HOME » NEWS » State » KAMBALA JOCKEY SRINIVASA GOWDA TURNS DOWN SPORTS MINISTER KIREN RIJIJUS INVITE FOR SAI TRIALS RMD

ಕ್ರೀಡಾ ಸಚಿವರ ಆಹ್ವಾನ ನಿರಾಕರಿಸಿದ ಕಂಬಳ ವೀರ ಶ್ರೀನಿವಾಸ್​ ಗೌಡ; ಕಾರಣವೇನು ಗೊತ್ತಾ?

ಬೆಳಗ್ಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರನ್ನು ಶ್ರೀನಿವಾಸ ಗೌಡ ಭೇಟಿ ಮಾಡಿದ್ದಾರೆ. ಕೆಲ ಕಾಲ ಸಿಎಂ ಜೊತೆ ಶ್ರೀನಿವಾಸ ಗೌಡ ಮಾತುಕತೆ ನಡೆಸಿದ್ದಾರೆ.

news18-kannada
Updated:February 17, 2020, 10:54 AM IST
ಕ್ರೀಡಾ ಸಚಿವರ ಆಹ್ವಾನ ನಿರಾಕರಿಸಿದ ಕಂಬಳ ವೀರ ಶ್ರೀನಿವಾಸ್​ ಗೌಡ; ಕಾರಣವೇನು ಗೊತ್ತಾ?
ಶ್ರೀನಿವಾಸ ಗೌಡ
  • Share this:
ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆ ಹಿಂದಿಕ್ಕುವ ಮೂಲಕ ಜಾನಪದ ಕ್ರೀಡೆ ಕಂಬಳ ಪಟು ಶ್ರೀನಿವಾಸ ಗೌಡ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದರು. ಈ ಮಧ್ಯೆ ಶ್ರೀನಿವಾಸ ಗೌಡ ಅವರಿಗೆ ಉನ್ನತ ತರಬೇತಿ ನೀಡುವ ಉದ್ದೇಶದಿಂದ ಟ್ರಯಲ್ಸ್‌ಗೆ ಆಹ್ವಾನ ನೀಡಲಾಗಿತ್ತು. ಆದರೆ, ಈ ಆಫರ್​ ತಿರಸ್ಕರಿಸುವ ಮೂಲಕ ಅವರು ಅಚ್ಚರಿ ಮೂಡಿಸಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಶ್ರೀನಿವಾಸ ಗೌಡ ಎಂಬುವವರು ಕಂಬಳ ಸ್ಪರ್ಧೆಯಲ್ಲಿ 100 ಮೀಟರ್​ಅನ್ನು ಕೇವಲ 9.55 ಸೆಕೆಂಡ್​ನಲ್ಲಿ ಕ್ರಮಿಸಿದ್ದರು. ಈ ದಾಖಲೆಯ ಓಟಕ್ಕೆ ದೇಶವೇ ನಿಬ್ಬೆರಗಾಗಿತ್ತು. ಅನೇಕರು ಟ್ವಿಟ್ಟರ್​ನಲ್ಲಿ ಶ್ರೀನಿವಾಸ ಗೌಡಗೆ ಹೆಚ್ಚಿನ ತರಬೇತಿ ಸಿಗಬೇಕು ಎಂದು ಬರೆದುಕೊಂಡಿದ್ದರು.

“ಭಾರತೀಯ ಕ್ರೀಡಾ ಪ್ರಾಧಿಕಾರದ ಉನ್ನತ ತರಬೇತುದಾರರ ಬಳಿಗೆ ಟ್ರಯಲ್ಸ್‌ಗೆ ನಾನು ಕರ್ನಾಟಕದ ಶ್ರೀನಿವಾಸ ಗೌಡರನ್ನು ಆಹ್ವಾನಿಸುತ್ತೇನೆ,” ಎಂದು ಕ್ರೀಡಾ ಸಚಿವ ಕಿರಣ್​ ರಿಜಿಜು ಹೇಳಿದ್ದರು. ಆದರೆ, ಟ್ರಯಲ್​ಗೆ ತೆರಳಲು ಸಾಧ್ಯವಿಲ್ಲ ಎಂದು ಶ್ರೀನಿವಾಸ ಗೌಡ ಹೇಳಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಹೇಳಲು ಕಾರಣವೇನು ಗೊತ್ತಾ? ಅದಕ್ಕೆ ಇಲ್ಲಿದೆ ಉತ್ತರ.  ಮಾರ್ಚ್​ 10ರವರೆಗೆ ಕಂಬಳ ಸ್ಪರ್ಧೆ ನಡೆಯಲಿದೆ.  ಹೀಗಾಗಿ ಅಲ್ಲಿಯವರೆಗೆ ಕಂಬಳದಲ್ಲಿ ಮುಂದುವರಿಯುವುದಾಗಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ. ಹೀಗಾಗಿ ಮಾರ್ಚ್​ 10ರವರೆಗೆ ಟ್ರಯಲ್ಸ್​ ನಡೆಯುವುದಿಲ್ಲ.

#WATCH - Srinivasa Gowda from Karnataka ran 100m in 9.55 seconds at a "Kambala" (buffalo race). He was faster than Usain Bolt who took 9.58 seconds to create a world record. pic.twitter.com/rrbf3lxnpnಇಂದು, ಬೆಳಗ್ಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರನ್ನು ಶ್ರೀನಿವಾಸ ಗೌಡ ಭೇಟಿ ಮಾಡಿದ್ದಾರೆ. ಕೆಲ ಕಾಲ ಸಿಎಂ ಜೊತೆ ಶ್ರೀನಿವಾಸ ಗೌಡ ಮಾತುಕತೆ ನಡೆಸಿದ್ದಾರೆ.ಇದನ್ನೂ ಓದಿ: ಕಂಬಳ ವೀರನ ಮಿಂಚಿನ ವೇಗಕ್ಕೆ ಕ್ರೀಡಾ ಸಚಿವರ ಮೆಚ್ಚುಗೆ; ಟ್ರಯಲ್ಸ್​ಗೆ ಆಹ್ವಾನಿಸಿದ ಕಿರಣ್ ರಿಜಿಜು

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಸಿಟಿ ರವಿ, “ಕಂಬಳ ವೀರ ಶ್ರೀನಿವಾಸಗೌಡ ಅವರನ್ನು ಕರೆದಿದ್ದೇವೆ. ಅವರಿಗೆ ಅಗತ್ಯವಾದ ಎಲ್ಲಾ ತರಬೇತಿ ಕೊಡುತ್ತೇವೆ. ಅವರು ಫ್ರೀ ಕ್ವಾಲಿಫಿಕೇಶನ್​ನಲ್ಲಿ ಪಾಸ್ ಆದರೆ ಮುಂದಿನ ತರಬೇತಿ ನೀಡುತ್ತೇವೆ,” ಎಂದು ಹೇಳಿದ್ದಾರೆ.
First published: February 17, 2020, 10:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories