• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಅನುದಾನಕ್ಕೆ ಆಗ್ರಹಿಸಿ ಇಂದು ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳು ‌ಬಂದ್...!

ಅನುದಾನಕ್ಕೆ ಆಗ್ರಹಿಸಿ ಇಂದು ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳು ‌ಬಂದ್...!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2013-14 ರಲ್ಲಿ 371 ಜೆ ಜಾರಿಗೆ ಬಂದಿದೆ.  ಪ್ರತಿ ವರ್ಷ ಸಾವಿರಾರು ಕೋಟಿ ಅನುದಾನ ಬರುತ್ತಿದೆ.  ಆದ್ರೆ ಬಂದಂತಹ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಹೋಗುತ್ತಿದೆ. 7 ಜಿಲ್ಲೆಗಳಲ್ಲಿ 1,500 ಕನ್ನಡ ಮಾಧ್ಯಮ ಖಾಸಗಿ ಅನುದಾನ ರಹಿತ ಶಾಲೆಗಳಿವೆ. ಉಳಿದಂತೆ ಉರ್ದು, ಇಂಗ್ಲಿಷ್ ಮಾಧ್ಯಮ ಶಾಲೆಗಳಿವೆ. 5 ಲಕ್ಷ ವಿದ್ಯಾರ್ಥಿಗಳು ಈ ಭಾಗದಲ್ಲಿ ಇದ್ದಾರೆ. ಅನುದಾನ ನೀಡದಿದ್ದರೆ ಇವರೆಲ್ಲರೂ ಬೀದಿಗೆ ಬೀಳುತ್ತಾರೆ

ಮುಂದೆ ಓದಿ ...
 • Share this:

ಬೆಂಗಳೂರು(ಫೆ.15): 371 ಜೆ ಅಡಿ ಅನುದಾನಕ್ಕೆ ಒತ್ತಾಯಿಸಿ ಇಂದು ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳು ‌ಬಂದ್ ಆಗಲಿವೆ. ಸುಮಾರು ಒಂದೂವರೆ ಸಾವಿರ ಶಾಲೆಗಳು ಇಂದು ಮುಚ್ಚಲಿವೆ. ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ,ಯಾದಗಿರಿ, ವಿಜಯನಗರ ಜಿಲ್ಲೆಯ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ. 371ಜೆ ಅಡಿ ಅನುದಾನ ನೀಡುವಂತೆ  ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರಕ್ಕೆ‌ ಹಲವು ಬಾರಿ ಮನವಿ ಮಾಡಕೊಂಡಿತ್ತು. ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗದ ಹಿನ್ನೆಲೆ ಇಂದು ಒಂದು ದಿನ ಕನ್ನಡ ಮಾಧ್ಯಮ ಶಾಲೆಗಳನ್ನು ಬಂದ್ ಮಾಡಲಾಗುತ್ತಿದೆ. 1995 ರಿಂದ 2015 ರ ವರೆಗಿನ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟದ ಒತ್ತಾಯವಾಗಿದೆ.


ಕಳೆದ 7 ವರ್ಷಗಳಿಂದ ಒಂದೇ ಒಂದು ರೂಪಾಯಿ ಅನುದಾನ ಬಳಕೆಯಾಗಿಲ್ಲ. ಬಂದಂತಹ ಅನುದಾ‌ನ ಸರ್ಕಾರಕ್ಕೆ ವಾಪಸ್ ಹೋಗಿದೆ. ಕಳೆದ ವರ್ಷ ಬಜೆಟ್ ನಲ್ಲಿ 1,500 ಕೋಟಿ ಅನುದಾನ ಬಂದಿದೆ. ಆದ್ರೆ ಕೇವಲ 300 ಕೋಟಿ ಅನುದಾನ ಮಾತ್ರ ಬಳಕೆಯಾಗಿದೆ. ಇನ್ನೂ ಆ ಭಾಗದ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ.
ಶಿಕ್ಷಕರ ಕೊರತೆ ಇದೆ. ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು ಸರ್ಕಾರಕ್ಕೆ ಬೆಂಬಲವಾಗಿ ಕೆಲಸ ಮಾಡುತ್ತಿವೆ. ಹೀಗಾಗಿ ಬಜೆಟ್ ನಲ್ಲಿ ಅನುದಾನ ಘೋಷಿಸುವಂತೆ ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮ ಶಾಲೆಗಳ ಒಕ್ಕೂಟ ಆಗ್ರಹಿಸಿದೆ.


ಮನೆಗೆ ನುಗ್ಗಿ 8 ದಿನದ ಹಸುಗೂಸನ್ನು ಎಳೆದೊಯ್ದ ಕೋತಿ; ಅಸುನೀಗಿದ ಮಗು..!


2013-14 ರಲ್ಲಿ 371 ಜೆ ಜಾರಿಗೆ ಬಂದಿದೆ.  ಪ್ರತಿ ವರ್ಷ ಸಾವಿರಾರು ಕೋಟಿ ಅನುದಾನ ಬರುತ್ತಿದೆ.  ಆದ್ರೆ ಬಂದಂತಹ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಹೋಗುತ್ತಿದೆ. 7 ಜಿಲ್ಲೆಗಳಲ್ಲಿ 1,500 ಕನ್ನಡ ಮಾಧ್ಯಮ ಖಾಸಗಿ ಅನುದಾನ ರಹಿತ ಶಾಲೆಗಳಿವೆ. ಉಳಿದಂತೆ ಉರ್ದು, ಇಂಗ್ಲಿಷ್ ಮಾಧ್ಯಮ ಶಾಲೆಗಳಿವೆ. 5 ಲಕ್ಷ ವಿದ್ಯಾರ್ಥಿಗಳು ಈ ಭಾಗದಲ್ಲಿ ಇದ್ದಾರೆ. ಅನುದಾನ ನೀಡದಿದ್ದರೆ ಇವರೆಲ್ಲರೂ ಬೀದಿಗೆ ಬೀಳುತ್ತಾರೆ. ಅದಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ಈಗಾಗಲೇ ಅಲ್ಲಿನ ಮಕ್ಕಳು ಕೂಲಿ ಕಾರ್ಮಿಕರಿದ್ದಾರೆ 10ನೇ ತರಗತಿ ಪರೀಕ್ಷೆ ಹತ್ತಿರದಲ್ಲಿದೆ. ನಾವು ಸಂಕಷ್ಟದಲ್ಲಿದ್ದೇವೆ.  ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮ ಶಾಲೆಗಳ ಒಕ್ಕೂಟದ ಅಳಲು.


ಇವರ ಬೇಡಿಕೆಗಳೇನು..?


 • ಅನುದಾನಕ್ಕೆ ಸೇರದ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸುವುದು.

 • ಮುಚ್ಚಲು ಹೊರಟಿರುವ 125 ಶಾಲೆಗಳನ್ನ ಕೈ ಬಿಡಬೇಕು.

 • ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣ ಬಳಕೆಗೆ ಅವಕಾಶ ಮಾಡಿಕೊಡಬೇಕು.ಆದ್ರೆ ಸರ್ಕಾರದಿಂದ ಬೇಡಿಕೆಗಳಿಗೆ ಸ್ಪಂದನೆ ಸಿಗದ ಹಿನ್ನೆಲೆ, ಇಂದು ಕನ್ನಡ ಮಾಧ್ಯಮ‌ ಖಾಸಗಿ ಶಾಲೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಸಾಂಕೇತಿಕವಾಗಿ ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.  ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಒಕ್ಕೂಟ ಹೋರಾಟಕ್ಕೆ ರುಪ್ಸಾ ಕೂಡ ಬೆಂಬಲ ನೀಡಿದೆ ಎಂದು ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಸುನಿಲ್ ಹುಡುಗಿ ಮಾಹಿತಿ ನೀಡಿದ್ದಾರೆ.

top videos
  First published: