ಚಿಕ್ಕಮಗಳೂರಿನಲ್ಲಿ ಪೊಲೀಸರನ್ನು ಚರಂಡಿಗೆ ತಳ್ಳಿದ ಕಳ್ಳ; ರಕ್ತ ಸುರಿಯುತ್ತಿದ್ದರೂ ಚಿಕಿತ್ಸೆ ನೀಡದ ವೈದ್ಯ

ಗಂಭೀರವಾಗಿ ಗಾಯಗೊಂಡ ಪೊಲೀಸ್ ಸರ್ಕಲ್ ​ಇನ್​ಸ್ಪೆಕ್ಟರ್​ಗೆ ಚಿಕಿತ್ಸೆ ನೀಡಲು ವೈದ್ಯ ಡಾ. ವಿನಯ್ ನಿರಾಕರಿಸಿದ್ದಾರೆ. ಚಿಕಿತ್ಸೆ ನೀಡುವಂತೆ ವೈದ್ಯರ ಬಳಿ ಪೊಲೀಸ್ ಅಧಿಕಾರಿ ಅಂಗಲಾಚಿದರೂ ಅವರು ಸ್ಪಂದಿಸಿಲ್ಲ.

  • Share this:
ಚಿಕ್ಕಮಗಳೂರು (ಮಾ.20): ತನ್ನನ್ನು ಹಿಡಿಯಲು ಬಂದ ಪೊಲೀಸರನ್ನೇ ಚರಂಡಿಗೆ ತಳ್ಳಿ ಎಸ್ಕೇಪ್ ಆಗಲು ಯತ್ನಿಸಿದ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚರಂಡಿಗೆ ಬಿದ್ದ ಸರ್ಕಲ್ ​ಇನ್​ಸ್ಪೆಕ್ಟರ್​ಗೆ ಗಂಭೀರವಾಗಿ ಗಾಯಗೊಂಡಿದ್ದರೂ ಚಿಕಿತ್ಸೆ ನೀಡಲು ಚಿಕ್ಕಮಗಳೂರಿನ ವೈದ್ಯರು ನಿರಾಕರಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ಪೊಲೀಸ್ ಸರ್ಕಲ್ ​ಇನ್​ಸ್ಪೆಕ್ಟರ್​ಗೆ ಚಿಕಿತ್ಸೆ ನೀಡಲು ವೈದ್ಯ ಡಾ. ವಿನಯ್ ನಿರಾಕರಿಸಿದ್ದಾರೆ. ಚಿಕಿತ್ಸೆ ನೀಡುವಂತೆ ವೈದ್ಯರ ಬಳಿ ಪೊಲೀಸ್ ಅಧಿಕಾರಿ ಅಂಗಲಾಚಿದರೂ ಅವರು ಸ್ಪಂದಿಸಿಲ್ಲ. ಹಾಸನ ಗ್ರಾಮಾಂತರ ಠಾಣೆಯ ಸರ್ಕಲ್ ​ಇನ್​ಸ್ಪೆಕ್ಟರ್ ಸತ್ಯನಾರಾಯಣ ಅವರು ಗಾಯಗೊಂಡ ಪೊಲೀಸ್ ಅಧಿಕಾರಿ. ಕಳೆದ ರಾತ್ರಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಬಳಿ ಘಟನೆ ನಡೆದಿದೆ.

ಇದನ್ನೂ ಓದಿ: ಕೊರೋನಾ ಭೀತಿ; ಬೆಂಗಳೂರಿನಲ್ಲಿ ನಕಲಿ ಸ್ಯಾನಿಟೈಸರ್, ಹ್ಯಾಂಡ್​ ರಬ್ ತಯಾರಿಸುತ್ತಿದ್ದವರ ಬಂಧನ

ಎಸ್ಕೇಪ್ ಆಗಲು ಯತ್ನಿಸಿದ ಕಳ್ಳ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರಿಂದ ಗಾಯಗೊಂಡಿದ್ದರು. ಚಿಕಿತ್ಸೆ ನೀಡುವಂತೆ ಪರಿಪರಿಯಾಗಿ ಕೇಳಿಕೊಂಡರೂ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ರಕ್ತ ಸುರಿಯುತ್ತಿದ್ದರೂ ನೋಡಿ ಸುಮ್ಮನಾದ ವೈದ್ಯರ ವಿರುದ್ಧ ಹಾಸನ ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ. ಕೊನೆಗೆ ಚಿಕಿತ್ಸೆ ಸಿಗದೆ ಪೊಲೀಸರು ವಾಪಸ್ಸಾಗಿದ್ದಾರೆ. ಅಲ್ಲದೆ, ವೈದ್ಯರ ವರ್ತನೆಗೆ ಬೇಸತ್ತು ಸಿಪಿಐ ಸತ್ಯನಾರಾಯಣ ಸಚಿವರಿಗೆ ದೂರು ನೀಡಿದ್ದಾರೆ.
First published: