ಡಿಕೆಶಿ ಇಡಿ ಕಸ್ಟಡಿ ಅಂತ್ಯ, ಕೋರ್ಟ್​ಗೆ ಹಾಜರ್; ಜಾಮೀನು ಅಥವಾ ಜೈಲು?; ಇಂದು ನಿರ್ಧಾರವಾಗಲಿದೆ ಮಾಜಿ ಸಚಿವರ ಭವಿಷ್ಯ!

ದೆಹಲಿಯ ರೋಸ್ ಅವೆನ್ಯೂ ರಸ್ತೆಯಲ್ಲಿರುವ ನ್ಯಾಯಾಲಯಕ್ಕೆ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ಇಂದು ಮಧ್ಯಾಹ್ನ ಹಾಜರುಪಡಿಸಲಿದ್ದಾರೆ. ಆದರೆ, ನ್ಯಾಯಾಲಯ ಇಡಿ ವಕೀಲರ ವಾದವನ್ನು ಪುಸ್ಕರಿಸುತ್ತಾ? ಅಥವಾ ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡುತ್ತಾ? ಎಂಬುದನ್ನು ಕಾದು ನೋಡಬೇಕಿದೆ.

MAshok Kumar | news18-kannada
Updated:September 13, 2019, 9:54 AM IST
ಡಿಕೆಶಿ ಇಡಿ ಕಸ್ಟಡಿ ಅಂತ್ಯ, ಕೋರ್ಟ್​ಗೆ ಹಾಜರ್; ಜಾಮೀನು ಅಥವಾ ಜೈಲು?; ಇಂದು ನಿರ್ಧಾರವಾಗಲಿದೆ ಮಾಜಿ ಸಚಿವರ ಭವಿಷ್ಯ!
ಡಿ.ಕೆ. ಶಿವಕುಮಾರ್
  • Share this:
ನವ ದೆಹಲಿ (ಸೆಪ್ಟೆಂಬರ್.13); ಅಕ್ರಮ ಹಣ ಗಳಿಕೆ ಆರೋಪದ ಅಡಿಯಲ್ಲಿ ಕಳೆದ 10 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಇಂದು ಮಹತ್ವದ ದಿನವಾಗಿದೆ. ಜಾರಿ ನಿರ್ದೇಶನಾಲಯ ಕಸ್ಟಡಿ ಇಂದು ಅಂತ್ಯವಾಗಲಿದ್ದು, ಇಡಿ ಅಧಿಕಾರಿಗಳು ಡಿಕೆಶಿಯವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಹೀಗಾಗಿ ಇಂದಾದರೂ ಅವರಿಗೆ ಜಾಮೀನು ಲಭ್ಯವಾಗುತ್ತಾ? ಅಥವಾ ನ್ಯಾಯಾಂಗ ಬಂಧನ ಮುಂದುತರೆಯುತ್ತಾ? ಎಂಬುದು ಇಂದು ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ.

ಇಡಿ ಇಲಾಖೆಯ ಮೂಲಗಳ ಪ್ರಕಾರ ಡಿ.ಕೆ.ಶಿವಕುಮಾರ್ ಅಧಿಕಾರಿಗಳ ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನಲಾಗುತ್ತಿದೆ. ಆರಂಭದಲ್ಲಿ ಸಮನ್ಸ್ ನೀಡಿದ್ದಾಗಲೂ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿರಲಿಲ್ಲ. ಇದೀಗ ನ್ಯಾಯಾಂಗ ವಶಕ್ಕೆ ಪಡೆದ ಮೇಲೂ ಯಾವುದೇ ರೀತಿ ವಿಚಾರಣೆಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಡಿಕೆಶಿ ಅವರನ್ನು ಇನ್ನೂ 4 ದಿನ ಇಡಿ ಕಸ್ಟಡಿಗೆ ನೀಡಬೇಕು ಎಂದು ಜಾರಿ ನಿರ್ದೇಶನಾಲಯದ ವಕೀಲರು ನ್ಯಾಯಾಲಯದ ಎದುರು ಮನವಿ ಮಾಡುವ ಸಾಧ್ಯತೆ ಇದೆ.

ಆದರೆ, ಈವರೆಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರನ್ನು ಸಮನ್ಸ್ ನೀಡಿ 4 ದಿನ ನಡೆಸಿದ ವಿಚಾರಣೆಯೂ ಸೇರಿ ಈವರೆಗೆ ಒಟ್ಟು 14 ದಿನ ವಿಚಾರಣೆ ನಡೆಸಿದ್ದಾರೆ. ಡಿಕೆಶಿ ಎಲ್ಲಾ ರೀತಿಯಲ್ಲೂ ಅಧಿಕಾರಿಗಳ ವಿಚಾರಣೆಗೆ ಸಹಕರಿಸಿದ್ದಾರೆ. ಆದರೆ, ಇಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈವರೆಗೆ ಕಲೆಹಾಕಿಲ್ಲ. ಹೀಗಾಗಿ ಜಾಮೀನು ಅರ್ಜಿಯನ್ನು ಪುಸ್ಕರಿಸಬೇಕು ಎಂದು ಡಿಕೆಶಿ ಪರ ವಕೀಲರು ಸಹ ನ್ಯಾಯಾಲಯದ ಎದುರು ವಾದ ಮಂಡಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ದೆಹಲಿಯ ರೋಸ್ ಅವೆನ್ಯೂ ರಸ್ತೆಯಲ್ಲಿರುವ ನ್ಯಾಯಾಲಯಕ್ಕೆ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ಇಂದು ಮಧ್ಯಾಹ್ನ ಹಾಜರುಪಡಿಸಲಿದ್ದಾರೆ. ಆದರೆ, ನ್ಯಾಯಾಲಯ ಇಡಿ ವಕೀಲರ ವಾದವನ್ನು ಪುಸ್ಕರಿಸುತ್ತಾ? ಅಥವಾ ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡುತ್ತಾ? ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಡಿಕೆ ಶಿವಕುಮಾರ್​ ಬೆಂಬಲಕ್ಕೆ ನಿಲ್ಲಿ; ರಾಜ್ಯ ಕಾಂಗ್ರೆಸ್​ ನಾಯಕರಿಗೆ ಸೋನಿಯಾ ಗಾಂಧಿ ಆದೇಶ

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ