ನಟಿ ರಾಗಿಣಿ ದ್ವಿವೇದಿ ಬಿಜೆಪಿ ಸೇರ್ಪಡೆ?

ವಾರದ ಹಿಂದೆ ಬಿಜೆಪಿಯ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಅವರನ್ನು ರಾಗಿಣಿ ಭೇಟಿಯಾಗಿದ್ದರು. ಆಗಲೇ ಅವರು ಬಿಜೆಪಿ ಸೇರುವ ಸುದ್ದಿಗಳು ದಟ್ಟವಾಗಿದ್ದವು.

news18
Updated:April 13, 2019, 10:56 PM IST
ನಟಿ ರಾಗಿಣಿ ದ್ವಿವೇದಿ ಬಿಜೆಪಿ ಸೇರ್ಪಡೆ?
ರಾಗಿಣಿ ದ್ವಿವೇದಿ
news18
Updated: April 13, 2019, 10:56 PM IST
ಬೆಂಗಳೂರು(ಏ. 13): ಸ್ಯಾಂಡಲ್​ವುಡ್​ನ ಮತ್ತೊಬ್ಬ ನಟಿ ರಾಜಕಾರಣದ ರಂಗಪ್ರವೇಶ ಮಾಡಲಿದ್ದಾರೆ. ತುಪ್ಪದ ಹುಡುಗಿ ನಟಿ ರಾಗಿಣಿ ದ್ವಿವೇದಿ ಅವರು ಭಾರತೀಯ ಜನತಾ ಪಕ್ಷ ಸೇರಲಿದ್ಧಾರೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಅವರು ಕಮಲ ಪಾಳಯಕ್ಕೆ ಹೋಗಲಿದ್ದಾರೆ. ನಾಳೆ, ಭಾನುವಾರವೇ ರಾಗಿಣಿ ಅವರು ಬಿಜೆಪಿ ಸೇರಬಹುದೆನ್ನಲಾಗುತ್ತಿತ್ತು. ಆದರೆ, ನಾಳೆ ಸೇರುವ ಸಾಧ್ಯತೆ ಇಲ್ಲ. ಕೆಲ ದಿನಗಳಲ್ಲಿ ರಾಗಿಣಿ ರಾಜಕಾರಣಕ್ಕೆ ಧುಮುಕುವುದು ನಿಶ್ಚಿತವೆನ್ನಲಾಗಿದೆ.

ಕಳೆದ ವಾರವಷ್ಟೇ ರಾಗಿಣಿ ಅವರು ಬಿಜೆಪಿಯ ಕರ್ನಾಟಕ ಉಸ್ತುವಾರಿ ಮುರಳೀಧರ್ ರಾವ್ ಅವರನ್ನು ಭೇಟಿ ಮಾಡಿದ್ದರು. ಅವರ ಮೂಲಕವೇ ರಾಗಿಣಿ ಅವರು ಬಿಜೆಪಿಯ ರಂಗ ಪ್ರವೇಶ ಮಾಡಲಿದ್ದಾರೆ.

ಇದನ್ನೂ ಓದಿ: ಚುನಾವಣೆ ಸಮೀಕ್ಷೆ; ಬೆಂಗಳೂರು ದಕ್ಷಿಣದಲ್ಲಿ ದಶಕಗಳ ಬಿಜೆಪಿ ಪಾರುಪತ್ಯಕ್ಕೆ ಕಾಂಗ್ರೆಸ್​ ಹಾಕತ್ತಾ ಬ್ರೇಕ್​?

ಇದನ್ನೂ ಓದಿ: ನಿಂಬೆ ಹಣ್ಣಿನ ಸಮೇತ ರೇವಣ್ಣನನ್ನೇ ನುಂಗ್ತೇನೆ: ಈಶ್ವರಪ್ಪ ತಿರುಗೇಟು

ಇದನ್ನೂ ಓದಿ: ಚುನಾವಣಾ ಸಮೀಕ್ಷೆ; ಬೆಂಗಳೂರು ಕೇಂದ್ರದಲ್ಲಿ ರಂಗೇರಿದ ತ್ರಿಕೋನ ಸ್ಪರ್ಧೆ: ಯಾರಿಗೆ ಒಲಿಯಲಿದೆ ಗೆಲುವು?

ಇದನ್ನೂ ಓದಿ: ಹಾಸನ ಚುನಾವಣಾ ಸಮೀಕ್ಷೆ; ಜೆಡಿಎಸ್​ ಭದ್ರಕೋಟೆಯಲ್ಲಿ ಕಮಲ ಅರಳಲು ಇವೆ ಹಲವು ಅಡೆ-ತಡೆ!
Loading...

ಬಿಜೆಪಿಯಲ್ಲಿ ಈಗಾಗಲೇ ನಟಿಯರಾದ ಶೃತಿ, ಭಾವನಾ, ತಾರಾ, ಮಾಳವಿಕಾ ಅವಿನಾಶ್ ಮೊದಲಾದವರಿದ್ದಾರೆ. ಸುಮಲತಾ ಅಂಬರೀಷ್ ಅವರು ಬಿಜೆಪಿಯ ಬೆಂಬಲದೊಂದಿಗೆ ಮಂಡ್ಯದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಈಗ ನಟಿ ರಾಗಿಣಿ ಕಮಲ ಹಿಡಿದುಕೊಳ್ಳುತ್ತಿರುವುದು ಬಿಜೆಪಿಗೆ ಇನ್ನಷ್ಟು ಪುಷ್ಟಿ ಸಿಗುವ ನಿರೀಕ್ಷೆ ಇದೆ.

(ವರದಿ: ರಮೇಶ್ ಹಿರೇಜಂಬೂರು)
First published:April 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...