ರಾಜ್ಯಾದ್ಯಂತ ಕನಕ ಜಯಂತಿ ಆಚರಣೆ: ‘ಜಾತಿ ವಿರುದ್ಧ ದನಿಯೆತ್ತಿದ ದಾಸರ ಹಾದಿಯಲ್ಲಿ ಸಾಗೋಣ‘ ಎಂದ ಗಣ್ಯರು

ಎಂದಿನಂತೆಯೇ ಇಂದು ಕೂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 534ನೇ ಕನಕ ಜಯಂತಿಯನ್ನು ಆಚರಿಸಲಾಗಿದೆ. ಕನಕ ಜಯಂತಿ ಅಂಗವಾಗಿ ಎಂದಿನಂತೆ ಇಂದು ಸರ್ಕಾರ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ಸಾರ್ವತ್ರಿಕ ರಜೆ ಮುಂದುಯವರೆದಿದೆ.

news18-kannada
Updated:November 15, 2019, 4:32 PM IST
ರಾಜ್ಯಾದ್ಯಂತ ಕನಕ ಜಯಂತಿ ಆಚರಣೆ: ‘ಜಾತಿ ವಿರುದ್ಧ ದನಿಯೆತ್ತಿದ ದಾಸರ ಹಾದಿಯಲ್ಲಿ ಸಾಗೋಣ‘ ಎಂದ ಗಣ್ಯರು
ಕನಕದಾಸರು
  • Share this:
ಬೆಂಗಳೂರು(ನ.15): ರಾಜ್ಯಾದ್ಯಂತ ದಾಸ ಶ್ರೇಷ್ಠ ಸಂತ ಕನಕದಾಸರ 525ನೇ ಜಯಂತಿ ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಇಂದು ಕನಕ ಜಯಂತಿ ಅಂಗವಾಗಿ ರಾಜ್ಯದ ಹಲವೆಡೆ ಬೃಹತ್ ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಲ್ಲದೇ ಭಾರತದ ದಾಸರು ನೂರಾರು ವರ್ಷಗಳ ಮೊದಲೇ ಜಾತಿ ಮತ ಪಂಥಗಳಾಚೆ ಸಮಾಜ ಕಟ್ಟಲು ಹೇಗೆ ಶ್ರಮಿಸಿದರು ಎಂಬ ಬಗ್ಗೆ ಜನರಿಗೆ ತಿಳಿಸಿದರು.

ಕನಕದಾಸರ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. "ಸಮಸ್ತ ಜನತೆಗೆ ದಾಸ ಶ್ರೇಷ್ಠರಾದ, ಸಂತ ಕನಕದಾಸರ ಜಯಂತಿಯ ಶುಭಾಶಯಗಳು. ಸಮಾಜದ ಮೇಲು, ಕೀಳು, ಜಾತಿ, ಮತ ಸಿದ್ಧಾಂತದ ವಿರುದ್ಧ ಪ್ರತಿಭಟನಾ ನೆಲೆಗಟ್ಟಿನಲ್ಲಿ ಕನಕ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆ ತಂದರು. ಅವರು ಸಾರಿದ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಅವರ ನೀಡಿದ ಆದರ್ಶ ನಮಗೆಲ್ಲರಿಗೂ ದಾರಿದೀಪವಾಗಲಿ ಎಂದು ಬಿ.ಎಸ್​​ ಯಡಿಯೂರಪ್ಪ ಟ್ವೀಟ್​​ ಮಾಡಿದ್ದಾರೆ.
"ಐದುನೂರು ವರ್ಷಗಳ ಹಿಂದೆಯೇ 'ಕುಲ ಕುಲ ಎಂದು ಹೊಡೆದಾಡದಿರಿ" ಎನ್ನುವ ಮೂಲಕ ಕನಕ ದಾಸರು ವರ್ಣಾಶ್ರಮ ವ್ಯವಸ್ಥೆ ಸೃಷ್ಟಿಸಿರುವ ಜಾತಿ ನರಕವನ್ನು ದಿಟ್ಟತನದಿಂದ ಪ್ರಶ್ನಿಸಿದ್ದರು. ಜಾತಿ ಪದ್ದತಿಯನ್ನು ಪ್ರಶ್ನಿಸಿ ಆತ್ಮಾವಲೋಕನಕ್ಕೆ ಕರೆಕೊಟ್ಟ ಸಂತ ಕನಕದಾಸರನ್ನು ಇಂದು ನೆನೆಯೋಣ. ಅವರ ತೋರಿದ ದಾರಿಯಲ್ಲಿ ಸಾಗೋಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.


ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗದಲ್ಲಿ ಜನಿಸಿದ ಕನಕದಾಸರು, 16ನೇ ಶತಮಾನದಲ್ಲಿಯೇ ಜಾತಿವ್ಯವಸ್ಥೆ ವಿರುದ್ಧ ಧ್ವನಿಯೆತ್ತಿದ್ದರು. ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗೆ ಮಗನಾಗಿ ಹುಟ್ಟಿದ ಇವರು, ಕೇವಲ ಕುರುಬ ಸಮುದಾಯಕ್ಕೆ ಸೀಮಿತವಾಗರಲಿಲ್ಲ. ಬದಲಿಗೆ ಎಲ್ಲಾ ಜಾತಿಗೆ ಸೇರಿದ ದಾಸರಾದರು. ಅಲ್ಲದೇ ಭಕ್ತಿಪಂಥವನ್ನು ಮುಂದುವರೆಸುವ ಮೂಲಕ ಸಮಾಜದಲ್ಲಿನ ಮೌಢ್ಯ ನಿವಾರಣೆಗೆ ಶ್ರಮಿಸಿದರು. ದಾಸ ಪರಂಪರೆಯಲ್ಲಿ ತಮ್ಮ ಹಾಡುಗಳ ಮೂಲಕ ಜನಸಾಮಾನ್ಯರಲ್ಲಿ ಉಳಿದವರಲ್ಲಿ ಕನಕದಾಸರು ಪ್ರಮುಖರು.

ಇದನ್ನೂ ಓದಿ: ‘ಐಟಿ ಮತ್ತು ಇಡಿ‘ಯಿಂದ ಬಚಾವ್​​ ಆಗಲು ಎಂಟಿಬಿ ಬಿಜೆಪಿ ಸೇರಿದ್ದಾರೆ: ಹೊಸಕೋಟೆ ಬಂಡಾಯ ಅಭ್ಯರ್ಥಿ ಶರತ್​​ ಬಚ್ಚೇಗೌಡ

ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಎನ್ನುವ ದಾಸಪದವನ್ನು ಹೇಳುತ್ತಾ ಜಾತಿವ್ಯವಸ್ಥೆ ವಿರುದ್ಧ ಯುದ್ಧವನ್ನೇ ಸಾರಿದ್ದರು. ನಾವು ಹೇಗೆ ಯೋಚನೆ ಮಾಡುತ್ತೇವೋ ಅದರಂತೆಯೇ ಈ ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ ಎಂದು ಹೇಳಿದರು. ಹೀಗಾಗಿಯೇ ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೇ, ನೀ ದೇಹದೊಳಗೋ, ನಿನ್ನೊಳು ದೇಹವೋ, ನಯನ ಬುದ್ಧಿಯ ಒಳಗೋ, ಬುದ್ಧಿ ನಯನದ ಒಳಗೋ, ನಯನ ಬುದ್ಧಿಗಳೆರಡೂ ನಿನ್ನೊಳಗೋ ಹರಿಯೇ ಎನ್ನುತ್ತಾ, ಈ ಕೀರ್ತನೆಯಲ್ಲಿ ಸತ್ಯವನ್ನು ಬಿಚ್ಟಿಟ್ಟರು ಕನಕದಾಸರು.

ಇಂತಹ ಕನಕದಾಸರ ಜಯಂತಿಯನ್ನು ಪ್ರತಿವರ್ಷವೂ ಸರ್ಕಾರದಿಂದ ಆಚರಿಸಲಾಗುತ್ತದೆ. ಎಂದಿನಂತೆಯೇ ಇಂದು ಕೂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 534ನೇ ಕನಕ ಜಯಂತಿಯನ್ನು ಆಚರಿಸಲಾಗಿದೆ. ಕನಕ ಜಯಂತಿ ಅಂಗವಾಗಿ ಎಂದಿನಂತೆ ಇಂದು ಸರ್ಕಾರ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ಸಾರ್ವತ್ರಿಕ ರಜೆ ಮುಂದುಯವರೆದಿದೆ.

ಇದನ್ನೂ ಓದಿ: ಡಿಕೆಶಿ ಮತ್ತಿತರರು ನಿರಾಳ; ಸುಪ್ರೀಂ ಕೋರ್ಟ್​​ನಲ್ಲಿ ಇಡಿ ಅರ್ಜಿ ವಜಾ; ಕೇಂದ್ರಕ್ಕೂ ತರಾಟೆ
---------
First published: November 15, 2019, 4:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading