ಪೊಲೀಸ್​ ಗೌರವಗಳೊಂದಿಗೆ ನಾಳೆ ನಟ ಶಿವರಾಂ ಅಂತ್ಯಕ್ರಿಯೆ

ನಾಳೆ ಬೆಳಗ್ಗೆ 7. 30ರಿಂದ 10 ಗಂಟೆವರೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 11 ಘಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ

ನಟ ಶಿವರಾಂ

ನಟ ಶಿವರಾಂ

 • Share this:
  ಅಗಲಿದ ಹಿರಿಯ ನಟ ಶಿವರಾಂ (Shivaram)  ಅವರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸೇರಿದಂತೆ ಅನೇಕ ರಾಜಕೀಯ ಗಣ್ಯರು, ಚಿತ್ರರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ. ಅವರ ಪಾರ್ಥಿವ ಶರೀರವನ್ನು ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಎರಡು ಗಂಟೆಗಳ ಅಂತಿಮ ದರ್ಶನದ ಬಳಿಕ ಬನಶಂಕರಿ ಚಿತಾಗಾರದಲ್ಲಿ ಪೊಲೀಸ್​ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಹಿರಿಯ ನಟ ಶಿವರಾಂ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಕಂದಾಯಸ ಸಚಿವ ಆರ್​ ಅಶೋಕ್​, ಹಿರಿಯ ನಟರ ನೆನಪನ್ನು ಚಿರಸ್ಥಾಯಿಯಾಗಿ ಉಳಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನಲೆ ಯಾವುದಾದರೂ ಒಂದು ಕಟ್ಟಡ ಅಥವಾ ರಸ್ತೆಗೆ ಶಿವರಾಂ ಅವರ ಹೆಸರಿಟ್ಟು ಅವರನ್ನು ಅಜರಾಮರ ಆಗಿಸುವ ಪ್ರಯತ್ನ ನಡೆಸಲಾಗುವುದು ಎಂದರು.

  ಮೊನ್ನೆಯಷ್ಟೆ ಅವರ ಜೊತೆ ಮಾತನಾಡಿದ್ದೆ ಎಂದ ಸಿಎಂ
  ನಟ ಶಿವರಾಂ ಸಾವಿಗೆ ಸಂತಾಪ ವ್ಯಕ್ತಪಡಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹಲವು ದಿನಗಳಿಂದ ಶಿವರಾಂ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಿದ್ದರು. ಅವರ ಸಾವು ಚಿತ್ರರಂಗ ಕಲಾರಂಗಕ್ಕೆ ತುಂಬಲಾರದ ನಷ್ಟ. ಪಾತ್ರಗಳಿಗೆ ಜೀವ ತುಂಬುವ ಕೆಲಸವನ್ನು ಅವರು ಮಾಡಿದ್ದಾರೆ. ಅವರ ಹಲವು ಸಿನಿಮಾಗಳು ಯಶಸ್ಸು ಕಂಡಿವೆ. ದೊಡ್ಡ ನಟರ ಸರಿಸಮಾನಾಗಿ ಬೆಳೆದವರು. ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ದೈವಭಕ್ತರಾಗಿ ಶಬರಿಮಲೆ ಯಾತ್ರೆ ಮಾಡಿದ್ದಾರೆ. ಮೊನ್ನೆಯಷ್ಟೇ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದೇವು. ಎಲ್ಲರನ್ನೂ ಖುಷಿಯಿಂದ ಮಾತನಾಡಿಸಿ ಹಾರೈಸಿದ್ದರು. ಅವರನ್ನ ನೋಡಿದಾಗ ಗುರುಗಳ ರೀತಿ ಕಾಣುತ್ತಿದ್ರು, ಅವರು ಇಲ್ಲವಾಗಿರುವುದು ದೊಡ್ಡ ನಷ್ಟ. ರಾಜ್ಯೋತ್ಸವ, ರಾಷ್ಟ ಪ್ರಶಸ್ತಿ ಗಳಿಸಿದವರು. ಹೀಗಾಗಿ ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗತ್ತದೆ ಎಂದು ತಿಳಿಸಿದರು  ನಾಳೆ 11 ಗಂಟೆಗೆ ಅಂತ್ಯಕ್ರಿಯೆ
  ಅಗಲಿದ ನಟ ಶಿವರಾಂ ಅವರ  ಮೃತ ದೇಹವನ್ನು ನಾಳೆ ಬೆಳಗ್ಗೆ 7. 30ರಿಂದ 10 ಗಂಟೆವರೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 11 ಘಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಶಿವರಾಂ ಅವರ ಮಗ ಲಕ್ಷ್ಮೀಶ ತಿಳಿಸಿದ್ದಾರೆ.

  ಇದನ್ನು ಓದಿ: ದೊಡ್ಮನೆ ಕುಟುಂಬಕ್ಕೆ ಗುರುಸ್ವಾಮಿಗಳಾಗಿದ್ದ ಶಿವರಾಂ :ಅಯ್ಯಪ್ಪ ದೇವರ ಮೇಲಿತ್ತು ಅಪಾರ ಭಕ್ತಿ

  ಅಂತಿಮ ದರ್ಶನ ಪಡೆದ ಸಿನಿ ತಾರೆಯರು
  ನಟ ಅನಂತ ನಾಗ್​, ಶ್ರೀನಾಥ್​, ನಟಿ ಗಿರಿಜಾ ಲೋಕೇಶ್​​. ವಿಜಯ್​ ಪ್ರಕಾಶ್​,  ಅಶೋಕ್​, ಬಿಸಿ ಪಾಟೀಲ್​, ರಾಘವೇಂದ್ರ ರಾಜಕುಮಾರ್​ ಸೇರಿದಂತೆ ಅನೇಕ ಸಿನಿ ತಾರೆಯರು ನಟ ಶಿವರಾಂ ಅಂತಿಮ ದರ್ಶನ ಪಡೆದರು.

  ಇದನ್ನು ಓದಿ: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ: ಹಿರಿಯ ನಟ ಶಿವರಾಮ್ ಇನ್ನಿಲ್ಲ

  ಅವರ ಆಸೆ ನೆರೆವೇರಿಸಲು ಸಾಧ್ಯವಾಗಲಿಲ್ಲ ಎಂದ ಕುಂಬ್ಳೆ

  ಶಿವರಾಂ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಕ್ರಿಕೆಟಿಗ ಅನಿಲ್​ ಕುಂಬ್ಳೆ,  ನಗೆ ಶಿವರಾಮ್ ಸರ್ ತುಂಬಾನೇ ಬೇಕಾದವರು. ಮನೆಗೆ ಬಂದಾಗ ಕೆಲ ವಿಚಾರದ ಬಗ್ಗೆ ಮಾತಾಡುತ್ತಿದ್ದರು. ಮನೆಯಲ್ಲಿ ಪೂಜೆ ಆಗಲಿ ಯಾವುದೇ ಕಾರ್ಯಕ್ರಮ ಇದ್ದರೂ ಕರೆಯುತ್ತಿದ್ದರು. ಅವರು ಇನ್ನಿಲ್ಲ ಎಂಬುದು ತುಂಬಾ ನೋವಿನ ವಿಚಾರ. ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಮನೆಗೆ ಕರೀತಾನೇ ಇದ್ದರು. . ಮನೆಗೆ ಬಂದು ಲೈಬ್ರೇರಿ ನೋಡು ಅಂದಿದ್ರು. ಕೆಲವೊಂದು ಫೋಟೋಗ್ರಾಫಿ ಮಾಡಿದ್ದೀನಿ ನೋಡಿ ಅಂದಿದ್ರು. ಅವರ ಕೋರಿಕೆ ನೇರವೇರಿಸೋಕೆ ಆಗಿಲ್ಲ ನನಗೆ. ಅವರ ಅಗಲಿಕೆ ಚಿತ್ರರಂಗಕ್ಕೆ ಇದು ದೊಡ್ಡ ನಷ್ಟ ಎಂದರು.

  ಕಳೆದ ಮೂರು ದಿನಗಳ ಹಿಂದೆ ಶಿವರಾಮ್ ಅವರ ಕಾರ್ ಅಪಘಾತಕ್ಕೆ ಒಳಗಾಗಿತ್ತು, ನಂತರ ಬುಧವಾರ ಅಯ್ಯಪ್ಪನ ಪೂಜೆ ಮಾಡಲು ಹೋಗಿ ಕೋಣೆಯಲ್ಲಿ ಜಾರಿ ಬಿದ್ದರು. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಇಂದು ಕೊನೆ ಉಸಿರೆಳೆದರು.
  Published by:Seema R
  First published: