• Home
 • »
 • News
 • »
 • state
 • »
 • ಸರ್ಕಾರಿ ಜಮೀನಿನ ಮೇಲೆ ಅಧಿಕಾರಿಗಳ ಕಣ್ಣು; ಯಲಹಂಕ ಬಳಿ 40 ಕೋಟಿಗೆ ಗೋಮಾಳ ಮಾರಲು ಯತ್ನ

ಸರ್ಕಾರಿ ಜಮೀನಿನ ಮೇಲೆ ಅಧಿಕಾರಿಗಳ ಕಣ್ಣು; ಯಲಹಂಕ ಬಳಿ 40 ಕೋಟಿಗೆ ಗೋಮಾಳ ಮಾರಲು ಯತ್ನ

ತಹಶೀಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ 
21.19 ಎಕರೆ ಸರ್ಕಾರಿ ಭೂ ಅತಿಕ್ರಮ ತೆರವು ಕಾರ್ಯಾಚರಣೆ

ತಹಶೀಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ 21.19 ಎಕರೆ ಸರ್ಕಾರಿ ಭೂ ಅತಿಕ್ರಮ ತೆರವು ಕಾರ್ಯಾಚರಣೆ

ಸದರಿ ಭೂಮಿಯ ಖಾತೆಯನ್ನು ಹೈಕೋರ್ಟಿನ ದ್ವಿಸದಸ್ಯ ಪೀಠ ರದ್ದುಗೊಳಿಸಿ, ಜಾಗವನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಯಲಹಂಕ‌ ತಹಶೀಲ್ದಾರ್ ಎನ್ ರಘುಮೂರ್ತಿ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ವಶಕ್ಕೆ ಪಡೆದಿದ್ದು, ಜಾಗದಲ್ಲಿ ಸರ್ಕಾರದ ನಾಮ ಫಲಕ ಅಳವಡಿಸಿದ್ದಾರೆ.

ಮುಂದೆ ಓದಿ ...
 • Share this:

  ಚಿಕ್ಕಬಳ್ಳಾಪುರ (ಮಾ.09): ಯಲಹಂಕ‌ ತಾಲ್ಲೂಕು ವ್ಯಾಪ್ತಿಯ ಬ್ಯಾಟರಾಯನಪುರ ಕ್ಷೇತ್ರಕ್ಕೆ ಸೇರಿದ ಸಂಪಿಗೆಹಳ್ಳಿ ಸಮೀಪದ ಚೊಕ್ಕನಹಳ್ಳಿ ಗ್ರಾಮದ ಸ.ನಂ.
  75/4ರಲ್ಲಿ ಭೂಗಳ್ಳರಿಂದ ಅತಿಕ್ರಮಿಸಲಾಗಿದ್ದ 21.19 ಎಕರೆ ಸರ್ಕಾರಿ ಭೂಮಿಯನ್ನು ಯಲಹಂಕ ತಹಶೀಲ್ದಾರ್ ಎನ್ ರಘುಮೂರ್ತಿ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಸರ್ಕಾರದ ವಶಕ್ಕೆ ಪಡೆದಿದ್ದಾರೆ.


  ಜಾಗದ ಅಕ್ರಮಕ್ಕೆ ಸಂಬಂಧಿಸಿದಂತೆ ಓರ್ವ ಸಬ್ ರಿಜಿಸ್ಟರ್ ಸೇರಿದಂತೆ ಒಟ್ಟು 7 ಜನರ ಮೇಲೆ ಸಂಪಿಗೆಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ. ಸದರಿ ಜಮೀನು ಕಂದಾಯ ದಾಖಲೆಗಳ ಪ್ರಕಾರ ಸರ್ಕಾರಿ ಜಾಗ ಎಂದೇ ಗುರುತಿಸಲ್ಪಟ್ಟಿತ್ತು.  ಆದರೆ ಸದರಿ ಭೂಮಿಯನ್ನು ನಾಲ್ವರು ಭೂಗಳ್ಳರು ಇತ್ತೀಚೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಾಲ್ವರ ಹೆಸರಲ್ಲಿ ಖಾತೆ ಮಾಡಿಸಲು ಹೊರಟಿದ್ದು ಈ ಜಾಗವನ್ನು ಆಂಧ್ರದ ಬಿಲ್ಡರ್ ಗಳಿಗೆ ಸುಮಾರು 40 ಕೋಟಿ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಈ ಕಾರ್ಯಕ್ಕೆ ಸಬ್ ರಿಜಿಸ್ಟರ್ ಒಬ್ಬರು ಭೂಗಳ್ಳರಿಗೆ ಸಾಥ್ ನೀಡಿದ್ದರೆಂದು ಹೇಳಲಾಗಿದ್ದು, ಇದೀಗ ಸಬ್ ರಿಜಿಸ್ಟರ್ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಬಿಹಾರ ಚುನಾವಣೆ; ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಲಂಡನ್ ಮೂಲದ ಮಹಿಳೆ ಪ್ರಿಯಾ ಚೌಧರಿ ಸ್ಪರ್ಧೆ

  ಸದರಿ ಭೂಮಿಯ ಖಾತೆಯನ್ನು ಹೈಕೋರ್ಟಿನ ದ್ವಿಸದಸ್ಯ ಪೀಠ ರದ್ದುಗೊಳಿಸಿ, ಜಾಗವನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಯಲಹಂಕ‌ ತಹಶೀಲ್ದಾರ್ ಎನ್ ರಘುಮೂರ್ತಿ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ವಶಕ್ಕೆ ಪಡೆದಿದ್ದು, ಜಾಗದಲ್ಲಿ ಸರ್ಕಾರದ ನಾಮ ಫಲಕ ಅಳವಡಿಸಿದ್ದಾರೆ. ಬೆಂ.ನಗರ ಮತ್ತು ಹೊರ ವಲಯದ ಸರ್ಕಾರಿ ಭೂ ಒತ್ತುವರಿ ತೆರವು ಕಾರ್ಯವು ಸದನ ಸಮಿತಿಯ ಕಣ್ಗಾವಲಿನಲ್ಲಿ ನಡೆಯುತ್ತಿದೆ. ಸರ್ಕಾರಿ ಒತ್ತುವರಿಯನ್ನು ಒಂದು ಗುಂಟೆ ಜಾಗವನ್ನೂ ಸಹ ಬಿಡದೆ ಕಟ್ಟುನಿಟ್ಟಾಗಿ ತೆರವುಗೊಳಿಸಲು ಸದನ ಸಮಿತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಭೂ ಒತ್ತುವರಿಯನ್ನು ಕಟ್ಟುನಿಟ್ಟಾಗಿ ತೆರವುಗೊಳಿಸಲಾಗುತ್ತಿದೆ.

  ಈ ಕುರಿತು ತಹಶೀಲ್ದಾರ್ ಎನ್ ರಘುಮೂರ್ತಿ ಪ್ರತಿಕ್ರಿಯಿಸಿ ಮಾತನಾಡಿ 'ಸದರಿ ಜಾಗದ ಮಾರುಕಟ್ಟೆ ಬೆಲೆ ಸುಮಾರು 400 ಕೋಟಿಗೂ ಅಧಿಕವಾಗಿದ್ದು, ಸರ್ಕಾರದ ವಶಕ್ಕೆ ಪಡೆದಿದ್ದೇವೆ, ಇದೇ ರೀತಿಯ ಸರ್ಕಾರಿ ಭೂ ಅಕ್ರಮ ಪ್ರಕರಣಗಳು ಯಲಹಂಕ ತಾಲ್ಲೂಕು ವ್ಯಾಪ್ತಿಯಲ್ಲಿ ಇನ್ನೂ ಅನೇಕ ಪ್ರಕರಣಗಳಿದ್ದು, ತಾಲ್ಲೂಕು ಆಡಳಿತ ಭೂ ಅತಿಕ್ರಮಣವನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಿದೆ. ಯಲಹಂಕ ತಾಲ್ಲೂಕು ವ್ಯಾಪ್ತಿಯ ನಾಗರೀಕರು ತಮ್ಮ ಗ್ರಾಮ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಸರ್ಕಾರಿ ಭೂಮಿ ಒತ್ತವರಿಯಾಗಿರುವ ಕುರಿತು ಸ್ಪಷ್ಟ ಮಾಹಿತಿ ಇದ್ದರೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದರೆ ಒತ್ತುವರಿ ತೆರವುಗೊಳಿಸಿ ಭೂಗಳ್ಳರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  ಕೊರೋನಾ ಭೀತಿ ಹಿನ್ನೆಲೆ; ಬೆಂಗಳೂರಿನಲ್ಲಿ ಇಂದಿನಿಂದ ಶಾಲೆಗಳಿಗೆ ರಜೆ

  ಸಾರ್ವಜನಿಕರ ಅಭಿಪ್ರಾಯ

  ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಈ ಜಾಗವನ್ನು ಒತ್ತುವರಿ ಮಾಡಿಕೊಂಡು, ಮಾರಾಟ ಮಾಡಲು ಮುಂದಾಗಿದ್ದರು. ಈ ಜಾಗ ವಶಪಡಿಕೊಳ್ಳುವ ನಿಟ್ಟಿನಲ್ಲಿ ಈ ಹಿಂದಿನ ಅಧಿಕಾರಿಗಳು ಕಟ್ಟುನಿಟ್ಟಾದ ಕ್ರಮ ಕೈಗೊಂಡಿರಲಿಲ್ಲ. ಇವರು ತಹಶೀಲ್ದಾರ್ ಆಗಿ ಇಲ್ಲಿಗೆ ಬಂದ ಮೇಲೆ ಈ ಜಾಗವನ್ನು ವಶಕ್ಕೆ ಪಡೆಯಲು ಹೆಚ್ಚಿನ ಕಾಳಜಿ ತೋರಿ, ವಶಕ್ಕೆ ಪಡೆದಿರುವುದು ಸಂತೋಷ ತಂದಿದೆ. ಈ ರೀತಿಯ ಸರ್ಕಾರಿ ಭೂ ಒತ್ತುವರಿ ತೆರವುಗೊಳಿಸಿದರೆ, ಆಸ್ಪತ್ರೆ, ಶಾಲೆ, ಆಟದ ಮೈದಾನ. ಮುಂತಾದ ಸಾರ್ವಜನಿಕ ಸವಲತ್ತುಗಳನ್ನು ನೀಡಲು ಸರ್ಕಾರಕ್ಕೆ ಸಹಕಾರಿಯಾಗುತ್ತದೆ. ತಹಶೀಲ್ದಾರರ ಈ ಕ್ರಮವನ್ನು ಸ್ವಾಗತಿಸುತ್ತೇವೆ- ಅಶ್ವಥ್ ರೆಡ್ಡಿ, ಚೊಕ್ಕನಹಳ್ಳಿ.

   

  (ವರದಿ: ನವೀನ್​ ಕುಮಾರ್​)

  First published: