Kamakshipalya Acid Attack: ಆ್ಯಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ತೆ ಡಿಸ್ಚಾರ್ಜ್; ನ್ಯೂಸ್ 18 ಜೊತೆ ಎಕ್ಸ್​ಕ್ಲೂಸಿವ್ ಮಾತು

ಆ್ಯಸಿಡ್ ದಾಳಿ ನಡೆಸಿದ ನೀಚರನ್ನು ಗುಂಡಿಕ್ಕಿ ಕೊಲ್ಲಬೇಕು. ಇಲ್ಲಾವಾದ್ರೆ ಜೈಲಿನಲ್ಲಿ ಊಟ ಮಾಡ್ಕೊಂಡು ಚೆನ್ನಾಗಿ ಇರುತ್ತಾರೆ. ಯಾರ ಮೇಲೆಯೂ ಈ ರೀತಿ ದಾಳಿ ನಡೆಯದಂತೆ ಸರ್ಕಾರ ಕಠಿಣ ಕಾನೂನುಗಳನ್ನು ತರಬೇಕು ಎಂದು ಸಂತ್ರಸ್ತೆ ಆಗ್ರಹಿಸಿದ್ದಾರೆ.

ಆ್ಯಸಿಡ್‌ ಅಟ್ಯಾಕ್‌ನ ಪ್ರಾತಿನಿಧಿಕ ಚಿತ್ರ (ಕೃಪೆ: Internet)

ಆ್ಯಸಿಡ್‌ ಅಟ್ಯಾಕ್‌ನ ಪ್ರಾತಿನಿಧಿಕ ಚಿತ್ರ (ಕೃಪೆ: Internet)

  • Share this:
ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ (Kamakshiplya) ನಡೆದ ಆ್ಯಸಿಡ್ ದಾಳಿಗೆ (Acid Attack) ತುತ್ತಾಗಿದ್ದ ಸಂತ್ರಸ್ತೆ (Acid Victim) ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ (Hospital) ಆಗಿದ್ದಾರೆ. ಇಂದು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಸಂತ್ರಸ್ತೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದು , ಆ್ಯಸಿಡ್ ದಾಳಿ ಮಾಡಿದವನಿಗೆ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ. ಈಗ ಆರೋಗ್ಯ (Health) ಸುಧಾರಿಸಿದೆ. ಸರ್ಜರಿಯ ನೋವುಗಳೆಲ್ಲ ಹಾಗಿದೆ. ಇನ್ನೂ ಬ್ಯಾಂಡೇಜ್ ಸಹ ಹಾಗೇ ಇದ್ದು, ನೋವು ಇದೆ. ಏಪ್ರಿಲ್ 28ರಂದು ನಾನು ತಂದೆಯ ಜೊತೆ ಕಚೇರಿಗೆ ಹೋದೆ. ಎಂದಿನಂತೆ ಕಚೇರಿ ಕಟ್ಟಡದೊಳಗೆ ಹೋಗುತ್ತಿರುವಾಗ ಹಿಂದಿನಿಂದ ಯಾರೋ ಕೂಗಿದಂತೆ ಕೇಳಿಸಿತು. ಹಿಂದಿರುಗಿ ನೋಡಿದಾಗ ಕೈಯಲ್ಲಿ ಆ್ಯಸಿಡ್ ನೋಡಿದಾಗ ಭಯ ಆಯ್ತು. ನಾನು ಮೆಟ್ಟಿಲು ಕೆಳಗೆ ಇಳಿದು ಓಡಲು ಪ್ರಾರಂಭಿಸಿದಾಗ ತನ್ನ ಕೂದಲು ಹಿಡಿದು ಆ್ಯಸಿಡ್ ಹಾಕಿದ ಎಂದು ಏಪ್ರಿಲ್ 28ರಂದು ನಡೆದ ಘಟನೆಯನ್ನು ವಿವರಿಸಿದರು.

ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಯಲ್ಲಿಯೇ ಇದ್ದೆ. ಆರೋಪಿಯ ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಲಾಗಿರುವ ವಿಷಯ ನನ್ನ ಗಮನಕ್ಕೆ ಬಂತು. ಆದ್ರೆ ಆತ ಚಿಕಿತ್ಸೆ ಪಡೆದು ಜೈಲಿನಲ್ಲಿ ಆರಾಮಾವಾಗಿ ಇದ್ದಾನೆ. ಆ್ಯಸಿಡ್ ದಾಳಿ ನಡೆದರೆ ಎಷ್ಟು ನೋವು ಆಗುತ್ತೆ ಎಂದು ಅವನಿಗೆ ಗೊತ್ತಾಗಬೇಕು. ಆ್ಯಸಿಡ್ ಹಾಕಿ ಅವನನ್ನು ಗಲ್ಲಿಗೆ ಹಾಕಬೇಕು ಎಂದು ಸಂತ್ರಸ್ತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Koppal: ಹುಲಿಹೈದರ ಘರ್ಷಣೆ, ಸರ್ಕಾರದ ನಿರ್ಲಕ್ಷ್ಯವೇ ಗಲಾಟೆಗೆ ಕಾರಣವಾಯ್ತಾ?

Kamakshipalya Acid Attack case victim discharged from hospital mrq
ಆ್ಯಸಿಡ್ ನಾಗ


ಎರಡು ತಿಂಗಳು ಏನಾಯ್ತು ಅನ್ನೋದು ಗೊತ್ತಿಲ್ಲ

ಆ್ಯಸಿಡ್ ದಾಳಿ ನಡೆದ ಬಳಿಕ ಎರಡು ತಿಂಗಳು ಯಾವ ಘಟನೆಯೂ ನನಗೆ ನೆನಪಿಲ್ಲ. ಆ್ಯಸಿಡ್ ದಾಳಿ ನಡೆದ ಕೆಲವೇ ದಿನಗಳಲ್ಲಿ ಅಕ್ಕನ ಮದುವೆ ಫಿಕ್ಸ್ ಆಗಿತ್ತು. ಅದಕ್ಕೆಲ್ಲ ತಯಾರಿ ಮಾಡಿಕೊಂಡಿದ್ದೆ. ನಾನು ಮತ್ತು ನನ್ನ ತಂಗಿ ಒಂದೇ ರೀತಿ ಡ್ರೆಸ್ ಹಾಕಿಕೊಳ್ಳಬೇಕು ಎಂದು ಪ್ಲಾನ್ ಮಾಡಿದ್ದೆ. ಆದ್ರೆ ಅಕ್ಕನ ಮದುವೆಯಲ್ಲಿ ಭಾಗಿಯಾಗಿಲಿಲ್ಲ ಎಂಬ ನೋವು ಇದೆ ಎಂದು ಹೇಳಿದರು.

ಆಸ್ಪತ್ರೆಗೆ ದಾಖಲಾದ ನಾಲ್ಕೈದು ದಿನದ ನಂತರ ದೊಡ್ಡಮ್ಮ ನನ್ನ ಜೊತೆಯಲ್ಲಿಯೇ ಇದ್ರು. ಅಂದು ನನ್ನ ಜೊತೆಯಲ್ಲಿದ್ದ ದೊಡ್ಡಮ್ಮ ಅವರು ಸಹ ನಿನ್ನೆ ಮನೆಗೆ ಬಂದಿದ್ರು. ಅವರೇ ಮಾತುಗಳೇ ನನ್ನಲ್ಲಿ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ. ಆಸ್ಪತ್ರೆಯಲ್ಲಿ ಒಂದು ಕ್ಷಣವೂ ನನ್ನನ್ನು ಬಿಟ್ಟು ಹೋಗುತ್ತಿರಲಿಲ್ಲ.

Kamakshipalya Acid Attack case victim discharged from hospital mrq
ಆರೋಪಿ ನಾಗೇಶ್​


ಬಿಕಾಂ ಓದುತ್ತಿದ್ದಾಗ ಫಾಲೋ ಮಾಡ್ತಿದ್ದ

ಆರೋಪಿ ನಾಗ ನಮ್ಮ ದೊಡ್ಡಮ್ಮನ ಮನೆಯ ಪಕ್ಕದಲ್ಲಿಯೇ ವಾಸವಾಗಿದ್ದ. ಬಿಕಾಂ ಓದುತ್ತಿದ್ದಾಗ ಆತ ನನ್ನನ್ನು ಫಾಲೋ ಮಾಡುತ್ತಿದ್ದನು. ಒಂದು ದಿನ ಬಂದು ಪ್ರಪೋಸ್ ಮಾಡಿದ್ದ, ನಾನು ಅಮ್ಮ ಮತ್ತು ದೊಡ್ಡಮ್ಮನಿಗೆ ವಿಷಯ ತಿಳಿಸಿದೆ. ನನಗೆ ಮದುವೆ ಇಷ್ಟ ಇಲ್ಲ ಎಂದು ನನ್ನ ಅಭಿಪ್ರಾಯ ತಿಳಿಸಿದ್ದೆ.

ಅದಾದ ಬಳಿಕ ಆ್ಯಸಿಡ್ ದಾಳಿಗೂ ಒಂದು ದಿನ ಮುನ್ನ ಬಂದು ಮದುವೆ ಆಗುವಂತೆ ಹೇಳಿದ್ದ. ಅದರ ಮರುದಿನವೇ ನನ್ನ ಮೇಲೆ ಌಸಿಡ್ ದಾಳಿ ನಡೆಸಿದನು.

Kamakshipalya Acid Attack case victim discharged from hospital mrq
ಸಂತ್ರಸ್ತೆಗೆ ರಕ್ತದಾನ ಮಾಡುತ್ತಿರುವ ಪೊಲೀಸ್


ಎಲ್ಲರಿಗೂ ಧನ್ಯವಾದ

ಇನ್ನು ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ನನಗೆ ಧೈರ್ಯ ತುಂಬಿದ್ರು. ಅವರೆಲ್ಲರ ವಿಶೇಷ ಕಾಳಜಿಯಿಂದ ಇಷ್ಟು ಬೇಗ ಗುಣಮುಖಳಾಗಿ ಬಂದಿದ್ದೇನೆ. ವಿಶೇಷವಾಗಿ ಕಾಮಾಕ್ಷಿಠಾಣೆಯ ಪೊಲೀಸರು ತುಂಬಾ ಸಹಾಯ ಮಾಡಿದ್ದಾರೆ. ನ್ಯೂಸ್ 18 ಮೂಲಕ ಸಂತ್ರಸ್ತೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಇದನ್ನೂ ಓದಿ:  Hubballi: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಆಗ್ರಹ; ಮತ್ತೆ ವಿವಾದ ಮುನ್ನೆಲೆಗೆ ಸಾಧ್ಯತೆ!

ನೀಚರನ್ನು ಗುಂಡಿಕ್ಕಿ ಕೊಲ್ಲಬೇಕು

ಆ್ಯಸಿಡ್ ದಾಳಿ ನಡೆಸಿದ ನೀಚರನ್ನು ಗುಂಡಿಕ್ಕಿ ಕೊಲ್ಲಬೇಕು. ಇಲ್ಲಾವಾದ್ರೆ ಜೈಲಿನಲ್ಲಿ ಊಟ ಮಾಡ್ಕೊಂಡು ಚೆನ್ನಾಗಿ ಇರುತ್ತಾರೆ. ಯಾರ ಮೇಲೆಯೂ ಈ ರೀತಿ ದಾಳಿ ನಡೆಯದಂತೆ ಸರ್ಕಾರ ಕಠಿಣ ಕಾನೂನುಗಳನ್ನು ತರಬೇಕು ಎಂದು ಸಂತ್ರಸ್ತೆ ಆಗ್ರಹಿಸಿದ್ದಾರೆ.
Published by:Mahmadrafik K
First published: