ಜಾಮೀನು ಸಿಕ್ಕರೂ ಕಂಪ್ಲಿ ಗಣೇಶ್​ಗೆ ಇಲ್ಲ ಬಿಡುಗಡೆ ಭಾಗ್ಯ!

ಇಂದು ಗಣೇಶ್ ಪರ ವಕೀಲ ರಾಮನಗರ ಕೋರ್ಟ್​​ಗೆ ಹಾಜರಾಗುತ್ತಾರೆ. ಈ ವೇಳೆ ಅವರಿಗೆ ಹೈಕೋರ್ಟ್ ಆದೇಶದ ಪ್ರತಿ ಪಡೆಯಲಿದ್ದಾರೆ.

Rajesh Duggumane | news18
Updated:April 25, 2019, 7:52 AM IST
ಜಾಮೀನು ಸಿಕ್ಕರೂ ಕಂಪ್ಲಿ ಗಣೇಶ್​ಗೆ ಇಲ್ಲ ಬಿಡುಗಡೆ ಭಾಗ್ಯ!
ಕಂಪ್ಲಿ ಗಣೇಶ್​
Rajesh Duggumane | news18
Updated: April 25, 2019, 7:52 AM IST
ಬೆಂಗಳೂರು (ಏ.25): ಜಯನಗರ ಶಾಸಕ ಆನಂದ್​ ಸಿಂಗ್​ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕಂಪ್ಲಿ ಶಾಸಕ ಜೆ.ಎನ್​​​ ಗಣೇಶ್​ಗೆ ಹೈಕೋರ್ಟ್​ ಏಕಸದಸ್ಯ ಪೀಠ ಬುಧವಾರ ಜಾಮೀನು ಮಂಜೂರು ಮಾಡಿತ್ತು. ಆದರೆ, ಗಣೇಶ್​ಗೆ ಹೈಕೋರ್ಟ್ ನಿಂದ ಜಾಮೀನು ಆದೇಶದ ಪ್ರತಿ ಇನ್ನೂ ಸಿಕ್ಕಿಲ್ಲವಾದ್ದರಿಂದ ಅವರ ಬಿಡುಗಡೆ ವಿಳಂಬವಾಗಿದೆ.

ಇಂದು ಗಣೇಶ್ ಪರ ವಕೀಲ ರಾಮನಗರ ಕೋರ್ಟ್​​ಗೆ ಹಾಜರಾಗುತ್ತಾರೆ. ಈ ವೇಳೆ ಅವರಿಗೆ ಹೈಕೋರ್ಟ್ ಆದೇಶದ ಪ್ರತಿ ಪಡೆಯಲಿದ್ದಾರೆ. ಗಣೇಶ್​ಗೆ ವಿಧಿಸಿದ ಷರತ್ತುಗಳಲ್ಲಿ ಕೆಲ ಬದಲಾವಣೆ ಮಾಡಿರುವುದರಿಂದ ಆದೇಶದ ಪ್ರತಿ ಸಿಗುವುದು ತಡವಾಗಿದೆ. ಇಂದು ಸಂಜೆ ಗಣೇಶ್ ಬಿಡುಗಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಗಳೂರು ಹೊರವಲಯದ ಈಗಲ್​ಟನ್ ರೆಸಾರ್ಟ್​ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿರುವ ಆರೋಪ ಗಣೇಶ್ ಮೇಲಿದೆ. ಪ್ರಕರಣ ಬಯಲಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ ಗಣೇಶ್​ ಅವರನ್ನು ಫೆ.20 ರಂದು ಅಹಮದಾಬಾದ್​​ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಆನಂದ ಸಿಂಗ್​​ ಹಲ್ಲೆ ಪ್ರಕರಣ: ಕೊನೆಗೂ ಶಾಸಕ ಗಣೇಶ್​​​ಗೆ ಜಾಮೀನು ಮಂಜೂರು

ಈ ಮಧ್ಯೆ, ಶಾಸಕ ಜೆ ಎನ್​​ ಗಣೇಶ್ ತಮ್ಮ ಬಿಡುಗಡೆಗೆ ಜಾಮೀನು ಅರ್ಜಿ ಸಲ್ಲಿದ್ದರು. ಆದರೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗಣೇಶ್​ ಪರ ವಕೀಲರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿತ್ತು. ನಂತರ ಗಣೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಮಧ್ಯಾಹ್ನ ದೇಶಬಿಟ್ಟು ತೆರಳುವಂತಿಲ್ಲ ಹಾಗೂ 15 ದಿನಕ್ಕೊಮ್ಮೆ ಜ್ಯೂರಿಡಿಕ್ಷನಲ್ ಪೊಲೀಸ್ ಠಾಣೆಗೆ ತೆರಳಿ ಸಹಿ ಮಾಡುವಂತೆ ಎರಡು ಬೇರೆ ಷರತ್ತುಗಳನ್ನು ಕೋರ್ಟ್​ ವಿಧಿಸಿತ್ತು.

ಗಣೇಶ್​ ಅಮಾನತು:ಈಗಲ್​ಟನ್ ರೆಸಾರ್ಟ್​ನಲ್ಲಿ ನಡೆದ ಶಾಸಕರ ಮಾರಾಮಾರಿ ಪ್ರಕರಣ ಸಂಬಂಧ ಆರೋಪಿ ಹಾಗೂ ಕಂಪ್ಲಿ ಶಾಸಕ ಜೆಎನ್ ಗಣೇಶ್ ಅವರನ್ನು ಕಾಂಗ್ರೆಸ್ ಪಕ್ಷ ಅಮಾನತು ಮಾಡಿತ್ತು. ಇದು ಅತ್ಯಂತ ಗಂಭೀರ ಆರೋಪ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಆದೇಶದ ಮೇರೆಗೆ ಶಾಸಕ ಜೆ.ಎನ್. ಗಣೇಶ್ ಅವರನ್ನು ತತ್​ಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿತ್ತು. ಈ ಬಗ್ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು.

First published:April 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ