ಪಾಠದೊಂದಿಗೆ ಪರಿಸರ ಪ್ರೀತಿ ಹೇಳುವ ಕಲ್ಮಡ ಸರ್ಕಾರಿ ಪ್ರಾಥಮಿಕ ಶಾಲೆ

ಶಾಲೆಯ ಆವರಣದಲ್ಲಿ ಕಾಲಿಡುತ್ತಿದ್ದಂತೆಯೇ ಹಸಿರು ಸಿರಿ ಸ್ವಾಗತ ನೀಡುತ್ತದೆ. ವನಸ್ಪತಿ, ವಿವಿಧ ಬಗೆಯ ಹೂವು, ಹಣ್ಣು, ಅಲಂಕಾರಿಕ ಗಿಡಗಳು ಬೆಳೆದು ನಿಂತಿದ್ದು, ಮಕ್ಕಳು ಪ್ರಕೃತಿಯ ಮಧ್ಯೆದಲ್ಲಿ ಆಟಪಾಠ ಕಲಿಯುತ್ತಿದ್ದಾರೆ

ಪ್ರಕೃತಿಯ ಮಧ್ಯೆದಲ್ಲಿ ಆಟ ಕೇಳುತ್ತಿರುವ ವಿದ್ಯಾರ್ಥಿಗಳು

ಪ್ರಕೃತಿಯ ಮಧ್ಯೆದಲ್ಲಿ ಆಟ ಕೇಳುತ್ತಿರುವ ವಿದ್ಯಾರ್ಥಿಗಳು

  • Share this:
ಚಿಕ್ಕೋಡಿ (ಜ.27) : ಶಿಕ್ಷಕರ ಸಮರ್ಪಣಾ ಮನೋಭಾವದ ಸೇವೆ ಮತ್ತು ಸಮುದಾಯದ ಸಹಕಾರ ಸಮ್ಮೀಳಿತಗೊಂಡರೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ಪರಿವರ್ತನೆ ಆಗಲು ಸಾಧ್ಯ ಎಂಬುದಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನಾಗರ ಮುನ್ನೋಳಿ ಗ್ರಾಮದ ಕಲ್ಮಡ ತೋಟದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಉತ್ತಮ ನಿದರ್ಶನವಾಗಿದೆ.

ಶಾಲೆಯ ಆವರಣದಲ್ಲಿ ಕಾಲಿಡುತ್ತಿದ್ದಂತೆಯೇ ಹಸಿರು ಸಿರಿ ಸ್ವಾಗತ ನೀಡುತ್ತದೆ. ವನಸ್ಪತಿ, ವಿವಿಧ ಬಗೆಯ ಹೂವು, ಹಣ್ಣು, ಅಲಂಕಾರಿಕ ಗಿಡಗಳು ಬೆಳೆದು ನಿಂತಿದ್ದು, ಮಕ್ಕಳು ಪ್ರಕೃತಿಯ ಮಧ್ಯೆದಲ್ಲಿ ಆಟಪಾಠ ಕಲಿಯುತ್ತಿದ್ದಾರೆ. ವಿಶೇಷವೆಂದರೆ ಬೇಸಿಗೆಯಲ್ಲಿ ಟ್ಯಾಂಕರ್ ನೀರು ಬಳಸಿ ಈ ಸಸಿಗಳನ್ನು ಜೋಪಾನ ಮಾಡಿದ್ದು, ಇಂದು ಗಿಡಗಳಾಗಿ ಬೆಳೆದು ನಿಂತಿವೆ.

ವಿವಿಧ ಹೆಸರಿನಲ್ಲಿ ತಂಡಗಳನ್ನಾಗಿ ಉದ್ಯಾನವನ್ನು ನಿರ್ಮಿಸಲಾಗಿದ್ದು, ಒಂದೊಂದು ಗುಂಪಿನ ಉದ್ಯಾನಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಜವಾಬ್ದಾರಿಯನ್ನು ಒಬ್ಬೊಬ್ಬ ಶಿಕ್ಷಕರು ನಿರ್ವಹಿಸುತ್ತಿದ್ದಾರೆ.

ಶಾಲೆಯು 2016-17 ಮತ್ತು 2018-19ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಹಸಿರು ಶಾಲೆ ಪ್ರಶಸ್ತಿಗೆ ಭಾಜನವಾಗಿದೆ. 2018-19ನೇ ಸಾಲಿನಲ್ಲಿ ಉತ್ತಮ ನಲಿ-ಕಲಿ ಶಾಲೆ ಪ್ರಶಸ್ತಿಯನ್ನೂ ಪಡೆದಿದೆ.

ಇನ್ನು ಗ್ರಾಮೀಣ 149 ಮಕ್ಕಳು ಶಿಕ್ಷಣ ಪಡೆಯುತ್ತಿರು ಈ ಶಾಲೆಯಲ್ಲಿ ಇಲ್ಲಿನ ಶಿಕ್ಷಕರು ಕಂಪ್ಯೂಟರ್ ತರಬೇತಿ ನೀಡುವ ಬಯಕೆಯನ್ನು ಹೋಂದಿದ್ದರೆ. ಆದರೆ, ವಿದ್ಯುತ್ ಸಮಸ್ಯೆಯಿಂದ ಅದು ಸಾದ್ಯ ವಾಗುತ್ತಿಲ್ಲ. ಶಾಲೆಗೆ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿದರೆ ಕಂಪ್ಯೂಟರ್ ಮತ್ತು ಪ್ರೊಜೆಕ್ಟರ್ ಮೂಲಕ ಮಕ್ಕಳಿಗೆ ಇನ್ನೂ ಹೆಚ್ಚಿನ ಅವಧಿಯಲ್ಲಿ ಶಿಕ್ಷಣ ನೀಡಬಹುದಾಗಿದೆ ಎಂದು ಶಾಲೆಯ ಶಿಕ್ಷಕರು ತಿಳಿಸುತ್ತಾರೆ

ಮುಖ್ಯ ಶಿಕ್ಷಕ ಸೇರಿದಂತೆ ಆರು ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಈಗ ನಾಲ್ವರು ಕಾಯಂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 2 ಹುದ್ದೆಗಳು ಖಾಲಿ ಇವೆ. ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಹೆಣ್ಣು ಮಕ್ಕಳಿಗಾಗಿ ಒಂದು ಶೌಚಾಲವಿದೆ. ಹೀಗಾಗಿ, ಹೆಚ್ಚುವರಿ ಶೌಚಾಲಯ ನಿರ್ಮಿಸಿಕೊಡಬೇಕು ಎನ್ನುವುದು ಬೇಡಿಕೆ ಯಾಗಿದೆ.

ಶಾಲೆಯ ಕಟ್ಟಡಗಳ ದುರಸ್ತಿ ಕಾರ್ಯದೊಂದಿಗೆ ಶೌಚಾಲಯಗಳ ನಿರ್ಮಾಣವನ್ನೂ ಮಾಡಿಸಲಾಗುವುದು. ಬೋರ್‌ವೆಲ್‌ ದುರಸ್ತಿಗೊಳಿಸಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯವರು ಆಟದ ಮೈದಾನ ನಿರ್ಮಿಸಿಕೊಡಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಚೌಗಲಾ ಹೇಳುತ್ತಾರೆ.

ಇದನ್ನೂ ಓದಿ : ಪೊಲೀಸ್ ಅಧಿಕಾರಿಯ ಪರಿಸರ ಪ್ರೇಮ: ರಾಯಚೂರು ಎಸ್​ಪಿಯಿಂದ 5 ಲಕ್ಷ ಮರ ಬೆಳೆಸಲು ಸಿದ್ದತೆ

ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಮರಗಳನ್ನ ಕಡಿದು ಪರಿಸರ ಹಾಳು ಮಾಡುವವರೆ ಜಾಸ್ತಿ ಆದರೆ, ಶಿಕ್ಷಕರು ತಮ್ಮ ಜೇಬಿನಿಂದ ಹಣ ಖರ್ಚು ಮಾಡಿ ಪರಿಸರ ಪ್ರೇಮವನ್ನ ಮೆರೆದಿದ್ದಾರೆ.

 (ವರದಿ : ಲೋಹಿತ್​ ಶಿರೋಳ)
First published: