ಕೊಯಮತ್ತೂರಿನಲ್ಲಿ ತೀರ್ಥಹಳ್ಳಿ ಮೂಲದ ನಕ್ಸಲ್ ಶೋಭಾ ಬಂಧನ

ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಶೋಭಾಗಾಗಿ ಪೊಲೀಸರು ಬಹಳ ದಿನಗಳಿಂದ ಹುಡುಕಾಟ ನಡೆಸಿದ್ದರು. ಈಕೆಯ ಮೇಲೆ ಚಿಕ್ಕಮಗಳೂರು ಜಿಲ್ಲೆಯ ಬೇರೆ ಭಾಗಗಳಲ್ಲೂ ಆರು ಪ್ರಕರಣಗಳಿವೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಚಿಕ್ಕಮಗಳೂರು (ಮಾ. 12): ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ನಕ್ಸಲ್ ಶೋಭಾ  ಎಂಬ ಮಹಿಳೆಯನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ.

ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಶೋಭಾಳಿಗಾಗಿ ಪೊಲೀಸರು ಬಹಳ ದಿನಗಳಿಂದ ಹುಡುಕಾಟ ನಡೆಸಿದ್ದರು. ಈಕೆಯ ಮೇಲೆ ಚಿಕ್ಕಮಗಳೂರು ಜಿಲ್ಲೆಯ ಬೇರೆ ಭಾಗಗಳಲ್ಲೂ ಸಾಕಷ್ಟು ಪ್ರಕರಣಗಳಿವೆ. ತೀರ್ಥಹಳ್ಳಿ ತಾಲೂಕಿನಲ್ಲಿಯೂ ಹಲವು ಪ್ರಕರಣಗಳಿವೆ. ಶೃಂಗೇರಿಯಲ್ಲಿ ಶೋಭಾ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ರಾಷ್ಟ್ರೀಯ ಪಕ್ಷಗಳಲ್ಲಿ ಜಾರಕಿಹೊಳಿಗಳದ್ದೇ ದರ್ಬಾರ್; ಸಿಎಂ ಕನಸು ಹೊಂದಿರುವ ಸತೀಶ್​ಗೆ ಒಲಿದುಬಂದ ಕಾರ್ಯಾಧ್ಯಕ್ಷ ಸ್ಥಾನ

ಕಳೆದ 11 ವರ್ಷಗಳಿಂದ ಶೋಭಾ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಈಕೆಯ ಮೇಲೆ ಒಟ್ಟು 6 ಪ್ರಕರಣಗಳಿವೆ. ಈಕೆಯನ್ನು ಕೊಯಮತ್ತೂರಿನಲ್ಲಿ ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
First published: