Tumakuru Accident: ಹಬ್ಬಕ್ಕೆಂದು ಊರಿಗೆ ಬಂದಿದ್ದ ಮಗಳು-ಅಳಿಯ, ಮೊಮ್ಮಗನೂ ಮಸಣಕ್ಕೆ!

ಗುಳೇ ಹೋಗ್ತಿದ್ದ ಕಾರ್ಮಿಕರಿದ್ದ ಕ್ರೂಸರ್ ಅಪಘಾತ ಪ್ರಕರಣದಲ್ಲಿ ಕುರುಕುಂದಾ ಗ್ರಾಮದ ಒಂದೇ ಮನೆಯ ನಾಲ್ವರು ಸಾವನ್ನಪ್ಪಿದ್ದಾರೆ. ಸುಜಾತಾ, ಗಂಡ ಪ್ರಭು ಹಾಗೂ ಪುತ್ರ ವಿನೋದ್ ಸಾವನ್ನಪ್ಪಿದ್ದಾರೆ. ಇವರೆಲ್ಲಾ ಹಬ್ಬಕ್ಕೆಂದು ಮನೆಗೆ ಬಂದಿದ್ದರು. ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ತೆರಳುತ್ತಿದ್ದಾಗ ಮಗಳು ಸುಜಾತ, ಅಳಿಯ, ಮೊಮ್ಮಗನೂ ಸಾವನ್ನಪ್ಪಿದ್ದಾನೆ.

ತುಮಕೂರಿನಲ್ಲಿ ಭೀಕರ ಅಪಘಾತ

ತುಮಕೂರಿನಲ್ಲಿ ಭೀಕರ ಅಪಘಾತ

  • Share this:
ಇಂದು ಕರುನಾಡಿಗೆ ಕರಾಳ ಗುರುವಾರ. ಬೆಳಗ್ಗೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ (Kallambella, Tumakuru) ಸಮೀಪದ ಬಾಲೇನಹಳ್ಳಿ ಸಂಭವಿಸಿದ ಅಪಘಾತದಲ್ಲಿ (Tumakuru Accident) ಚಾಲಕ ಸೇರಿ 9 ಜನರು (People Death) ಸಾವನ್ನಪ್ಪಿದ್ದಾರೆ. ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ದಾರುಣ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಒಂದೇ ಕುಟುಂಬದ (Family) ನಾಲ್ವರು ಸಾವನ್ನಪ್ಪಿದ್ದಾರೆ. ಹಬ್ಬಕ್ಕೆಂದು (Festival) ಮನೆಗೆ ಬಂದು ವಾಪಸ್​ ತೆರಳುತ್ತಿದ್ದಾಗ ಮಗಳು-ಅಳಿಯ, ಮೊಮ್ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಸಾವನ್ನಪ್ಪಿರುವ 9 ಮಂದಿಯಲ್ಲಿ 6 ಮಂದಿ ನೇತ್ರದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಅಪಘಾತ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ (PM Narendra Modi) ಮೃತರ ಕುಟುಂಬ ಮತ್ತು ಗಾಯಾಳುಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ.

ಇಂದು ಬೆಳಗಿನ ಜಾವ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಸಮೀಪದ ಬಾಲೇನಹಳ್ಳಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಸ್ಥಳದಲ್ಲಿಯೇ 9 ಜನರು ಸಾವನ್ನಪ್ಪಿದ್ದು, 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಮತ್ತು ಶಿರಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

PM Narendra Modi pays condolences to families of those who died in Tumakuru road Accident mrq
ಅಪಘಾತಕ್ಕೊಳಗಾದ ವಾಹನ


ಹಬ್ಬಕ್ಕೆ ಬಂದಿದ್ದ ಮಗಳು-ಅಳಿಯ, ಮೊಮ್ಮಗ ದುರ್ಮರಣ!

ಗುಳೇ ಹೋಗ್ತಿದ್ದ ಕಾರ್ಮಿಕರಿದ್ದ ಕ್ರೂಸರ್ ಅಪಘಾತ ಪ್ರಕರಣದಲ್ಲಿ ಕುರುಕುಂದಾ ಗ್ರಾಮದ ಒಂದೇ ಮನೆಯ ನಾಲ್ವರು ಸಾವನ್ನಪ್ಪಿದ್ದಾರೆ. ಕುರುಕುಂದಾ ಗ್ರಾಮದ ಸಿದ್ದಣ್ಣ, ಸಿದ್ದಣ್ಣ ಅಕ್ಕ ಸುಜಾತಾ, ಸುಜಾತರ ಗಂಡ ಪ್ರಭು ಹಾಗೂ ಪುತ್ರ ವಿನೋದ್ ಸಾವನ್ನಪ್ಪಿದ್ದಾರೆ. ಇವರೆಲ್ಲಾ ಹಬ್ಬಕ್ಕೆಂದು ಮನೆಗೆ ಬಂದಿದ್ದರು. ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ತೆರಳುತ್ತಿದ್ದಾಗ ಮಗಳು ಸುಜಾತ, ಅಳಿಯ, ಮೊಮ್ಮಗನೂ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ತುಮಕೂರಿನ ಅಪಘಾತದಲ್ಲಿ 9 ಜನ ಬಲಿ; ಪ್ರಧಾನಿ ಸಂತಾಪ, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ

ಮಗ ಸಿದ್ದಣ್ಣ ಕೂಡ ದುರ್ಮರಣ

ಮಗಳು-ಅಳಿಯ ಜೊತೆ ಬೆಂಗಳೂರಿಗೆ ತೆರಳ್ತಿದ್ದ ಮಗ ಕೂಡ ಅಪಘಾತಕ್ಕೆ ಬಲಿಯಾಗಿದ್ದಾರೆ. ಮಯಸ್ಸಿಗೆ ಬಂದ ಮಗ ಸಿದ್ದಣ್ಣ ಸಾವನ್ನಪ್ಪಿದ್ದು ಒಂದೇ ಮನೆಯ ನಾಲ್ವರನ್ನ ಕಳೆದುಕೊಂಡು ಇಡೀ ಕುಟುಂಬ ಕಂಗಾಲಾಗಿದೆ. ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

9 ಮಂದಿಯಲ್ಲಿ 6 ಜನ ನೇತ್ರದಾನ, ಸಾವಿನಲ್ಲೂ ಸಾರ್ಥಕತೆ

ಅಪಘಾತಕ್ಕೆ 9 ಮಂದಿ ಸಾವನ್ನಪ್ಪಿದ್ದು ಇದರಲ್ಲಿ 6 ಮಂದಿ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಚಾಲಕ ಕೃಷ್ಣ, ಸಿದ್ದಯ್ಯಸ್ವಾಮಿ, ನಿಂಗಣ್ಣ, ಮೀನಾಕ್ಷಿ, ಸುಜಾತಾ, ಪ್ರಭುಸ್ವಾಮಿ ನೇತ್ರದಾನ ಮಾಡಿದ್ದಾರೆ. ಮೃತರ ನೇತ್ರದಾನ ಮಾಡಲು ಸ್ವತಃ ಕುಟುಂಬಸ್ಥರೇ ಒಪ್ಪಿಕೊಂಡಿದ್ದಾರೆ. ಆರಂಭದಲ್ಲಿ ನಮಗೆ ಕಣ್ಣುದಾನದ ಬಗ್ಗೆ ಗೊತ್ತಿರಲಿಲ್ಲ. ಸಾವಿನ ನೋವಿನಲ್ಲೂ ಕಣ್ಣುದಾನಕ್ಕೆ ಮುಂದಾಗಿರೋದು ಒಳ್ಳೆಯದು ಅಂತಾ ಮೃತ ಕೃಷ್ಣಪ್ಪನ ಚಿಕ್ಕಪ್ಪ ಹೇಳಿದ್ರು.

ಪ್ರಧಾನಿ ಮೋದಿ ಟ್ವೀಟ್

ಅಪಘಾತ ಸಂಬಂಧ ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಜೀವ ಕಳೆದುಕೊಂಡವರಿಗೆ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬದವರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಅಂತಾ ಹೇಳಿದ್ದಾರೆ.

ಟಯರ್ ಸವೆದಿದ್ದರಿಂದ ಬ್ಲಾಸ್ಟ್​​ಗೊಂಡು ಅಪಘಾತ

ಅಪಘಾತದ ತೀವ್ರಕ್ಕೆ ಕ್ರೂಸರ್ ಸಂಪೂರ್ಣ ನಜ್ಜುಗುಜ್ಜಾಗಿತ್ತು. AP21 TU8455 ನಂಬರಿನ ಕ್ರೂಸರ್​ನಲ್ಲಿದ್ದ ಎಲ್ಲರೂ ರಾಯಚೂರು ಜಿಲ್ಲೆಯ ಮೂಲದವರಾಗಿದ್ದಾರೆ. 12  ಜನ ಸಾಮರ್ಥ್ಯದ ವಾಹನದಲ್ಲಿ 20 ಜನರು ಪ್ರಯಾಣಿಸುತ್ತಿದ್ದರು. ಟಯರ್ ಸವೆದಿದ್ದರಿಂದ ಬ್ಲಾಸ್ಟ್​​ಗೊಂಡು ಡಿವೈಡರ್​ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ: 9 ಜನರನ್ನು ಬಲಿ ಪಡೆದ ಭೀಕರ ಅಪಘಾತಕ್ಕೆ ಇದೇ ಕಾರಣ

ಕ್ರೂಸರ್ ವಾಹನದ ಅಪಘಾತ ಸಂಭವಿಸುತಿದ್ದಂತೆ ಎಚ್ಚೆತ್ತ ಕಳ್ಳಂಬೆಳ್ಳ ಪೊಲೀಸರು, ಯಾದಗಿರಿ ರಾಯಚೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಇತರೇ ಕ್ರೂಸರ್ ವಾಹನ ತಡೆದರು. ಒಟ್ಟು 5 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಐದು ವಾಹನಗಳ ಸ್ಥಿತಿ ಸರಿ ಇರಲಿಲ್ಲ. ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು.
Published by:Thara Kemmara
First published: