ಕನ್ನಡಪರ ಹೋರಾಟಗಾರ ರಮೇಶ್ ಗೌಡಗೆ 14 ದಿನ ನ್ಯಾಯಾಂಗ ಬಂಧನ

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸಂಘಟನೆಯು ಕಳೆದ ಕೆಲವು ವರ್ಷಗಳಿಂದ ನಿತ್ಯಾನಂದರ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದೆ. ನಿತ್ಯಾನಂದ ಆಶ್ರಮದಲ್ಲಿ ಅಕ್ರಮಗಳು ನಡೆಯುತ್ತಿವೆ. ಅವರ ಆಶ್ರಮವನ್ನು ಇಲ್ಲಿಂದ ತೆರವುಗೊಳಿಸಬೇಕು ಎಂಬುದು ಇವರ ಪ್ರಮುಖ ಬೇಡಿಕೆಯಾಗಿದೆ.

news18-kannada
Updated:March 4, 2020, 7:25 PM IST
ಕನ್ನಡಪರ ಹೋರಾಟಗಾರ ರಮೇಶ್ ಗೌಡಗೆ 14 ದಿನ ನ್ಯಾಯಾಂಗ ಬಂಧನ
ರಮೇಶ್ ಗೌಡ
  • Share this:
ರಾಮನಗರ(ಮಾ. 04): ನಿತ್ಯಾನಂದ ಆಶ್ರಮಕ್ಕೆ ಮುತ್ತಿಗೆ ಹಾಕಿ ಗಲಾಟೆ ಮಾಡಿದ್ದ ಪ್ರಕರಣ ಸಂಬಂಧ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಎರಡು ಬಾರಿ ವಿಚಾರಣೆಗೆ ಗೈರಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ 14 ದಿನ ಕಾಲ ಜುಡಿಷಿಯಲ್ ಕಸ್ಟಡಿಗೆ ಹಾಕಲಾಗಿದೆ. ರಾಮನಗರ ಜೆಎಂಎಫ್​ಸಿ ನ್ಯಾಯಾಧೀಶೆ ಮಿಲನಾ ಅವರು ಮಾರ್ಚ್ 17ರವರೆಗೆ ರಮೇಶ್ ಗೌಡರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ಧಾರೆ. ರಮೇಶ್ ಗೌಡ ಅವರನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಎಂಟು ವರ್ಷದ ಹಿಂದೆ ನಡೆದ ಗಲಾಟೆ ಪ್ರಕರಣ ಇದಾಗಿದೆ. ಬಿಡದಿಯ ನಿತ್ಯಾನಂದ ಆಶ್ರಮದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ದಾಂಧಲೆ ನಡೆಸಿದ್ದರು. ಆಶ್ರಮಕ್ಕೆ ನುಗ್ಗಿ ಗಲಾಟೆ ಮಾಡಿದ್ದರು. ಬಿಡದಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ರಾಮನಗರದ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಎರಡು ಬಾರಿ ವಿಚಾರಣೆಗೆ ಗೈರಾಗಿದ್ದರು. ಅವರಿಗೆ ಬಂಧನದ ವಾರಂಟ್ ಕೊಡುವ ನಿರೀಕ್ಷೆ ಇತ್ತು. ಇವತ್ತು ಅವರು ಕೋರ್ಟ್​ಗೆ ಹಾಜರಾಗಿದ್ದರು. ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.

ಇದನ್ನೂ ಓದಿ: ಸಾಲ ಹೆಚ್ಚಿಸಿದ್ದೇ ಸಿದ್ದರಾಮಯ್ಯ ಸಾಧನೆ; ಯಡಿಯೂರಪ್ಪ ಉಳಿತಾಯದ ಬಜೆಟ್ ಮಾಡಲಿ: ವಿಶ್ವನಾಥ್ ಸಲಹೆ

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸಂಘಟನೆಯು ಕಳೆದ ಕೆಲವು ವರ್ಷಗಳಿಂದ ನಿತ್ಯಾನಂದರ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದೆ. ನಿತ್ಯಾನಂದ ಆಶ್ರಮದಲ್ಲಿ ಅಕ್ರಮಗಳು ನಡೆಯುತ್ತಿವೆ. ಅವರ ಆಶ್ರಮವನ್ನು ಇಲ್ಲಿಂದ ತೆರವುಗೊಳಿಸಬೇಕು ಎಂಬುದು ಇವರ ಪ್ರಮುಖ ಬೇಡಿಕೆಯಾಗಿದೆ.

ಅತ್ತ, ನಿತ್ಯಾನಂದ ವಿರುದ್ಧವೂ ವಿವಿಧ ಪ್ರಕರಣಗಳಿದ್ದು, ಅವರು ದೇಶ ತೊರೆದು ತಲೆಮರೆಸಿಕೊಂಡಿದ್ದಾರೆ. ದಕ್ಷಿಣ ಅಮೆರಿಕದ ದೇಶವೊಂದರಲ್ಲಿ ಅವರಿರುವುದು ತಿಳಿದುಬಂದಿದೆ.

ವರದಿ: ಎ.ಟಿ. ವೆಂಕಟೇಶ್

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: March 4, 2020, 7:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading