ವಿದ್ಯಾರ್ಥಿನಿಯನ್ನು ಮಂಚಕ್ಕೆ ಕರೆದ ಶಿಕ್ಷಕ; ಸಲ್ಲಾಪದ ಫೋಟೋ ವೈರಲ್ ಆಗುತ್ತಿದ್ದಂತೆ ಕಾಮುಕ ಪರಾರಿ

ಇಬ್ಬರು ಹೆಂಡತಿಯರ ಮುದ್ದಿನ ಗಂಡ ಸಿದ್ದರಾಜು ಧನುರ್ವಾಯು ರೋಗದಿಂದ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾನೆ. ಆದರೂ ಯುವತಿಯೊಂದಿಗೆ ಸರಸ-ಸಲ್ಲಾಪ ನಡೆಸುತ್ತಿದ್ದ. ಇತ್ತೀಚೆಗೆ ಆತ ತನ್ನ ವಿದ್ಯಾರ್ಥಿನಿ ಜೊತೆ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಅಮಾನತುಗೊಂಡಿರುವ ನಂಜನಗೂಡಿನ ಶಿಕ್ಷಕ ಕೆ. ಸಿದ್ದರಾಜು

ಅಮಾನತುಗೊಂಡಿರುವ ನಂಜನಗೂಡಿನ ಶಿಕ್ಷಕ ಕೆ. ಸಿದ್ದರಾಜು

  • Share this:
ಮೈಸೂರು (ಮಾ. 2): ಭಾರತೀಯ ಪರಂಪರೆಯಲ್ಲಿ ಅಪ್ಪ-ಅಮ್ಮನ ನಂತರ ಗುರುವಿಗೆ ಬಹಳ ಉನ್ನತವಾದ ಸ್ಥಾನವಿದೆ. ಶಿಕ್ಷಕನನ್ನು ದೇವರು ಎಂದು ಕೂಡ ಪರಿಗಣಿಸಲಾಗುತ್ತದೆ. ಆದರೆ, ಮೈಸೂರಿನ ಶಿಕ್ಷಕನೋರ್ವ ವಿದ್ಯಾರ್ಥಿನಿಯನ್ನು ಮಂಚಕ್ಕೆ ಕರೆದು, ಕಾಮಪಾಠ ಮಾಡಿದ್ದಾನೆ. ತನ್ನ ರಾಸಲೀಲೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಕಾಮುಕ ಶಿಕ್ಷಕ ಪರಾರಿಯಾಗಿದ್ದಾನೆ.

ಮೈಸೂರಿನ ನಂಜನಗೂಡು ತಾಲೂಕಿನ ರಾಂಪುರ ಸರ್ಕಾರಿ ಶಾಲೆಯ ಶಿಕ್ಷಕನ ರಾಸಲೀಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿನ 58 ವರ್ಷದ ಶಿಕ್ಷಕ ಸಿದ್ದರಾಜು ತನ್ನ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಆತನ ರಾಸಲೀಲೆಯ ಫೋಟೋ ವೈರಲ್ ಆಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ.

Mysore Teacher Nude Photo with Student Goes Viral in Facebook
ವಿದ್ಯಾರ್ಥಿನಿ ಜೊತೆ ಶಿಕ್ಷಕ ಸಿದ್ದರಾಜು ಸಲ್ಲಾಪ


20 ವರ್ಷದ ತನ್ನ ಹಳೆಯ ವಿದ್ಯಾರ್ಥಿನಿಗೆ ಕಾಮಸೂತ್ರದ ಪಾಠ ಮಾಡಿರುವ 58 ವರ್ಷದ ಸಿದ್ದರಾಜು ಎಂಬ ಶಿಕ್ಷಕ ಮಾಜಿ ಸಚಿವ ಡಿ.ಟಿ. ಜಯಕುಮಾರ್ ಅವರ ಆಪ್ತ ಸಹಾಯಕನಾಗಿದ್ದ. ತನ್ನ ಶಾಲೆಯ ಹಳೆಯ ವಿದ್ಯಾರ್ಥಿನಿಗೆ ನೀತಿ ಪಾಠ ಹೇಳಿಕೊಟ್ಟವನು ಈಗ ಸರಸ-ಸಲ್ಲಾಪ ನಡೆಸಿರುವ ಫೋಟೋಗಳು ವೈರಲ್ ಆಗಿವೆ. ನಂಜನಗೂಡು ತಾಲೂಕಿನ ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಮುಕ ಶಿಕ್ಷಕ ಸಿದ್ದರಾಜು ನಿಜವಾದ ಬಣ್ಣ ಬಯಲಾಗಿದ್ದು, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಗ್ರಾಮದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ತುಮಕೂರಿನಲ್ಲಿ ಆಪರೇಷನ್ ಚಿರತೆ; ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ಕಣ್ಣಿಗೆ ಬಿದ್ದಿಲ್ಲ ನರಭಕ್ಷಕ ಪ್ರಾಣಿ

ಇಬ್ಬರು ಹೆಂಡತಿಯನ್ನು ಹೊಂದಿರುವ ಸಿದ್ದರಾಜು ಧನುರ್ವಾಯು ರೋಗದಿಂದ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾನೆ. ಆದರೂ ಯುವತಿಯೊಂದಿಗೆ ಕಾಮದಾಟ ಆಡುತ್ತಿದ್ದ. ದಿವಂಗತ ಡಿ.ಟಿ. ಜಯಕುಮಾರ್ ಸಚಿವರಾಗಿದ್ದ ಅವಧಿಯಲ್ಲಿ ಅವರಿಗೆ ಆಪ್ತ ಸಹಾಯಕನಾಗಿದ್ದ ಸಿದ್ದರಾಜು ಸುಮಾರು 25 ವರ್ಷಗಳಿಂದ ರಾಂಪುರ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದಾನೆ. ಸಿದ್ದರಾಜು ವರ್ತನೆಯಿಂದ ಬೇಸತ್ತಿರುವ ಗ್ರಾಮಸ್ಥರು ಆತನನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.
First published: