Karwar: ಮತ್ತೆ ಕಾರವಾರದಲ್ಲಿ ಕೊಂಕಣಿ, ಕನ್ನಡ ಭಾಷಾ ವಿವಾದ; ನಗರಸಭೆಯಲ್ಲಿ ಮಾತಿನ‌ ಚಕಮಕಿ

ಬೋರ್ಡ್ ಬರೆಯುವ ವ್ಯಕ್ತಿಗೆ ಇಂಗ್ಲಿಷ್ ಅಷ್ಟೊಂದು ಚೆನ್ನಾಗಿ ಬರೆಯಲು ಬಾರದ ಕಾರಣ ದೇವನಾಗರಿ ಲಿಪಿಯಲ್ಲಿ ಕೊಂಕಣಿಯಲ್ಲಿ ಬರೆಯಲು ತಿಳಿಸಲಾಗಿತ್ತು.

ನಗರ ಸಭೆಯಲ್ಲಿ ಮಾತಿನ ಚಕಮಕಿ

ನಗರ ಸಭೆಯಲ್ಲಿ ಮಾತಿನ ಚಕಮಕಿ

  • Share this:
ಕಾರವಾರದಲ್ಲಿ (Karwar) ಹುಟ್ಟಿಕೊಂಡ ಭಾಷಾ ವಿವಾದ (Language Row) ಸುಲಭದಲ್ಲಿ ಸುಖಾಂತ್ಯ ಕಾಣುವ ಲಕ್ಷಣ ಕಂಡು ಬರುತ್ತಿಲ್ಲ, ದಿನಕ್ಕೊಂದು ರೀತಿಯಲ್ಲಿ ಪರ ವಿರೋಧ ನಡೆಯುತ್ತಿದೆ. ಕನ್ನಡದ ಜತೆ ದೇವನಾಗರಿ ಲಿಪಿಯಲ್ಲಿ (Devanagari Lipi) ಕೊಂಕಣಿ‌ ಭಾಷೆ (Konkani Language) ಕೂಡಾ ಬೇಕು ಎಂದು ಕಾರವಾರದ ವಿವಿಧ ಗ್ರಾಮ ಪಂಚಾಯತಿಯಲ್ಲಿ ಠರಾವು ಮಾಡಿದ್ರೆ ಇವತ್ತು ಕಾರವಾರ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಯಾ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ದೇವನಾಗರಿ ಲಿಪಿಯಲ್ಲಿ ಕೊಂಕಣಿಯಲ್ಲಿ ಸೂಚನಾ ಫಲಕ (Board) ಬರೆಯಬೇಕು ಎಂದು ಠರಾವು ಮಾಡಲಾಯಿತು. ಹೀಗೆ ಜಟಾಪಟಿ ನಡೆಯುತ್ತಿದೆ.

ಸಭೆಯಲ್ಲಿ ಭಾಷಾ ವಿವಾದದ ಚರ್ಚೆ, ಎರಡು ಭಾಷೆ ಬರೆಯಲು ತೀರ್ಮಾನ

ಇತ್ತೀಚಿಗೆ ಅಭಿವೃದ್ಧಿ ಚಟುವಟಿಕೆಗಳ ಭಾಗವಾಗಿ ಕಾರವಾರ ನಗರಸಭೆಯು ತನ್ನ ವ್ಯಾಪ್ತಿಯ ವಾರ್ಡ್ ಗಳ ನಾಮಫಲಕಗಳಲ್ಲಿ ಕನ್ನಡ ಮತ್ತು ಕೊಂಕಣಿಗೆ (Kannada And Konkani Language) ಅನುವಾದಿಸಿ ದೇವನಾಗರಿ ಲಿಪಿಯಲ್ಲಿ ಬರೆಯಿಸಿತ್ತು. ಇದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತಲ್ಲದೆ, ಕನ್ನಡ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದವರು ದೇವನಾಗರಿಯಲ್ಲಿದ್ದ ಕೊಂಕಣಿ ಹೆಸರುಗಳಿಗೆ ಮಸಿ ಬಳಿದಿದ್ದರು.

ಇದನ್ನೂ ಓದಿ:  Maharashtra: 'ಮಹಾ' ಸಿಎಂ ಆಗಿ ಏಕನಾಥ್​ ಶಿಂಧೆ; ಡಿಸಿಎಂ ಆಗಿ ದೇವೇಂದ್ರ ಫಡ್ನವೀಸ್​ ಪ್ರಮಾಣವಚನ

ಕೊಂಕಣಿಯಲ್ಲಿ ನಾಮಫಲಕ ಬರೆಸುವಂತೆ ಆಗ್ರಹ

ಇದರಿಂದಾಗಿ ಕೊಂಕಣಿ ಭಾಷಿಗರು ಅಸಮಾಧಾನಗೊಂಡು ಕೊಂಕಣಿಯಲ್ಲೇ ನಾಮಫಲಕಗಳನ್ನ ಬರೆಯಿಸುವಂತೆ ಆಗ್ರಹಿಸಿ ಕಾರವಾರದಲ್ಲಿ ಪ್ರತಿಭಟನಾ ಮೆರವಣಿಗೆ (Protest Rally) ನಡೆಸಿದ್ದರು. ಇದಾದ ಬಳಿಕ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕೂಡ ಕಾರವಾರಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದರು.

ಇವೆಲ್ಲದರ ನಡುವೆ ಇಂದು ನಡೆದ ಕಾರವಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೊಂಕಣಿಪರವಾಗಿ ಬಹುತೇಕ ಸದಸ್ಯರು ಬ್ಯಾಟಿಂಗ್ ಮಾಡಿದ್ದಾರೆ. ಕನ್ನಡವೂ ಬೇಕು, ಜೊತೆಗೆ ನಮ್ಮ ಮಾತೃಭಾಷೆ ಕೊಂಕಣಿಯೂ ಇರಬೇಕು ಎಂದಿದ್ದಾರೆ. ಆದರೆ ಸದಸ್ಯ ಗಣಪತಿ ನಾಯ್ಕ, ಹಿಂದೆ ಈ ರೀತಿ ಭಾಷಾ ವಿವಾದ ಆಗಿರಲಿಲ್ಲ.

ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಭೆ ನಡೆಸಲು ಒತ್ತಾಯ

ಏಕಾಏಕಿ ಕೊಂಕಣಿಯಲ್ಲಿ ಬರೆಯಿಸುವ ಮುನ್ನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಅನಗತ್ಯವಾಗಿ ವಿವಾದ ಹುಟ್ಟಿಕೊಂಡಿದೆ. ಕನ್ನಡ ಹಾಗೂ ಕೊಂಕಣಿ ಎರಡೂ ಭಾಷೆಯ ಮೇಲೆ ಗೌರವವಿದೆ. ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಭೆ ನಡೆದು ಸೂಕ್ತ ತೀರ್ಮಾನಕ್ಕೆ ಬರುವುದು ಒಳ್ಳೆಯದು ಎಂದರು.

ಇವರೊಂದಿಗೆ ಮಾಲಾ ಹುಲಸ್ವಾರ, ನಂದಾ ನಾಯ್ಕ, ರೇಷ್ಮಾ ಮಾಳ್ಸೇಕರ, ಸಂದೀಪ ತಳೇಕರ ಮೊದಲಾದವರು ಕನ್ನಡ ಪ್ರೇಮದ ಜೊತೆಗೆ ಕೊಂಕಣಿಯೂ ಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರಸಭೆಯ ಅಧ್ಯಕ್ಷ ಡಾ.ನಿತಿನ್ ಪಿಕಳೆ ಪ್ರತಿಕ್ರಿಯೆ

ಅಂತಿಮವಾಗಿ ನಗರಸಭೆಯ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ಕಾರವಾರದಲ್ಲಿ ಕೊಂಕಣಿ ಭಾಷೆ ಹೆಚ್ಚು ಪ್ರಚಲಿತದಲ್ಲಿದೆ. ಜತೆಗೆ ಬೋರ್ಡ್ ಬರೆಯುವ ವ್ಯಕ್ತಿಗೆ ಇಂಗ್ಲಿಷ್ ಅಷ್ಟೊಂದು ಚೆನ್ನಾಗಿ ಬರೆಯಲು ಬಾರದ ಕಾರಣ ದೇವನಾಗರಿ ಲಿಪಿಯಲ್ಲಿ ಕೊಂಕಣಿಯಲ್ಲಿ ಬರೆಯಲು ತಿಳಿಸಲಾಗಿತ್ತು. ಆದರೆ ಅನಗತ್ಯವಾಗಿ ವಿವಾದ ಹುಟ್ಟು ಹಾಕಿದ್ದಾರೆ. ಜತೆಗೆ ದೇವನಾಗರಿ ಲಿಪಿಗೆ ಮಸಿ ಬಳದಿರುವುದು ಖಂಡನೀಯ ಎಂದರು.

ಇದನ್ನೂ ಓದಿ:  Belagavi: ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಸಿದ್ದರಾಮಯ್ಯ ಅಥವಾ ಸತೀಶ್​ ಜಾರಕಿಹೊಳಿ ಸ್ಪರ್ಧೆ; ಬಿಜೆಪಿಗೆ ಟೆನ್ಷನ್

ಕೊಂಕಣಿ ಮತ್ತು ಕನ್ನಡ ಭಾಷೆ ವಿವಾದ ಹಗ್ಗ ಜಗ್ಗಾಟ

ಕೊನೆಗೆ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡದಲ್ಲಿ ಬರೆದು, ಕೆಳಭಾಗದಲ್ಲಿ ಸ್ಥಳೀಯ ಭಾಷೆ ಕೊಂಕಣಿಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲು ಠರಾವು ಮಾಡಲಾಯಿತು. ಅಲ್ಲದೇ ಸರಕಾರಕ್ಕೆ ಠರಾವು ಕಳುಹಿಸಿ, ಅಲ್ಲಿಂದ ಉತ್ತರ ಬಂದ ಬಳಿಕ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು. ಹೀಗೆ ಕೊಂಕಣಿ ಮತ್ತು ಕನ್ನಡ ಭಾಷೆ ವಿವಾದ ಹಗ್ಗ ಜಗ್ಗಾಟ ಮುಂದುವರಿದಿದೆ.
Published by:Mahmadrafik K
First published: