HOME » NEWS » State » KALLADKA PRABHAKAR SPEECH IN RSS RALLY RAMNAGAR MAK

ಈ ದೇಶ ಕ್ರಿಸ್ತನದ್ದೋ ಪೈಗಂಬರನದ್ದೋ ಅಲ್ಲ, ಕೃಷ್ಣನದು; ಕಲ್ಲಡ್ಕ ಪ್ರಭಾಕರ್

ಕೆಲವರು ಇಲ್ಲೇ ಇದ್ದುಕೊಂಡು ಪಾಕಿಸ್ತಾನಕ್ಕೆ ಜೈ ಅಂತಾರೆ, ಆದರೆ, ಇವರು ಪಾಕಿಸ್ತಾನಕ್ಕೆ ಮಾತ್ರ ಹೋಗಲ್ಲ. ಯಾಕೆಂದರೆ ಮುಸಲ್ಮಾನರು ಅತ್ಯಂತ ಸಂತೋಷವಾಗಿ ಬದುಕುತ್ತಿರುವುದು ಭಾರತದಲ್ಲಿ ಮಾತ್ರ ಎಂದು ಕಲ್ಲಡ್ಕ ಪ್ರಭಾಕರ್​ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:February 9, 2020, 7:08 PM IST
ಈ ದೇಶ ಕ್ರಿಸ್ತನದ್ದೋ ಪೈಗಂಬರನದ್ದೋ ಅಲ್ಲ, ಕೃಷ್ಣನದು; ಕಲ್ಲಡ್ಕ ಪ್ರಭಾಕರ್
ಕಲ್ಲಡ್ಕ ಪ್ರಭಾಕರ್ ಭಟ್
  • Share this:
ರಾಮನಗರ (ಫೆಬ್ರವರಿ 09 ); ಈ ದೇಶದ 130 ಕೋಟಿ ಜನರೂ ಸಹ ಹಿಂದೂಗಳೇ, ಇವರೆಲ್ಲ ಯಾರದ್ದೋ ಭಯಕ್ಕೆ ಬೇರೇನೋ ಆಸೆಗೆ ಮತಾಂತರವಾಗಿದ್ದಾರೆ. ಆದರೆ, ಎಂದಿಗೂ ಈ ದೇಶವನ್ನು ಕ್ರಿಶ್ಚಿಯನ್ ದೇಶವಾಗಿಸಲು ಸಾಧ್ಯವೇ ಇಲ್ಲ. ಇದು ಕ್ರಿಸ್ತ ಅಥವಾ ಪೈಗಂಬರನ ದೇಶವಲ್ಲ ಬದಲಾಗಿ ಕೃಷ್ಣನ ದೇಶ ಎಂದು ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಹೇಳಿದ್ದಾರೆ.

ರಾಮನಗರದಲ್ಲಿ ಇಂದು ಆರ್​ಎಸ್​ಎಸ್​ ಪಥಸಂಚಲನ ನಡೆಸಿ ನಂತರ ಮಾತನಾಡಿರುವ ಕಲ್ಲಡ್ಕ ಪ್ರಭಾಕರ್, “ಮುನೇಶ್ವರ ಸ್ವಾಮಿಯ ಕಲ್ಲಿನ ಮೇಲೆ ಕಲ್ಲುಗಳನ್ನು ಹಾಕಿ ಏಸುವಿನ ಶಿಲುಬೆ ನಿಲ್ಲಿಸಲು ಕೆಲವರು ಹಾತೊರೆಯುತ್ತಿದ್ದಾರೆ. ಈಗಾಗಲೇ 13 ಅಡಿ ಎತ್ತರದಲ್ಲಿ ನಿಲ್ಲಿಸಲಾಗಿರುವ ಏಸುವಿನ ಶಿಲೆಯನ್ನು ಭವಿಷ್ಯದಲ್ಲಿ 114 ಅಡಿ ಎತ್ತರಕ್ಕೆ ಏರಿಸಲು ಹೊರಟಿದ್ದಾರೆ.

ಪಕ್ಕದಲ್ಲಿನ ಕೆರೆಯನ್ನು ಫಾದರಿ ಕೆರೆ ಅಂತಾರೆ. ಆದರೆ, ಅಲ್ಲಿ ಯಾವ ಫಾದರಿ ಬಿದ್ದು ಸತ್ತನೋ ನನಗಂತೂ ಗೊತ್ತಿಲ್ಲ. ಮತಾಂತರ ಈ ದೇಶದ ಅತಿದೊಡ್ಡ ಪಿಡುಗು. ವಿವಿಧ ಕಾರಣದಿಂದಾಗಿ ಈ ದೇಶದ ಅನೇಕ ಜನರನ್ನು ಮತಾಂತರ ಮಾಡಲಾಗಿದೆ. ಆದರೆ, ಇದು ಕ್ರಿಸ್ತ, ಪೈಗಂಬರನ ದೇಶವಲ್ಲ ಬದಲಾಗಿ ಕೃಷ್ಣನ ದೇಶ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು” ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.

“ಕೆಲವರು ಇಲ್ಲೇ ಇದ್ದುಕೊಂಡು ಪಾಕಿಸ್ತಾನಕ್ಕೆ ಜೈ ಅಂತಾರೆ, ಆದರೆ, ಇವರು ಪಾಕಿಸ್ತಾನಕ್ಕೆ ಮಾತ್ರ ಹೋಗಲ್ಲ. ಯಾಕೆಂದರೆ ಮುಸಲ್ಮಾನರು ಅತ್ಯಂತ ಸಂತೋಷವಾಗಿ ಬದುಕುತ್ತಿರುವುದು ಭಾರತದಲ್ಲಿ ಮಾತ್ರ. ಎಲ್ಲಾ ಸಮುದಾಯಗಳನ್ನ ಒಪ್ಪಿ, ಅಪ್ಪಿಕೊಳ್ಳುವ ಸಮಾಜ ಅದು ಹಿಂದೂ ಸಮಾಜ. ದೇಶದ ಲಕ್ಷ ಲಕ್ಷ ಮಸೀದಿಗಳು, ಚರ್ಚ್ ಗಳಿಗೆ ನಾವು ಭೂಮಿ ಕೊಟ್ಟಿದ್ದೇವೆ. ಆದರೂ ಹಿಂದೂ ಸಮಾಜ ಜಾತ್ಯಾತೀತ ವಿರೋಧಿನಾ" ಎಂದು ಕಲ್ಲಡ್ಕ ಪ್ರಭಾಕರ್​ ಪ್ರಶ್ನಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಿಎಎ ಪರವಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ್, “ನೆರೆ ರಾಷ್ಟ್ರದಲ್ಲಿ ಕೋಮುವಾದಿಗಳಿಂದ ಹಿಂಸೆ ಅನುಭವಿಸಿದ ಜನರಿಗೆ ನ್ಯಾಯ ನೀಡುವ ಸಲುವಾಗಿ ಸಿಎಎ ಜಾರಿಗೆ ತರಲಾಗಿದೆ. ಇದು ಪೌರತ್ವ ನೀಡುವ ಕಾಯ್ದೆಯೇ ವಿನಃ ಯಾರ ಪೌರತ್ವವನ್ನೂ ಕಸಿಯಲಾಗುವುದಿಲ್ಲ” ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ತೀರ್ಪನ್ನು ನಾನು ಖಂಡಿಸುತ್ತೇನೆ; ಅಸಮಾಧಾನ ಹೊರಹಾಕಿದ ಖರ್ಗೆ
Youtube Video
First published: February 9, 2020, 7:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories