ನ್ಯೂಯಾರ್ಕ್​ನಲ್ಲಿರುವ ಕನ್ನಡಿಗರ ಜೊತೆ ಆಗಸ್ಟ್‌ 2ರಂದು ರಾಜಮಾತೆ ಪ್ರಮೋದಾದೇವಿ ಸಂವಾದ!

ಡಾ. ಪ್ರಮೋದಾದದೇವಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್​ ಅವರ ಜೊತೆ ಆಗಸ್ಟ್​ 2ರಂದು ಸಂವಾದ ಇಟ್ಟಕೊಳ್ಳಲಾಗಿದೆ. ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ ಗಂಟೆಗೆ ಸಂವಾದ ನಡೆಯಲಿದೆ. ಒಂದು ಗಂಟೆಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.

ಪ್ರಮೋದಾ ದೇವಿ

ಪ್ರಮೋದಾ ದೇವಿ

  • Share this:
ಸಾಂಸ್ಕೃತಿಕ ನಗರಿ ಮೈಸೂರು ನಮ್ಮ ರಾಜ್ಯದ ಹೆಮ್ಮೆ. ಅಲ್ಲಿರುವ ಸಾಂಸ್ಕೃತಿಕ ಶ್ರೀಮಂತಿಕೆ, ಪ್ರವಾಸಿ ತಾಣಗಳು ಇಡೀ ಜಗತ್ತಿನ ಜನರನ್ನು ತನ್ನತ್ತ ಆಕರ್ಷಿಸುತ್ತಲೇ ಇದೆ. ಜನರಿಗೆ ಮೈಸೂರು ನಗರದ ಬಗ್ಗೆ ಇರುವಷ್ಟೇ ಗೌರವ ಅಲ್ಲಿರುವ ರಾಜ ಮನೆತನದ ಬಗ್ಗೆಯೂ ಇದೆ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೂ ರಾಜಮನೆತನಗಳ ಬಗ್ಗೆ ಕೌತುಕ ಇದ್ದೇ ಇದೆ. ಹೀಗಾಇ ರಾಜ ಮನೆತನದ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಕನ್ನಡ ಕೂಟ ನ್ಯೂಯಾರ್ಕ್ ಡಾ. ಪ್ರಮೋದಾದೇವಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜತೆ ವಿಶೇಷ ಸಂವಾದ ಏರ್ಪಡಿಸಿದೆ.

ನ್ಯೂಯಾರ್ಕ್​ನಲ್ಲಿರುವ ಕನ್ನಡಿಗರೇ ಆರಂಭಿಸಿರುವ ಈ ಕನ್ನಡ ಕೂಟಕ್ಕೆ 48 ವರ್ಷಗಳ ಇತಿಹಾಸವಿದೆ. ಈ ಕೂಟ ಆರಂಭವಾದಾಗಿನಿಂದಲೂ ಪ್ರತಿ ವರ್ಷ ಒಂದಿಲ್ಲೊಂದು ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಲೇ ಬರುತ್ತಿದೆ. ಕೊರೋನಾ ಹರಡುವಿಕೆ ಆರಂಭವಾದ ನಂತರ ಮನೆಯಲ್ಲೇ ಇರುವ ಪರಿಸ್ಥಿತಿ ಬಂದೊಗಿತ್ತು. ಈ ವೇಳೆ ಯೋಗ, ಮಕ್ಕಳ ಕಾರ್ಯಕ್ರಮ ಹಾಗೂ ಕೆಲವು ತರಬೇತಿ ಸೇರಿ 80ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿರುವುದು ಕನ್ನಡ ಕೂಟ ನ್ಯೂಯಾರ್ಕ್​ನ ಹೆಚ್ಚುಗಾರಿಕೆ. ಈಗ ಇದೇ ಮೊದಲ ಬಾರಿಗೆ ರಾಜ ಮನೆತನದವರನ್ನು ಮಾತನಾಡಿಸಲು ಕೂಟದವರು ಮುಂದಾಗಿದ್ದಾರೆ.ಡಾ. ಪ್ರಮೋದಾದದೇವಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್​ ಅವರ ಜೊತೆ ಆಗಸ್ಟ್​ 2ರಂದು ಸಂವಾದ ಇಟ್ಟಕೊಳ್ಳಲಾಗಿದೆ. ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ ಗಂಟೆಗೆ ಸಂವಾದ ನಡೆಯಲಿದೆ. ಒಂದು ಗಂಟೆಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಇದನ್ನು ಆನ್​ಲೈನ್​ನಲ್ಲಿ ವೀಕ್ಷಣೆ ಮಾಡಲು ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಲಾಗಿದೆ.

ರಾಜಮಾತೆ ಡಾ. ಪ್ರಮೋದಾದೇವಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಕರೆಸಿ ಮಾತನಾಡಲು ಕಾರಣವೇನು? ಎನ್ನುವ ಪ್ರಶ್ನೆಗೆ ಕನ್ನಡ ಕೂಟ ನ್ಯೂಯಾರ್ಕ್​ನ ಅಧ್ಯಕ್ಷ ಅಜಿತ್​ ಭಾಸ್ಕರ್​ ಶೆಟ್ಟಿ​ ಮಾಹಿತಿ ನೀಡುವುದು ಹೀಗೆ, "ಮೈಸೂರು ಎಂದರೆ ನಮ್ಮ ರಾಜ್ಯಕ್ಕೆ ಹೆಮ್ಮೆ. ಮೈಸೂರು ಸಾಂಸ್ಕೃತಿಕ ರಾಜಧಾನಿ. ಹೀಗಾಗಿ, ಇಲ್ಲಿರುವ ರಾಜ ಕುಟುಂಬದ ಬಗ್ಗೆ ಜನರಿಗೆ ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ, ಡಾ. ಪ್ರಮೋದಾದೇವಿ ಅವರನ್ನು ಕರೆಸಿ ಮಾತನಾಡುತ್ತಿದ್ದೇವೆ. ಅವರ ಜೊತೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ" ಎನ್ನುತ್ತಾರೆ.ಈಗಾಗಲೇ ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​, ಕಿಚ್ಚ ಸುದೀಪ್​, ಸಂಗೀತ ನಿರ್ದೇಶಕ ಗುರು ಕಿರಣ್​, ಸುಧಾಮೂರ್ತಿ ಅವರು ಕನ್ನಡ ಕೂಟ ನ್ಯೂಯಾರ್ಕ್​ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ಕೊರೋನಾ ಲಗ್ಗೆ ಇಟ್ಟ ನಂತರ ಈವರೆಗೆ ಸುಮಾರು 80 ಕಾರ್ಯಕ್ರಮಗಳನ್ನು ಈ ಕೂಟ ಮಾಡಿದೆ. ಇದರಲ್ಲಿ ಯೋಗ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳು ಜನಪ್ರಿಯವಾಗಿತ್ತು.

ಅಜಿತ್​ ಭಾಸ್ಕರ್ ಶೆಟ್ಟಿ


ಕೊರೋನಾ ಸಂದರ್ಭದಲ್ಲಿ ಅಮೆರಿಕದಲ್ಲಿ ಸಿಲುಕಿದ ಅನೇಕರಿಗೆ ಕನ್ನಡ ಕೂಟ ನ್ಯೂಯಾರ್ಕ್​ ಸಹಾಯ ಮಾಡಿದೆ. ಅವರಿಗೆ ಆಶ್ರಯ ನೀಡಿ, ನಂತರ ಮನೆಗೆ ತಲುಪಿಸುವ ಕೆಲಸವನ್ನು ಮಾಡಿದೆ.  ಇದರ ಜೊತೆ, ಮೆಡಿಕ್​ ಕಿಟ್, ಸಾಕಷ್ಟು ಜನರಿಗೆ ಊಟ, ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಗೌರವಿಸುವ ಕೆಲಸವನ್ನು ಈ ಕೂಟ ಮಾಡಿರುವುದು ವಿಶೇಷ.

ಅಜಿತ್​ ಭಾಸ್ಕರ್ ಶೆಟ್ಟಿ ವೃತ್ತಿಯಲ್ಲಿ ಇಂಜಿನಿಯರ್. ಅಲ್ಲದೆ ಅಮೆರಿಕದ ಕ್ರಿಕೆಟ್​ ಒಕ್ಕೂಟದ ನಿರ್ದೇಶಕರು ಕೂಡ ಹೌದು. ಇವೆಲ್ಲದರ ಜೊತೆಗೆ ಕನ್ನಡ ಕೂಟ ನ್ಯೂಯಾರ್ಕ್​ಅನ್ನು ನಿಭಾಯಿಸುವ ಕೆಲಸವನ್ನೂ ಇವರು ವಹಿಸಿಕೊಂಡಿದ್ದಾರೆ.
Published by:Rajesh Duggumane
First published: