ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ - ಬೇರೆ ಭಾಷೆ ವಿಷಯದಲ್ಲಿ ನಾವು ಕಠಿಣವಾಗಿಯೇ ಇರಬೇಕು; ಸಿದ್ಧರಾಮಯ್ಯ

371(ಜೆ) ತಿದ್ದುಪಡಿ ಮಾಡಿದಾಗ ನಮ್ಮ ಸರ್ಕಾರ ಅದನ್ನು ಜಾರಿಗೆ ತಂದಿತು ಈ ಭಾಗದ 6 ಜಿಲ್ಲೆಗಳು ಅಭಿವೃದ್ಧಿ ಆಗದೇ ಹೋದರೆ ಪ್ರಾದೇಶಿಕ ಅಸಮಾನತೆ ಹೊಡೆದೋಡಿಸಲು ಅಸಾಧ್ಯ .

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಕಲಬುರ್ಗಿ(ಫೆ.07) : ಕನ್ನಡ ಭಾಷೆಗೆ, ಕನ್ನಡಿಗರಿಗೆ, ನೆಲ-ಜಲಕ್ಕೆ ಯಾವತ್ತೂ ತೊಂದರೆ ಬರುವುದಿಲ್ಲ. ನಾವೆಲ್ಲ ಈ ನೆಲದ ಮಕ್ಕಳು, ಕನ್ನಡ ಉಳಿವಿಗೆ ಎಲ್ಲರೂ ಶ್ರಮಿಸಬೇಕು. ಯಾರೇ ಹೊರಗಡೆಯಿಂದ ಬಂದರೂ ಕನ್ನಡಿಗರಾಗಿ ಬಾಳಬೇಕಾದ ವಾತಾವರಣ ನಿರ್ಮಾಣವಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಹೇಳಿದ್ದಾರೆ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮನುಷ್ಯತ್ವಕ್ಕಿರಲಿ ಉದಾರತೆ ಆದರೆ, ಭಾಷೆ ವಿಷಯದಲ್ಲಿ ನಾವು ಕಠಿಣವಾಗಿಯೇ ಇರಬೇಕಾಗುತ್ತದೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ. ಕಲ್ಯಾಣ ಕರ್ನಾಟಕ ಕನ್ನಡದ ಗಂಡುಮೆಟ್ಟಿನ ನೆಲ. ಕನ್ನಡದ ಸಾರ್ವಭೌಮತೆಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು.

ಸಮ್ಮೇಳನದಲ್ಲಿ 6 ನಿರ್ಣಯ ಕೈಗೊಳ್ಳಲಾಗಿದ್ದು, ಎಲ್ಲ ನಿರ್ಣಯಗಳು ಮಹತ್ವವಾಗಿದ್ದು,
ಕನ್ನಡ ನಾಡಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮ ಕನ್ನಡವಾಗಿರಬೇಕು, ಪೋಷಕರು ಇದಕ್ಕೆ ಬೆಂಬಲವಾಗಿ ನಿಲ್ಲಬೇಕು, ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿ ಕಲಿಯಬೇಕು, ಇಂಗ್ಲೀಷ್ ಭ್ರಮೆಯಿಂದ ಪ್ರತಿಯೊಬ್ಬರೂ ಹೊರ ಬರಬೇಕು ಎಂದರು.

ಆಯಾ ಭಾಷೆಗಳಲ್ಲಿಯೇ ಶಿಕ್ಷಣ ಕೊಡಬೇಕು

ಬರಿ ಕನ್ನಡವೊಂದೇ ಅಲ್ಲ, ಆಯಾ ಪ್ರಾಂತೀಯ ಭಾಷೆಯ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕು, ಮಾಧ್ಯಮ ಯಾವುದೆಂದು ನಿರ್ಣಯಿಸಲು ಪೋಷಕರ ನಿರ್ಧಾರಕ್ಕೆ ಬಿಡಲಾಗಿದೆ. ಆದರೆ ಆಯಾ ಪ್ರಾಂತೀಯ ಭಾಷೆಗಳ ರಕ್ಷಣೆಗೆ ಆಯಾ ಭಾಷೆಗಳಲ್ಲಿಯೇ ಶಿಕ್ಷಣ ಕೊಡಬೇಕು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಆಯಾ ಪ್ರಾಂತೀಯ ಭಾಷೆಗಳಲ್ಲಿಯೇ ಶಿಕ್ಷಣ ಕಡ್ಡಾಯ ಮಾಡಿಸಬೇಕು  ಸರ್ಕಾರವನ್ನು ಸಿದ್ದರಾಮಯ್ಯ ಒತ್ತಾಯಿಸಿದರು.

371(ಜೆ) ತಿದ್ದುಪಡಿ ಮಾಡಿದಾಗ ನಮ್ಮ ಸರ್ಕಾರ ಅದನ್ನು ಜಾರಿಗೆ ತಂದಿತು ಈ ಭಾಗದ 6 ಜಿಲ್ಲೆಗಳು ಅಭಿವೃದ್ಧಿ ಆಗದೇ ಹೋದರೆ ಪ್ರಾದೇಶಿಕ ಅಸಮಾನತೆ ಹೊಡೆದೋಡಿಸಲು ಅಸಾಧ್ಯ . ನಂಜುಂಡಪ್ಪ ವರದಿ ಕೇವಲ ಹೈದರಾಬಾದ್ ಕರ್ನಾಟಕಕ್ಕೆ ಭಾಗಕ್ಕೆ ಮಾತ್ರ ಸೀಮಿತವಾಗಿದ್ದಲ್ಲ ಆದರೆ 371(ಜೆ) ಕೇವಲ ಈ ಭಾಗಕ್ಕೆ ಸೀಮಿತ, ಉದ್ಯೋಗ, ಶಿಕ್ಷಣ ಮೀಸಲಾತಿ ಜೊತೆಗೆ ಅಭಿವೃದ್ಧಿಗೂ ಆದ್ಯತೆ ನೀಡಲಾಯಿತು. ನಾನಿದ್ದಾಗ 1 ಸಾವಿರ ಕೋಟಿ ಅನುದಾನದಿಂದ ಆರಂಭಿಸಿ 1500 ಕೋಟಿ ರೂಪಾಯಿಗೆ ಅದನ್ನು ಹೆಚ್ಚಳ ಮಾಡಿದೆ. ಈ ವರ್ಷ 2 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕು ಇಲ್ಲದೇ ಹೋದರೆ ಈ ಭಾಗದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ : ಹಾವೇರಿಗೆ ಕೊನೆಗೂ ದಕ್ಕಿದ ಸಮ್ಮೇಳನ ಆತಿಥ್ಯ - ಕಾರ್ಯಕಾರಣಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ

ಇದೇ ಸಂದರ್ಭದಲ್ಲಿ ಬೀದರ್ ಘಟನೆಯನ್ನು ಪ್ರಸ್ತಾಪಿಸಿದ ಅವರು, ಪೌರತ್ವ ವಿರೋಧಿ ನಾಟಕ ಪ್ರದರ್ಶನ ಮಾಡಿದ ವಿದ್ಯಾರ್ಥಿನಿ ತಾಯಿಯ ಮತ್ತು ಮುಖ್ಯ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿರೋದಕ್ಕೆ ಖಂಡನೀಯವಾಗಿದ್ದು, ವಿನಾಕಾರಣ ಹಾಕಿರುವ ಮೊಕದ್ದಮೆಯನ್ನು ವಾಪಸ್ ಪಡೀಬೇಕು. ಅಭಿವ್ಯಕ್ತಿ ಸ್ವಾತ್ರಂತ್ರ್ಯ ಉಳಿಯಬೇಕು
ಯಾರೇ ಮೂಲಭೂತವಾದಿಯಾದರೂ ಅದನ್ನು ಖಂಡಿಸೊ ಶಕ್ತಿ ನಿಮಗೆ ಬರಬೇಕು ಎಂದು ಸಿದ್ದರಾಮಯ್ಯ ಹೇಳಿದರು.
First published: