• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BJPಗೆ ಬೆಂಬಲ ನೀಡಿದ್ರೆ ಅದು ಪುಣ್ಯದ ಕೆಲಸ: ಅರುಣ್ ಪುತ್ತಿಲ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿ

BJPಗೆ ಬೆಂಬಲ ನೀಡಿದ್ರೆ ಅದು ಪುಣ್ಯದ ಕೆಲಸ: ಅರುಣ್ ಪುತ್ತಿಲ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿ

ಅರುಣ್ ಕುಮಾರ್ ಪುತ್ತಿಲ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್

ಅರುಣ್ ಕುಮಾರ್ ಪುತ್ತಿಲ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್

Arun Kumar Puthila: ನಿಮ್ಮ ಅಸ್ತಿತ್ವ ಬಿಜೆಪಿಯಲ್ಲಿರೋದು. ಪಕ್ಷ ತೊರೆದ್ರೆ ನಿಮ್ಮ ಅಸ್ತಿತ್ವ ಇರಲ್ಲ. ಪುತ್ತಿಲರೇ ನಿಮ್ಮ ಅಸ್ತಿತ್ವ ಎಲ್ಲಿದೆ ಎಂದು ಕೇಳಿದರು.

  • Share this:

ಮಂಗಳೂರು: ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ (Arun Kumar Puthila) ಮತ್ತೆ ವಿರುದ್ಧ ಮತ್ತೊಮ್ಮೆ ಆರ್​​​ಎಸ್​​ಎಸ್ ಮುಖಂಡ (RSS Leader) ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ವಾಗ್ದಾಳಿ ನಡೆಸಿದ್ದಾರೆ. ಅರುಣ್ ಪುತ್ತಿಲರ ಗ್ರಾಮದಲ್ಲಿ ನಡೆದ ಮಾತೃ ಪೂಜನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭಾಕರ್ ಭಟ್, ಹಿಂದುತ್ವದ ನಿಜವಾದ ಅರ್ಥದಲ್ಲಿ ಇರೋದು ಬಿಜೆಪಿ ಮಾತ್ರ. ಬಿಜೆಪಿ ಪಕ್ಷಕ್ಕೆ ಬೆಂಬಲ‌ ಮಾಡಿದ್ರೆ ಅದು ಪುಣ್ಯದ ಕೆಲಸ, ಇಲ್ಲಂದ್ರೆ ಪಾಪದ ಕೆಲಸ ಎಂದು ಪ್ರಭಾಕರ್ ಭಟ್ ಹೇಳಿದರು.


ಬಿಜೆಪಿ ಸದಸ್ಯರು ಯರಾದ್ರೂ ತಪ್ಪು ಮಾಡಿದ್ರೆ ಅವರನ್ನ ಕೇಳೋರು ಇದ್ದಾರೆ. ತಪ್ಪಾಗಿದ್ರೆ ಅವರನ್ನ ತಿದ್ದಿ ಸರಿಯಾಗಿ ಹೋಗೋ ಅಂತ ಹೇಳೋಕೆ ಪಕ್ಷ ಇದೆ. ಆದ್ರೆ ಸ್ವತಂತ್ರ ಅಭ್ಯರ್ಥಿಯನ್ನ ಪ್ರಶ್ನೆ ಮಾಡೋಕೆ ಯಾರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.


ಯಾವ ಆಧಾರದಿಂದ ಗೆಲ್ಲುತ್ತೀರಿ?


ಸ್ವತಂತ್ರವಾಗಿ ಇದ್ದವರಿಗೆ ಯಾವುದೇ ಅಸ್ತಿತ್ವ ಇರೋದಿಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ವಿರುದ್ಧ ವಾಗ್ದಾಳಿ ನಡೆಸಿದ ಪ್ರಭಾಕರ್ ಭಟ್, ಇದೆಂತಹ ದೌರ್ಭಾಗ್ಯ ಬಂದಿದೆ ಇಂತವರಿಗೆ, ಅವರಿಗೆ ನಾನು ಗೆಲ್ಲಬೇಕು ಎಂಬುದು ಇದೆ, ಯಾರ ಆಧಾರದಿಂದ ಗೊತ್ತಾ?  ಮೋದಿ, ಅಮಿತ್ ಶಾ, ಯೋಗಿ ಅವರ ಆಧಾರದಿಂದ ಗೆಲ್ಲಬೇಕು ಅನ್ನೋ ಮನಸ್ಸಿದೆ. ಎಂತ ದೌರ್ಭಾಗ್ಯ ಬಂದಿದೆ ಎಂದು ವ್ಯಂಗ್ಯ ಮಾಡಿದರು.


ಅರುಣ್‌ಕುಮಾರ್‌ ಪುತ್ತಿಲ, ಬಿಜೆಪಿ ಬಂಡಾಯ ಅಭ್ಯರ್ಥಿ


ಪುತ್ತಿಲರೇ ನಿಮ್ಮ ಅಸ್ತಿತ್ವ ಎಲ್ಲಿದೆ?


ಅರುಣ್ ಕುಮಾರ್ ಪುತ್ತಿಲ ಅವರೇ ನೀವು ಮೋದಿ, ಅಮಿತ್ ಶಾ, ಯೋಗಿಯವರನ್ನ ವಿರೋಧಿಸಿ ಅವರ ಹೆಸರಿನಲ್ಲಿಯೇ ಮತ ಕೇಳುತ್ತಿದ್ದೀರಿ. ನಿಮ್ಮ ಅಸ್ತಿತ್ವ ಬಿಜೆಪಿಯಲ್ಲಿರೋದು. ಪಕ್ಷ ತೊರೆದ್ರೆ ನಿಮ್ಮ ಅಸ್ತಿತ್ವ ಇರಲ್ಲ. ಪುತ್ತಿಲರೇ ನಿಮ್ಮ ಅಸ್ತಿತ್ವ ಎಲ್ಲಿದೆ ಎಂದು ಕೇಳಿದರು.


ಇದನ್ನೂ ಓದಿ:  Arun Kumar Puthila: ಕರಾವಳಿಯಲ್ಲಿ ಬಿಜೆಪಿಗೆ ಪುತ್ತೂರು ಕಬ್ಬಿಣದ ಕಡಲೆ ಆಗುತ್ತಾ?




ಯಾವ ಹಿಂದುತ್ವ ದೊಡ್ಡದು?


ಪಕ್ಷೇತರರಾಗಿ ಸ್ಪರ್ಧೆ ಮಾಡುವ ಮುನ್ನ ನೀವೂ ಯೋಚನೆ ಮಾಡಬೇಕಿತ್ತು, ಇದು ನಿಮಗೆ ನಾಚಿಕೆ ಅಲ್ಲವಾ? ನೀವು ಈಗಲೇ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದು, ಮುಂದೆ ಹೇಗೆ? ಬಿಜೆಪಿಯ ಹಿಂದುತ್ವ ದೊಡ್ಡದಾ? ಸಂಘದ ಹಿಂದುತ್ವ‌ ದೊಡ್ಡದಾ? ಅಥವಾ ವ್ಯಕ್ತಿಯ ಹಿಂದುತ್ವ ದೊಡ್ಡದಾ ಅನ್ನೋದನ್ನ ಜನ ತೀರ್ಮಾನಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

First published: