕೊರೋನಾ ಪಾಸಿಟಿವ್ ಪ್ರಕರಣಗಳದ್ದೇ ಮಾತು. ಮನೆಯಿಂದ ಹೊರಬಂದರೆ ನಮಗೆಲ್ಲಿ ಕೊರೊನಾ ತಗುಲುತ್ತದೋ ಎನ್ನುವ ಭಯ ಪ್ರತಿಯೊಬ್ಬರ ಮನದಲ್ಲಿ ಮಾರ್ದನಿಸುತ್ತಿರುವುದಂತೂ ಸುಳ್ಳಲ್ಲ. ಇಷ್ಟೆಲ್ಲ ಆತಂಕ, ಭಯದ ನಡುವೆಯೂ ಕರ್ತವ್ಯ ನಿಷ್ಠೆ ತೋರುತ್ತಿದ್ದ ಕೊರೊನಾ ವಾರಿಯರ್ ಇ ದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಹೌದು, ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಬ್ ಮಂಗಲ ಗ್ರಾಮದ ಬಳಿ 11 ಕೆವಿ ಟ್ರಾನ್ಸಪಾರ್ಮರ್ ಕಂಬದ ಮೇಲೇರಿ ದುರಸ್ತಿ ಮಾಡುತ್ತಿದ್ದ ಲೈನ್ ಮ್ಯಾನ್ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಕನಕಗಿರಿ ಮೂಲದ ಷಪತ್ ಅಲಿ ಖಾನ್ ತನ್ನದಲ್ಲದ ತಪ್ಪಿಗೆ ಸಾವನ್ನಪ್ಪಿದ್ದಾನೆ. ಕೆಲಸದಲ್ಲಿ ಸದಾ ಶ್ರದ್ಧೆ ನಿಷ್ಠೆ ಹೊಂದಿದ್ದ ಷಪತ್ ಅಲಿ ಇತ್ತೀಚೆಗೆ ತಾನೇ ಬೆಸ್ಕಾಂನ ಖಾಯಂ ನೌಕರನಾಗಿ ಪ್ರಮೋಷನ್ ಸಿಕ್ಕಿತ್ತು. ಕೊರೊನಾ ನಡುವೆಯೂ ಒಂದು ದಿನ ರಜೆ ಸಹ ಹಾಕದೆ ಕರ್ತವ್ಯ ನಿರ್ವಹಿಸಿದ್ದ.  ಆದರೆ, ಇದೀಗ ಅದೇ ಕರ್ತವ್ಯ ಆತನನ್ನು ಮರಳಿ ಬಾರದ ಲೋಕಕ್ಕೆ ಕಳುಹಿಸಿಕೊಟ್ಟಿದೆ.

ಇದನ್ನೂ ಓದಿ: Murder News: ಕಸದ ರಾಶಿಯಲ್ಲಿ ಬಿದ್ದಿತ್ತು 14 ವರ್ಷದ ಬಾಲಕಿಯ ಸುಟ್ಟ ಮೃತದೇಹ!

ಮಂಗಳವಾರ ಸಂಜೆ ತಮಿಳುನಾಡು ಗಡಿಯ ಸಬ್ ಮಂಗಲ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ ಎಂಬ ದೂರು ಸ್ಥಳೀಯರಿಂದ ಆನೇಕಲ್ ಉಪ ವಿಭಾಗಕ್ಕೆ ಮಾಹಿತಿ ರವಾನೆಯಾಗುತ್ತದೆ. ಕೂಡಲೇ ಕರ್ತವ್ಯದಲ್ಲಿ ಷಪತ್ ಅಲಿ ಮತ್ತೊಬ್ಬ ಸೀನಿಯರ್ ಲೈನ್ ಮ್ಯಾನ್ ಟ್ರಾನ್ಸ್ ಪಾರ್ಮರ್ಗಳ ಪರಿಶೀಲನೆ ನಡೆಸುತ್ತಾರೆ. ಈ ವೇಳೆ ಸಬ್ ಮಂಗಲ ಗ್ರಾಮದ ಬಳಿ ತಂತಿಯೊಂದು ಕಡಿತಗೊಂಡಿರುತ್ತದೆ. ಈ ಬಗ್ಗೆ ಮುಖ್ಯ ವಿದ್ಯುತ್ ಸ್ಟೇಷನ್​ಗೆ ಮಾಹಿತಿ ನೀಡಿ ದುರಸ್ತಿಯಾಗುವವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ತಿಳಿಸಿರುತ್ತಾರೆ.

Bangalore Anekal Lineman Died from Officers Negligence.
ಸಾವನ್ನಪ್ಪಿದ ಲೈನ್​ಮ್ಯಾನ್


ಹೇಗೂ ವಿದ್ಯುತ್ ಕಡಿತಗೊಳಿಸಿರುತ್ತಾರೆ ಎಂದು ಎಂದಿನಂತೆ ಷಪತ್ ಅಲಿ ಖಾನ್  11 ಕೆವಿ ಕಂಬ ಏರುತ್ತಾನೆ. ಆದರೆ, ವಿದ್ಯುತ್ ಕಡಿತಗೊಳಿಸಿರುವುದಿಲ್ಲ. ಹಾಗಾಗಿ ಕಂಬ ಏರಿ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಆತ ಕೆಳಗೆ ಬಿದ್ದಿದ್ದಾನೆ. ಅಕ್ಕಪಕ್ಕದಲ್ಲಿ ಸಾರ್ವಜನಿಕರು ಏನಾಯ್ತು ಎಂದು ನೋಡುವಷ್ಟರಲ್ಲಿ ತಲೆ, ಮುಖ ಮತ್ತು ಕೈಗಳು ಸುಟ್ಟು ಸ್ಥಳದಲ್ಲಿಯೇ ಷಪತ್ ಅಲಿ ಸಾವನ್ನಪ್ಪಿದ್ದಾನೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿಯಾಗಿದೆ. ನ್ಯಾಯ ಕೊಡಿಸುವಂತೆ ಮೃತ ಷಪತ್ ಅಲಿ ಕುಟುಂಬದವರು, ಸ್ನೇಹಿತರು ಆನೇಕಲ್ ಬೆಸ್ಕಾಂ ಕಛೇರಿ ಮುಂಭಾಗ ಪ್ರತಿಭಟನೆ ಸಹ ನಡೆಸಿದ್ದಾರೆ.
ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಇಲಾಖೆ ವತಿಯಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಅಧಿಕಾರಿಗಳ ಎಡವಟ್ಟು ಒಂದು ಜೀವವನ್ನು ಬಲಿ ಪಡೆದುಕೊಂಡಿದ್ದು ಮಾತ್ರ ಸುಳ್ಳಲ್ಲ. ಈ ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

(ವರದಿ : ಆದೂರು ಚಂದ್ರು)
Published by: Sushma Chakre
First published: July 8, 2020, 7:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading