ಕೈ ಪಾಳಯಕ್ಕೆ ಮಗ್ಗುಲು ಮುಳ್ಳಾದ ಕಂಪ್ಲಿ ಕ್ಷೇತ್ರ; ಸಿಂಗ್-ಗಣೇಶ್ ಕ್ಷೇತ್ರದಲ್ಲಿ ಎತ್ತ ವಾಲಿದರೂ ಸಂಕಷ್ಟ ಗ್ಯಾರಂಟಿ!

ಕಂಪ್ಲಿ ಮೀಸಲು ಕ್ಷೇತ್ರದಲ್ಲಿ ಶಾಸಕರಾಗಿರುವ ಗಣೇಶ್ ಹಾಗೂ ಆನಂದ್ ಸಿಂಗ್ ಅವರ ವಿಜಯನಗರ ಕ್ಷೇತ್ರದಲ್ಲಿ ಪರಿಸ್ಥಿತಿ ತಿಳಿಯಾಗಿಲ್ಲ. ಬಿಡದಿ ರೆಸಾರ್ಟ್ ನಲ್ಲಿ ಸಿಂಗ್ ಮೇಲೆ ಗಣೇಶ್ ಹಲ್ಲೆ ಮಾಡಿದ ಪ್ರಕರಣ ಈಗಲೂ ತಹಬದಿಗೆ ಬಂದಂತಿಲ್ಲ. ಇಂಥ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿರುವ ಉಗ್ರಪ್ಪ ಸದ್ಯ ಕಂಪ್ಲಿ ಕ್ಷೇತ್ರ ನುಂಗಲಾರದ ತುತ್ತಾಗಿ ಪರಿಣಮಿಸಿದೆ

G Hareeshkumar | news18
Updated:April 11, 2019, 6:52 PM IST
ಕೈ ಪಾಳಯಕ್ಕೆ ಮಗ್ಗುಲು ಮುಳ್ಳಾದ ಕಂಪ್ಲಿ ಕ್ಷೇತ್ರ; ಸಿಂಗ್-ಗಣೇಶ್ ಕ್ಷೇತ್ರದಲ್ಲಿ ಎತ್ತ ವಾಲಿದರೂ ಸಂಕಷ್ಟ ಗ್ಯಾರಂಟಿ!
ಬೆಂಬಲಿಗರು
G Hareeshkumar | news18
Updated: April 11, 2019, 6:52 PM IST
ಬಳ್ಳಾರಿ (ಏ.11) : ಗಣಿನಾಡು ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಕೈ ಪಾಳಯಕ್ಕೆ ಕಂಪ್ಲಿ ಕ್ಷೇತ್ರ ಮುಳ್ಳಾಗಿ ಪರಿಣಮಿಸಿದೆ. ಬಿಡದಿ ರೆಸಾರ್ಟ್ ನಲ್ಲಿ ಯಾವಾಗ ಬಳ್ಳಾರಿ ಶಾಸಕರಿಬ್ಬರು ಬಡಿದಾಡಿಕೊಂಡರೋ ಆಗಿನಿಂದ ಕಂಪ್ಲಿ ಕ್ಷೇತ್ರಕ್ಕೆ ಕೈ ನಾಯಕರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸ್ವತಃ ಸಚಿವ ಡಿಕೆ ಶಿವಕುಮಾರ್, ಉಗ್ರಪ್ಪ ಅವರು ನಡೆಸಿದ ಪಕ್ಷದ ಸಭೆಯಲ್ಲಿ ಶಾಸಕ ಗಣೇಶ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಬಿಸಿ ಮುಟ್ಟಿಸಿದ್ದಾರೆ.

ಚುನಾವಣೆ ದೃಷ್ಟಿಯಿಂದ ವಿಜಯನಗರ ಕ್ಷೇತ್ರದಲ್ಲಿ ಆನಂದ್ ಸಿಂಗ್ ಜೊತೆ ಎಚ್ಚರಿಕೆ ಹೆಜ್ಜಯನ್ನು ಇಡುತ್ತಿದ್ದಾರೆ. ಶಾಸಕರಿಬ್ಬರ ಪರ ಹೆಚ್ಚು ಎತ್ತ ವಾಲಿದರೂ ಅದು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಬಳ್ಳಾರಿ ಜಿಲ್ಲೆಯ ಈ ಎರಡು ಕ್ಷೇತ್ರಗಳಿಗೆ ಕೈ ಅಭ್ಯರ್ಥಿ ಉಗ್ರಪ್ಪ ಹೆಜ್ಜೆ ಇಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದಾರೆ. ಶಾಸಕ ಗಣೇಶ್ ಅವರ ಕಂಪ್ಲಿ ಹಾಗೂ ಆನಂದ್ ಸಿಂಗ್ ಇರುವ ವಿಜಯನಗರ ಕ್ಷೇತ್ರದಲ್ಲಿ ತುಸು ಎತ್ತ ವಾಲಿದರೂ ಉಗ್ರಪ್ಪ ಅವರಿಗೆ ಸಂಕಷ್ಟ ಗ್ಯಾರಂಟಿಯೇ!

ಇದನ್ನೂ ಓದಿ: ಗೆಲ್ಲೋದು ಇಲ್ಲಿ, ವಾಸ ಅಲ್ಲಿ: ಐದಾರು ದಶಕಗಳಿಂದಲೂ ಚಾಮರಾಜನಗರ ಕ್ಷೇತ್ರದ ಜನಪ್ರತಿನಿಧಿಗಳ ಕರ್ಮಕಾಂಡ

ಕಂಪ್ಲಿ ಮೀಸಲು ಕ್ಷೇತ್ರದಲ್ಲಿ ಶಾಸಕರಾಗಿರುವ ಗಣೇಶ್ ಹಾಗೂ ಆನಂದ್ ಸಿಂಗ್ ಅವರ ವಿಜಯನಗರ ಕ್ಷೇತ್ರದಲ್ಲಿ ಪರಿಸ್ಥಿತಿ ತಿಳಿಯಾಗಿಲ್ಲ. ಬಿಡದಿ ರೆಸಾರ್ಟ್ ನಲ್ಲಿ ಸಿಂಗ್ ಮೇಲೆ ಗಣೇಶ್ ಹಲ್ಲೆ ಮಾಡಿದ ಪ್ರಕರಣ ಈಗಲೂ ತಹಬದಿಗೆ ಬಂದಂತಿಲ್ಲ. ಇಂಥ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿರುವ ಉಗ್ರಪ್ಪ ಸದ್ಯ ಕಂಪ್ಲಿ ಕ್ಷೇತ್ರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ತೇಪೆ ಹಚ್ಚುವ ಹೇಳಿಕೆಯನ್ನು ನೀಡಿದ ಕೈ ಅಭ್ಯರ್ಥಿ ಉಗ್ರಪ್ಪ

ಇತ್ತೀಚೆಗೆ ಕಂಪ್ಲಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಕೈ ಕಾರ್ಯಕರ್ತರ ಸಭೆಯಲ್ಲಿಯೇ ಉಗ್ರಪ್ಪ ವಿರುದ್ಧ ಗಣೇಶ್ ಬೆಂಬಲಿಗರು ತಮ್ಮ ಅಸಮಾಧಾನ ಹೊರಹಾಕಿದ್ದರು. ಸಚಿವ ಡಿ ಕೆ ಶಿವಕುಮಾರ್ ಕಂಪ್ಲಿ ಕ್ಷೇತ್ರದ ಪ್ರಚಾರದ ವೇಳೆ ಗಣೇಶ್ ಬೆಂಬಲಿಗರ ಆಕ್ರೋಶದ ಒತ್ತಾಯಕ್ಕೆ ಖುದ್ದು ಟ್ರಬಲ್ ಷೂಟರ್ ಸುಸ್ತು ಹೊಡೆದಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಗಣೇಶ್ ಅವರನ್ನು ಜೈಲಿಗೆ ಹೋಗಿ ಭೇಟಿಯಾಗಿದ್ದೇನೆ. ಮಾಡಿದ ತಪ್ಪು ಒಪ್ಪಿಕೊಂಡಿದ್ದಾರೆ. ಸಚಿವನಾಗಿ ತಪ್ಪು ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ತೇಪೆ ಹಚ್ಚುವ ಹೇಳಿಕೆಯನ್ನು ನೀಡಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.
Loading...

ಇದನ್ನೂ ಓದಿ: ಅನುಕಂಪಕ್ಕಾಗಿ ಏ.16ರಂದು ಸುಮಲತಾ ಕಡೆಯವರು ಕಲ್ಲಲ್ಲಿ ಹೊಡೆಸಿಕೊಂಡು ನಾಟಕವಾಡಲಿದ್ದಾರೆ: ಸಿಎಂ ಗಂಭೀರ ಆರೋಪ

ಸಚಿವ ಡಿ ಕೆ ಶಿವಕುಮಾರ್ ಅವರು ನೀಡಿದ ತೇಪೆ ಹಚ್ಚುವ ಹೇಳಿಕೆಗೆ ಗಣೇಶ್ ಬೆಂಬಲಿಗರು ಸಮಾಧಾನಗೊಂಡಿಲ್ಲ. ಡಿಕೆಶಿ ನಡೆಸಿದ ಸಭೆ ಬಳಿಕವೂ ಕಂಪ್ಲಿ ಕ್ಷೇತ್ರದಲ್ಲಿ ಶಾಸಕ ಗಣೇಶ್ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಕೂಡಲೇ ಪಕ್ಷದಿಂದ ಅಮಾನತು ಆದೇಶ ವಾಪಾಸ್ ಪಡೆಯಬೇಕು, ಜಾಮೀನಿನ ಮೂಲಕ ಹೊರಗಡೆ ಕರೆತರುವ ಕಾರ್ಯ ಮಾಡಬೇಕು ಎಂದು ವರಿಷ್ಟರಿಗೆ ಒತ್ತಾಯ ಮಾಡುತ್ತಿದ್ದಾರೆ. ಕೈ ನಾಯಕರು ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ಕಳೆದ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಲೀಡ್ ಕೊಟ್ಟ ಕಂಪ್ಲಿ ಕ್ಷೇತ್ರದಲ್ಲಿ ಈ ಬಾರಿ ಸಂಕಷ್ಟ ಪಕ್ಷ ಅನುಭವಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ಬಿಡುಗಡೆಯಾಗಿ ಕಾಯುತ್ತಿರುವ ಬೆಂಬಲಿಗರು

ಜಾಮೀನಿನ ನಿರೀಕ್ಷೆಯಲ್ಲಿರುವ ಗಣೇಶ್ ಜೈಲಿನಿಂದ ಯಾವಾಗ ಬಿಡುಗಡೆಯಾಗುತ್ತದೆ ಎಂದು ಬೆಂಬಲಿಗರು ಕಾಯುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಕಳೆದ ಉಪ ಚುನಾವಣೆಯಲ್ಲಿ ಆಕ್ಟಿವ್ ಆಗಿ ಓಡಾಡಿದ್ದ ಕೈ ಮುಖಂಡ ಸೂರ್ಯನಾರಾಯಣ ರೆಡ್ಡಿ ಈ ಬಾರಿ ಹೊರಗಡೆ ಬರುತ್ತಿಲ್ಲ. ಎಂಎಲ್ ಸಿ ಸ್ಥಾನದ ಆಸೆ ತೋರಿಸಿದರೆ ವಿನಃ ಯಾವ ಸ್ಥಾನಮಾನ ನೀಡಲಿಲ್ಲ. ಇವರ ಗೈರುಹಾಜರಿ ಜೊತೆಗೆ ಕ್ಷೇತ್ರದಲ್ಲಿ ಶಾಸಕನಿಲ್ಲದೆ ಹೇಗೆ ಪಕ್ಷದ ಕಾರ್ಯಕರ್ತರು ಪ್ರಚಾರ ಮಾಡಲು ಸಾಧ್ಯ? ಎಂದು ಬೆಂಬಲಿಗರು ಕೇಳುವ ಪ್ರಶ್ನೆಗೆ ನಾಯಕರು ಉತ್ತರಿಸದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: Lok Sabha Election 2019: ಪ್ರಧಾನಿ ಮೋದಿ ವಿಚಾರವಾಗಿ ಇಬ್ಬಾಗವಾಗಿದೆ ಬಾಲಿವುಡ್

ಜಾಮೀನಿಗಾಗಿ ಕಾಯುತ್ತಿರುವ ಗಣೇಶ್​ಗೆ ಪಕ್ಷ ಅಮಾನತು ಮಾಡಿರುವುದು ಕೈ ಪಾಳಯಕ್ಕೆ ಚುನಾವಣೆ ಸಂದರ್ಭದಲ್ಲಿ ಸೆರಗಿನಲ್ಲಿ ಕೆಂಡ ಕಟ್ಟಿಕೊಟ್ಟಂತಾಗಿದೆ. ಮುಂದೆ ಹೊರಗಡೆ ಗಣೇಶ್ ಬಂದು, ಅಮಾನತು ವಾಪಾಸ್ ಪಡೆದು ಗಣೇಶ್ ಬೆಂಬಲಿಕ್ಕೆ ಪಕ್ಷ ನಿಂತರೆ ಇತ್ತ ಪ್ರಚಾರ ಮಾಡುತ್ತಿರುವ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಇದು ಕೈ ಅಭ್ಯರ್ಥಿ ಉಗ್ರಪ್ಪ ಹಾಗೂ ಚುನಾವಣಾ ಉಸ್ತುವಾರಿ ಹೊತ್ತಿರುವ ಡಿ ಕೆ ಶಿವಕುಮಾರ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

(ವರದಿ: ಶರಣು ಹಂಪಿ)

 

First published:April 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626