ಬೆಂಗಳೂರು: ದಕ್ಷಿಣ ಭಾರತದ ಹೆಸರಾಂತ ನಟ, ರಾಜಕಾರಣಿ ಅಂಬರೀಶ್ ಅವರ ನಿಧನಕ್ಕೆ ದೇಶದ ಹಲವು ಹೆಸರಾಂತ ನಟರು ಹಾಗೂ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.
ಅಂಬರೀಶ್ ಆಪ್ತ ಸ್ನೇಹಿತರಾದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಂಬಿ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. "ಅದ್ಬುತ ಮಾನವೀಯ ಗುಣವುಳ್ಳ ವ್ಯಕ್ತಿ, ನನ್ನ ಆತ್ಮೀಯ ಸ್ನೇಹಿತನನ್ನು ಇಂದು ಕಳೆದುಕೊಂಡಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ," ಎಂದು ಟ್ವೀಟ್ ಮಾಡಿದ್ದಾರೆ.
A wonderful human being ... my best friend ... I have lost you today and will miss you ... Rest In Peace #Ambrish
— Rajinikanth (@rajinikanth) November 24, 2018
Shri Ambareesh will always be remembered for his memorable performances as an actor and extensive contribution to politics. He was a strong voice for Karnataka’s welfare, at the state and central level. Pained by his demise. Condolences to his family & admirers: PM @narendramodi
— PMO India (@PMOIndia) November 25, 2018
ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ.
— Darshan Thoogudeepa (@dasadarshan) November 24, 2018
ಅಮರ.... ನೀವೆಂದೆಂದೂ ನಮಗೆ ಅಮರ..... ನಿಮ್ಮೊಂದಿಗಿನ ಒಡನಾಟ ಅಮರ... ನಿಮ್ಮೊಂದಿಗೆ ಕಳೆದ ದಿನಗಳು ಅಮರ....ನೆನಪುಗಳು ಅಮರ...ಚಿತ್ರರಂಗಕ್ಕೆ ನೀವು ನಿಮ್ಮ ನೇರ ನಡೆ ನುಡಿಗಳು ಎಂದೆಂದೂ ಅಮರ...🙏🙏🙏🙏🙏🙏🙏🙏 pic.twitter.com/C88IvDWan3
— Upendra (@nimmaupendra) November 24, 2018
ಕನ್ನಡ ಚಿತ್ರರಂಗ ಕಂಡ ಮಹತ್ವದ ಕಲಾವಿದ ಹಾಗೂ ಅಪರೂಪದ ವ್ಯಕ್ತಿತ್ವದ ರಾಜಕಾರಣಿ ಇನ್ನಿಲ್ಲ ಎನ್ನುವುದು ಅಪಾರ ದುಃಖವನ್ನುಂಟುಮಾಡಿದೆ.
ನನ್ನ ಮತ್ತು ಅವರ ಸ್ನೇಹ ಅನುಗಾಲದ್ದು. ಚಿತ್ರರಂಗ ಹಾಗೂ ರಾಜಕಾರಣವನ್ನು ಮೀರಿದ ಸ್ನೇಹ ನಮ್ಮದಾಗಿತ್ತು. #Ambareesh
— CM of Karnataka (@CMofKarnataka) November 24, 2018
He was not just a great actor, not just a proven politician but also great human being. Ambareesh, u ll be missed.
I am deeply pained by his death. My condolences to all his family members, friends & well-wishers. pic.twitter.com/UitCU7MHss
— Siddaramaiah (@siddaramaiah) November 24, 2018
ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ, ನನ್ನ ಗೆಳೆಯ ಡಾ.ಅಂಬರೀಶ್ ಅವರ ನಿಧನದ ಸುದ್ಧಿ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ. ಇವರ ಅಗಲಿಕೆಯಿಂದ ಕರ್ನಾಟಕವು ಸರಳ ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ, ಅಪಾರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ. #Ambareesh pic.twitter.com/kMXvbiaZ9g
— KJ George (@thekjgeorge) November 24, 2018
ಅಂಬರೀಶ್ ಅವರ ಸಾವಿನ ಸುದ್ದಿ ತೀವ್ರ ನೋವು ಹಾಗೂ ಆಘಾತಕಾರಿ. ನಂಬಲಸಾಧ್ಯ ಸಂಗತಿ. ನನ್ನ ಆತ್ಮೀಯ ಸ್ನೇಹಿತ, ನಿಷ್ಕಲ್ಮಶ ಮನಸ್ಸಿನ ವ್ಯಕ್ತಿ, ಅವರ ಅಗಲಿಕೆ ನಿಜಕ್ಕೂ ದೊಡ್ದ ದುರಂತ.
— M B Patil (@reachmbp) November 24, 2018
ಅಂಬರೀಶ್ ಸಿನಿಮಾ ಪಯಣ, ರಾಜಕೀಯ ವ್ಯಕ್ತಿತ್ವ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಎಲ್ಲರೂ ಇಷ್ಟಪಡುವ ಶ್ರೇಷ್ಠ ನಾಯಕ ನಟನನ್ನು ಕಳೆದುಕೊಂಡಿದ್ದೇವೆ ಎಂದಿದ್ದಾರೆ.
Shocked to hear the news of our beloved politician and rebel star #Ambarish’s demise. One of Karnataka’s iconic film stars and much loved personality.
My heartfelt condolences to his bereaved family.
— Dinesh Gundu Rao (@dineshgrao) November 24, 2018
ಅಪಘಾತದ ನೋವನ್ನು ಜೀರ್ಣಿಸಿಕೊಳ್ಳುತ್ತಿರುವಾಗಲೇ ಮಂಡ್ಯದ ಗಂಡೆಂದೇ ಜನಪ್ರಿಯರಾಗಿದ್ದ ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ನಿಧನ ಆಘಾತವನ್ನುಂಟು ಮಾಡಿದೆ. ರಾಜ್ಯ ಹಾಗೂ ಮಂಡ್ಯದ ಪಾಲಿಗೆ ಇಂದು ಕರಾಳ ದಿನ. ಅಂಬರೀಶ್ ಅವರ ಕುಟುಂಬಕ್ಕೆ ಭಗವಂತ ನೋವನ್ನು ಸಹಿಸುವ ಶಕ್ತಿ ನೀಡಲಿ. ಚಿತ್ರರಂಗ ಹಾಗೂ ರಾಜ್ಯ ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ.
— Dr. G Parameshwara (@DrParameshwara) November 24, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ