ನಿರ್ದೇಶಕರು ಅಂದ್ರೆ ನಿಮ್ಮ ಲೆಕ್ಕದಲ್ಲಿ ಫಿಲ್ಮ್ ಮಾತ್ರ ಮಾಡ್ತಾರೆ ಅಂದುಕೊಂಡು ಇರುತ್ತೀರಾ ಅಲ್ವಾ. ಆದರೆ, ಇಲ್ಲೊಬ್ಬ ನಿರ್ದೇಶಕ ಬ್ಯಾಂಕ್ನವರಿಗೆ ನಾಮ ಹಾಕಲು ಒಂದೊಳ್ಳೆ ಸ್ಟೋರಿ ರೆಡಿಮಾಡಿ ಅದನ್ನ ಎಷ್ಟು ನೀಟಾಗಿ ಎಕ್ಸಿಕ್ಯೂಟ್ ಕೂಡ ಮಾಡಿದ್ದಾರೆ ಗೊತ್ತಾ. ನಿರ್ದೇಶಕನ ಸಸ್ಪೆನ್ಸ್ ಸ್ಟೋರಿಗೆ ಕೊನೆಗೂ ಪೊಲೀಸರು ಕ್ಲೈಮ್ಯಾಕ್ಸ್ ಕೊಟ್ಟಿದ್ದಾರೆ. ಹೌದು, ಹೇಳಿ ಕೇಳಿ ಈತ ಸ್ಯಾಂಡಲ್ವುಡ್ನ ನಿರ್ದೇಶಕ. ಈತ ನಿರ್ದೇಶನ ಮಾಡಿರೋದು ಮಧುರ ಸ್ವಪ್ನ ಎನ್ನುವ ಚಿತ್ರ. ಕೇವಲ ಚಿತ್ರ ನಿರ್ದೇಶನ ಮಾಡಿಕೊಂಡಿದ್ರೆ ಹೀಗೆ ಪೊಲೀಸ್ ಠಾಣೆಯಲ್ಲಿ ಈತನನ್ನ ನೋಡೊ ಪ್ರಮೇಯವೇ ಬರ್ತಿಲಿಲ್ಲ. ಹೌದು, ಈ ನಿರ್ದೇಶಕನ ಹೆಸರು ಕರಮಲ ಬಾಲರವಿಂದ್ರನಾಥ. ಈತನ ಜೊತೆ ಇದ್ದ ಶಿವಕುಮಾರ್ ಎಂಬುವರು ಸೇರಿಕೊಂಡು ಸಿನಿಮಾ ಸ್ಟೈಲ್ನಲ್ಲೇ ಖಾಸಗಿ ಬ್ಯಾಂಕ್ಗೆ ವಂಚನೆ ಮಾಡಿ ಈಗ ಜೈಲು ಪಾಲಾಗಿದ್ದಾರೆ.
ನಿರ್ದೇಶಕ ಕರಮಲ ಬಾಲರವಿಂದ್ರನಾಥ ಖಾಸಗಿ ಬ್ಯಾಂಕ್ನಲ್ಲಿ ಚಿನ್ನ ಅಡವಿಟ್ಟು 42.91 ಲಕ್ಷ ಹಣ ಪಡೆದಿದ್ದ. ಆದರೆ, ಸಾಲವನ್ನ ಮಾತ್ರ ಮರುಪಾವತಿ ಮಾಡಿರಲಿಲ್ಲ. ಬ್ಯಾಂಕ್ ಅಧಿಕಾರಿಗಳು ಎಷ್ಟೇ ನೊಟೀಸ್ ಕೊಟ್ರೂ ಕೂಡ ಕ್ಯಾರೆ ಅಂತಿರಲಿಲ್ಲ. ಆಗಲೇ ಬ್ಯಾಂಕ್ ಅಧಿಕಾರಿಗಳಿಗೆ ಅನುಮಾನ ಶುರುವಾಗುತ್ತೆ.
ಚಿನ್ನಾಭರಣ ಅಸಲಿಯೋ ಅಥವಾ ನಕಲಿಯೋ ಅಂತ ಪರೀಕ್ಷೆ ನಡೆಸುತ್ತಾರೆ. ಆಗ ಅಡವಿಟ್ಟಿರುವುದು ಎಲ್ಲ ನಕಲಿ ಅಂತಾ ಗೊತ್ತಾಗುತ್ತೆ. ತಕ್ಷಣವೇ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ. ನಿರ್ದೇಶಕನಿಗೆ ಬಲೆ ಬೀಸಿದ್ದ ಪೊಲೀಸರು ಆತನನ್ನ ಬಂಧಿಸಿ ವಿಚಾರಣೆ ನಡೆಸುತ್ತಾರೆ.
ಇದನ್ನೂ ಓದಿ: ಮತ್ತೆ ಒಂದಾಗಲಿರುವ ದಿ ವಿಲನ್ ಜೋಡಿ: ಕಿಚ್ಚ ಸುದೀಪ್ ನಿರ್ದೇಶನದಲ್ಲಿ ಶಿವಣ್ಣ ಅಭಿನಯ
ಆಗ ಇನ್ನೊಬ್ಬ ಆರೋಪಿ ಶಿವಕುಮಾರ್ ಇತನಿಗೆ ನೆರವು ನೀಡಿರುವ ಬಗ್ಗೆ ವಿಷಯ ತಿಳಿಯುತ್ತದೆ. ಅಷ್ಟಕ್ಕೂ ಈ ಶಿವಕುಮಾರ್ ಅಕ್ಕಸಾಲಿಗ. ಚಿನ್ನಾಭರಣ ತಯಾರಿಕೆಯಲ್ಲಿ ಎಕ್ಸ್ಪರ್ಟ್. ತಾಮ್ರದ ಆಭರಣಗಳಿಗೆ ಚಿನ್ನದ ಲೇಪನ ಮಾಡಿ ಕೊಡುತ್ತಿದ್ದ. ಇದನ್ನೆ ಬ್ಯಾಂಕ್ನಲ್ಲಿ ಈ ನಿರ್ದೇಶಕ ಅಡವಿಟ್ಟು ಹಣ ಪಡೆತ್ತಿದ್ದ ಅನ್ನೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿನಿಮಾ ಪ್ಲಾಫ್ ಆಗಿದ್ದು, ಹಣಕ್ಕಾಗಿ ಈ ಪ್ಲಾನ್ ಮಾಡಿದ್ದ ಅನ್ನೋದು ಗೊತ್ತಾಗಿದೆ. ಆರೋಪಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಶಿವಕುಮಾರ್ ಕೋಲಾರದಲ್ಲಿ ಕೂಡ ಇದೇ ರೀತಿಯ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಇಬ್ಬರು ಸೇರಿ ಇನ್ನೂ ಸಾಕಷ್ಟು ಕಡೆ ಇದೇ ರೀತಿಯ ವಂಚನೆ ಮಾಡಿರುವ ಬಗ್ಗೆ ಪೊಲೀಸರಿಗೆ ಅನುಮಾನ ಹುಟ್ಟಿದ್ದು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ರಂಗನಾಯಕ ಚಿತ್ರದ ಸೆಟ್ನಲ್ಲಿ ನವರಸನಾಯಕ ಜಗ್ಗೇಶ್-ಗುರುಪ್ರಸಾದ್
ಇನ್ನು ಸಿನಿಮಾದಲ್ಲಿ ನಷ್ಟವಾಗಿದ್ದ ಹಿನ್ನಲೆ ಹಣಕಾಸಿನ ಸಮಸ್ಯೆಯಾಗಿ ಈ ರೀತಿ ಮಾಡಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಬಹಳ ವರ್ಷಗಳಿಂದ ಚಿನ್ನ ಲೇಪಿತ ಲೋಹ ವಸ್ತುಗಳನ್ನ ಬೇರೆ ಬ್ಯಾಂಕ್ಗಳಿಗೂ ಅಡವಿಟ್ಟಿರೋ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ರಾಜಾಜಿನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಜೊತೆ ಕೆಲವ್ರು ಕೈ ಜೋಡಿಸಿರೊ ಅನುಮಾನವಿದ್ದು, ವಿಚಾರಣೆ ಮಾಡಲಾಗುತ್ತಿದೆ. ಆ ಸಂದರ್ಭದಲ್ಲಿ ಅಡಮಾನವಿಟ್ಟುಕೊಂಡಿದ್ದ ಬ್ಯಾಂಕ್ ಸಿಬ್ಬಂದಿಯ ವಿಚಾರಣೆಯನ್ನೂ ನಡೆಸಲಾಗುತ್ತಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ