ನವದೆಹಲಿ: ಕೇಂದ್ರ ಸರ್ಕಾರಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಸಲ್ಲಿಸಿದ್ದ ಸರ್ಕಾರ ದಾಖಲೆ ಪುಸ್ತಕದಲ್ಲಿ ಆರ್ಎಸ್ಎಸ್ ಶಿಫಾರಸು ಪತ್ರ ಕಂಡುಬಂದಿದೆ. ಸರ್ಕಾರದ ದಾಖಲೆ ಪುಸ್ತಕಗಳಲ್ಲಿ ಸಂಘ-ಸಂಸ್ಥೆಯ ಶಿಫಾರಸು ಪತ್ರ ಕಂಡು ಕಾಂಗ್ರೆಸ್ ಸಂಸದರು ಕೆಂಡಾಮಂಡಲರಾಗಿದ್ದಾರೆ.
ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಸಂಸದರ ನೇತೃತ್ವದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ ದೆಹಲಿಗೆ ಬಂದಿತ್ತು. ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ನಿವಾಸದಲ್ಲಿ ನಿಯೋಗದ ಸದಸ್ಯರು ಸಭೆ ಸೇರಿದ್ದರು. ಈ ವೇಳೆ ಸರ್ಕಾರಿ ಕಡತದಲ್ಲಿ ಆರ್ಎಸ್ಎಸ್ ಶಿಫಾರಸು ಪತ್ರ ಕಂಡು ಬಂದಿದೆ.
ರಾಜ್ಯದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿ ದೆಹಲಿಗೆ ಆಗಮಿಸಿತ್ತು. ಕೇಂದ್ರ ಸಚಿವರ ಭೇಟಿಗೂ ಮುನ್ನ ಡಿವಿಎಸ್ ನಿವಾಸದಲ್ಲಿ ಸಂಸದರು ಸಭೆ ಸೇರಿದ್ದರು. ಸಭೆ ವೇಳೆ ಕೇಂದ್ರ ಸರ್ಕಾರಕ್ಕೆ ನೀಡಲು ತಂದಿದ್ದ ಪುಸ್ತಕದಲ್ಲಿ ಆರ್ಎಸ್ಎಸ್ ಶಿಫಾರಸು ಪತ್ರ ಇರುವುದನ್ನು ಕಾಂಗ್ರೆಸ್ ಸಂಸದರು ನೋಡಿದ್ದಾರೆ. ಇದನ್ನು ನೋಡಿ ಕೋಪಗೊಂಡ ಕೈ ಸಂಸದರು ಪ್ರಾಧಿಕಾರದ ವಿರುದ್ಧ ಆಕ್ರೋಶ ಹೊರಹಾಕಿ, ಸಭೆಯನ್ನು ಬಹಿಷ್ಕರಿಸಿದ್ದಾರೆ.
ಇದನ್ನು ಓದಿ: ಹೆಚ್.ಎಸ್. ದೊರೆಸ್ವಾಮಿ ಅವರ ಅವಹೇಳನದ ಹಿಂದೆ ಬಿಜೆಪಿ ನಾಯಕರ ಷಡ್ಯಂತ್ರ ಇದೆ; ಸಿದ್ದರಾಮಯ್ಯ
ಘಟನೆ ಬಳಿಕ ಮಾತನಾಡಿದ ಕಾಂಗ್ರೆಸ್ ಸಂಸದರು, ಆರ್ಎಸ್ಎಸ್ ನೋಂದಣಿಯಾಗದ ಸಂಸ್ಥೆ. ಬಹುಸಂಖ್ಯೆ ಜನರಿಂದ ಟೀಕೆಗೆ ಒಳಗಾಗಿರುವ ಸಂಘಟನೆ. ಈ ಸಂಘಟನೆಯ ಪತ್ರವನ್ನು ಸರ್ಕಾರಿ ದಾಖಲೆಯಲ್ಲಿ ತುರುಕಲಾಗಿದೆ. ಆಡಳಿತಾರೂಢ ಸರ್ಕಾರವನ್ನು ಮೆಚ್ಚಿಸಲು ಪ್ರಾಧಿಕಾರ ಹೀಗೆ ಮಾಡಿದೆ. ನಾವು ಹಿಂದೆ ಕನ್ನಡದ ಅಭಿವೃದ್ಧಿ ಬಗ್ಗೆ ಸಂಸತ್ತಿನಲ್ಲಿ ಉಲ್ಲೇಖಿಸಿದ್ದೇವೆ. ಅದು ಯಾವುದನ್ನು ಬಳಸದೇ ಆರ್ಆರ್ಎಸ್ ನೀಡಿರುವ ಶಿಫಾರಸ್ಸಿನ ಪತ್ರವನ್ನು ಸೇರಿಸಲಾಗಿದೆ ಎಂದು ಆರೋಪ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ