Kalladka Prabhakar Bhat: ದೇಶ ವಿಭಜನೆಗೆ ಗಾಂಧಿ, ನೆಹರೂ ಕಾರಣ; ಕಲ್ಲಡ್ಕ ಪ್ರಭಾಕರ್ ಭಟ್​

ಕಲ್ಲಡ್ಕ ಪ್ರಭಾಕರ್ ಭಟ್

ಕಲ್ಲಡ್ಕ ಪ್ರಭಾಕರ್ ಭಟ್

ರಾವಣ ಬ್ರಾಹ್ಮಣ ಸಮಾಜಕ್ಕೆ ಸೇರಿದ ರಾಕ್ಷಸ. ಹಾಗೆಂದು ಬ್ರಾಹ್ಮಣರ್ಯಾರು‌ ಆತನನ್ನು ಸಮರ್ಥಿಸಿಕೊಂಡಿಲ್ಲ. ಆತನ ಹೆಸರನ್ನು ಮಕ್ಕಳಿಗೆ ಇಟ್ಟಿಲ್ಲ.

  • Share this:

ದೇಶಕ್ಕೋಸ್ಕರ ಸೇವೆ ಮಾಡಿದ RSS ದೇಶದ್ರೋಹಿ, ನಪುಂಸಕ ಆಗೋದು ಹೇಗೆ? ದೇಶದ್ರೋಹಿ, ನಪುಂಸಕ ಹೇಳೋದಕ್ಕೆ ಇನ್ನೇನು ಅರ್ಥ ಇದೆ ಎಂದು RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (RSS Leader Kalladka Prabhakar Bhat) ಪ್ರಶ್ನೆ ಮಾಡಿದ್ದಾರೆ. ದೇಶದ ಎಲ್ಲಿಯೇ ಅವಘಡ ಆದರೂ ಸಂಘದ ಕಾರ್ಯಕರ್ತರು (RSS Activist) ಅಲ್ಲಿ ಮೊದಲು ಹಾಜರಾಗಾಗುತ್ತಾರೆ. ನೆರೆ (Flood), ಬರ (Drought) ಹೀಗೆ ಎಲ್ಲಾ ಸಮಯದಲ್ಲೂ ಸೇವಾ ಕಾರ್ಯ ಮಾಡುತ್ತದೆ. ಕಾಂಗ್ರೆಸ್ (Congress) ನಲ್ಲಿದ್ದಾಗ ಸಿ.ಎಂ.ಇಬ್ರಾಹಿಂ (CM Ibrahim) ಕೂಡಾ RSS ಅನ್ನು ಹೊಗಳಿದ್ದಾರೆ. ದೇಶವನ್ನು ಪ್ರೀತಿಸುವ RSS ದೇಶದ್ರೋಹಿ, ನಪುಂಸಕ ಸಂಘಟನೆ ಹೇಗಾಗುತ್ತದೆ ಎಂದು ಮಾಜಿ ಸಿಎಂ ಸಿದ್ದಾರಾಮಯ್ಯರ (Former CM Siddaramaiah) ಹೇಳಿಕೆಗೆ ಪ್ರತಿಕ್ರಿಯಿಸಿದರು.


RSS ದಿನನಿತ್ಯ ಭಾರತ್ ಮಾತಾ ಕಿ ಜೈ ಹೇಳುತ್ತೆ. ಆದರೆ ಕಾಂಗ್ರೆಸ್ ಕೇವಲ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಮಾತ್ರ ಧ್ವಜ ಹಿಡಿದು ಭಾರತ್ ಮಾತಾ ಕಿ ಜೈ ಹೇಳಿರೋದು. ಕಾಂಗ್ರೆಸ್ ಇಟಲಿಗೆ, ಇನ್ಯಾರಿಗೋ ಜೈ ಹೇಳುವ ಪಕ್ಷವಾಗಿದೆ.


ದೇಶವನ್ನು ವಿಭಜನೆ ಮಾಡಿ ಇಂದಿಗೂ ದೇಶಕ್ಕೆ ದೊಡ್ಡ ಗಂಡಾಂತರ ತಂದೊಡ್ಡಿದ್ದು ಯಾರು. ದೇಶ ವಿಭಜನೆಗೆ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಜವಹಾರಲಾಲ್ ನೆಹರು ಕಾರಣ ಎಂದು ಆರೋಪಿಸಿದರು. ಈ ಕಾರಣಕ್ಕಾಗಿಯೇ ಇಂದು ದೇಶದ ಒಳಗೆ ಮತ್ತು ಹೊರಗೆ ಪಾಕಿಸ್ತಾನಕ್ಕೆ ಜೈ ಘೋಷಣೆ ಕೂಗಲಾಗುತ್ತಿದೆ ಎಂದರು.


ದೇಶದಲ್ಲಿರುವ ಮುಸ್ಲಿಮರು ನಮ್ಮವರೇ


ದೇಶದ ಮುಸಲ್ಮಾನರು ಹಿಂದಿನವರೊಂದಿಗೆ ತಮ್ಮನ್ನು ಜೋಡಿಸಿಕೊಳ್ಳಬಾರದು, ದೇಶದಲ್ಲಿ ಇರುವ ಮುಸಲ್ಮಾನರೆಲ್ಲಾ ನಮ್ಮವರೇ. ದೇಶದ ಮುಸ್ಲಿಮರು ಯಾವುದೋ‌ ಸಂದರ್ಭದಲ್ಲಿ ‌ಇಸ್ಲಾಂ ಅನ್ನು ಸ್ವೀಕರಿಸಿದವರು. ಇದಕ್ಕೆ ನಮ್ಮ ತಕರಾರಿಲ್ಲ ದೇಶವನ್ನು ಆಳಿದ ವಿದೇಶಿ ಮುಸಲ್ಮಾನ ರಾಜರು ದೇವಸ್ಥಾನಗಳನ್ನು ಕೆಡವಿ ಮಸೀದಿ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ:  B C Nagesh: ನಾಡಗೀತೆಗೆ ಅಪಮಾನ; ನಿರ್ಮಲಾನಂದನಾಥ ಸ್ವಾಮೀಜಿ ಪತ್ರ, ಆದಿಚುಂಚನಗಿರಿ ಮಠಕ್ಕೆ ಸಚಿವ ಬಿ ಸಿ ನಾಗೇಶ್ ದೌಡು


ರಾವಣ ಬ್ರಾಹ್ಮಣ ಸಮಾಜಕ್ಕೆ ಸೇರಿದ ರಾಕ್ಷಸ


ಇದೀಗ ಈ ದೇವಸ್ಥಾನಗಳ ಅಸ್ತಿತ್ವ ಬೆಳಕಿಗೆ ಬರುತ್ತಿದೆ. ಈ ಸಮಯದಲ್ಲಿ ದೇಶದ ಮುಸಲ್ಮಾನರು ವಿದೇಶೀ ಮುಸಲ್ಮಾನರ ದೌರ್ಜನ್ಯವನ್ನು ಸಮರ್ಥಿಸಬಾರದು. ರಾವಣ ಬ್ರಾಹ್ಮಣ ಸಮಾಜಕ್ಕೆ ಸೇರಿದ ರಾಕ್ಷಸ. ಹಾಗೆಂದು ಬ್ರಾಹ್ಮಣರ್ಯಾರು‌ ಆತನನ್ನು ಸಮರ್ಥಿಸಿಕೊಂಡಿಲ್ಲ. ಆತನ ಹೆಸರನ್ನು ಮಕ್ಕಳಿಗೆ ಇಟ್ಟಿಲ್ಲ. ವಿದೇಶೀ ಮುಸ್ಲಿಂ ರಾಜರೂ‌ ಇದೇ ವರ್ಗಕ್ಕೆ ಸೇರಿದವರು. ಮಸೀದಿಗಳಲ್ಲಿ ದೇವಸ್ಥಾನ ಪತ್ತೆಯಾದರೆ ಅದನ್ನು ಸೌಹಾರ್ದದ ಮೂಲಕ ಬಗೆಹರಿಸಿಕೊಳ್ಳಬೇಕು. ಸಂಘರ್ಷದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅಬ್ದುಲ್ ಕಲಾಂ, ಸುಪ್ರೀಂಕೋರ್ಟ್ ನ್ಯಾಯಾಧೀಶ ಅಬ್ದುಲ್ ನಜೀರ್ ಶ್ರೇಷ್ಟತೆ ಮೆರೆದವರು.


ರೋಹಿತ್ ಚಕ್ರತೀರ್ಥ ಪೋಸ್ಟಿಗೆ ಬಿ ಸಿ ನಾಗೇಶ್ ಸ್ಪಷ್ಟನೆ


ಇನ್ನೂ ಪಠ್ಯಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ಪೋಸ್ಟ್ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿದ್ದಾರೆ. 2017 ರಲ್ಲಿ ನಡೆದ ಘಟನೆಯೊಂದನ್ನು ಈಗ ಮಾತನಾಡತ್ತಿದ್ದಾರೆ. ವಾಟ್ಸಪ್ ನಲ್ಲಿ ಬಂದಿರೋ ಸಂದೇಶವನ್ನು ಶೇರ್ ಮಾಡಲಾಗುತ್ತಿದ್ದು, ಇದಕ್ಕೆ ಈಗಾಗಲೇ ಸ್ಪಷ್ಟನ ಸಹ ನೀಡಲಾಗಿದೆ. ಅಂದು ಈ ಬಗ್ಗೆ ಉನ್ನತಮಟ್ಟದ ತನಿಖೆ ಆಗಿ, ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಸರ್ಕಾರವೇ ಬಿ ರಿಪೋರ್ಟ್ ಸಲ್ಲಿಸಿದೆ. ರೋಹಿತ್ ಚಕ್ರತೀರ್ಥ ನಿರ್ದೋಷಿ ಅನ್ನೋದನ್ನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಹೇಳಲಾಗಿದೆ


ಚಕ್ರತೀರ್ಥ ಆರ್ ಎಸ್ ಎಸ್ ಹುಡುಗ ಅಂತ ವಿರೋಧ ಮಾಡಲಾಗಿತ್ತು. ನನಗೂ ಇದಕ್ಕೂ ಸಂಬಂಧ ಇಲ್ಲ ಅಂತ ಚಕ್ರತೀರ್ಥ ಸ್ಪಷ್ಟವಾಗಿ ಹೇಳಿದ್ದಾರೆಅದನ್ನ ಯಾರು ಬರೆದಿದ್ದಾರೊ ಅವರ ಮೇಲೆ ಆಕ್ಷನ್ ತಗೊಬೇಕು, ಈ ಬಗ್ಗೆ ಸಿಎಂ ಗಮನಕ್ಕೆ ತರುತ್ತೇನೆ.


ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ


ನಾಡಗೀತೆಗೆ ಅವಮಾನ ಆಗಿದೆ ಅನ್ನೋದು ನಿರ್ಮಲಾನಂದ ಸ್ವಾಮೀಜಿಗಳ ಮನಸ್ಸಿನಲ್ಲಿತ್ತು.  ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಅಂತ ಶ್ರೀ ಗಳು ಹೇಳಿದ್ದಾರೆ. ಮೂಲದಲ್ಲಿ ನಾಡಗೀತೆಗೆ ಅವಮಾನ ಮಾಡಿದವರಿಗೆ ಶಿಕ್ಷೆ ಆಗಲಿ ಅನ್ನೋದು ನಿರ್ಮಲಾನಂದ ಶ್ರೀಗಳ ಅಭಿಪ್ರಾಯ. ಈ ಬಗ್ಗೆ ನಾನು ಸಿಎಂ ಗಮನಕ್ಕೆ ತಂದು ತನಿಖೆಗೆ ಮನವಿ ಮಾಡಿಸುತ್ತೇನೆ. ಈಗ ಈ ವಿಚಾರ ಇಟ್ಟುಕೊಂಡು ರೋಹಿತ್ ಚಕ್ರತೀರ್ಥ ಬಗ್ಗೆ ವಿರೋಧ ಮಾಡುವುದು ಸರಿಯಲ್ಲ.


ಈ ವಿಚಾರ ಅನಗತ್ಯ


ಹಂಪಾ ನಾಗರಾಜಯ್ಯ ಸೇರಿ ಹಿರಿಯ ಸಾಹಿತಿಗಳು ಯಾಕೆ ಹೀಗೆ ಮಾಡ್ತಿದ್ದಾರೋ ಗೊತ್ತಿಲ್ಲ. ನನಗೆ ಅವರ ಬಗ್ಗೆ ಅಪಾರ ಗೌರವ ಇದೆ. ಪಠ್ಯಪುಸ್ತಕ ಪರಿಷ್ಕರಣೆ ಮುಗಿದೋಗಿದೆ, ಪ್ರಿಂಟ್ ಕೂಡ ಆಗೋಗಿದೆ, ಆ ಸಮಿತಿಯ ಕೆಲಸವೂ ಮುಗಿದೋಗಿದೆ. ಹೀಗಾಗಿ ಈಗ ಆ ವಿಚಾರ ಚರ್ಚೆ ಅನಗತ್ಯ.


ಇದನ್ನೂ ಓದಿ:  Chitradurga: ಸಿದ್ದರಾಮಯ್ಯ ಬುದ್ದಿವಂತರು, ಕದ್ದು ತಿಂದರೂ ಯಾರಿಗೂ ಗೊತ್ತಾಗದಂತೆ ತಿನ್ನುತ್ತಾರೆ ಎಂದ ನಳಿನ್ ಕುಮಾರ್


ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ


ಅಂದು ಕುವೆಂಪು ಅವರಿಗೆ ಅವಮಾನ ಆದಾಗ ಕೇಳಲಿಲ್ಲ. ಪಠ್ಯ ತೆಗೆದಾಗ ಕೇಳಲಿಲ್ಲ, 7 ನೇ ತರಗತಿ ಮಕ್ಕಳಿಗೆ ಸೆಕ್ಸ್ ಎಜುಕೇಶನ್ ಕೊಟ್ಟಾಗ ಕೇಳಲಿಲ್ಲ ಈಗ್ಯಾಕೆ ಕೇಳ್ತಿದ್ದಾರೆ . ಇವರಿಗೆ ಹಿಂದುತ್ವ, ರಾಷ್ತ್ರೀಯತೆ, ಬಿಜೆಪಿಯನ್ನ ತೆಗಳುವುದೇ ಕೆಲಸ ಅದನ್ನ‌ಮಾಡ್ತಿದ್ದಾರೆ ಅಷ್ಟೇ . ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ ಮಾಡಲಿ, ಅವರ ತಪ್ಪು ಅರಿವಾದಾಗ ಸುಮ್ಮನಾಗ್ತಾರೆ. ಇದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರ ಇದೆ ಎಂದು ಆರೋಪಿಸಿದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು